ದಾವಣಗೆರೆ:ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಅಧಿಕಾರದಲ್ಲಿದ್ದಾಗ ಜನಪರವಾದ ಮತ್ತು ಅಭಿವೃದ್ಧಿ ಪರ ಕೆಲಸಮಾಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಇವತ್ತಿಗೂ ಕೂಡಾ ಜೆಡಿಎಸ್ ಕಾರ್ಯಕರ್ತರು ಅಧಿಕಾರ ವಿದ್ದಾಗ ಮತ್ತು ಅಧಿಕಾರ ಇಲ್ಲದಿದ್ದಾಗಲೂ ಸಹ ಪಕ್ಷದ ವರಿಷ್ಠರ ಕಡೆಗನಿಸಿದರೂ ಕೂಡಾ ಜೆಡಿಎಸ್ ಅಡಿಯಲ್ಲೇ ಗುರುತಿಸಿಕೊಂಡು ಜನಪರ ಕೆಲಸಗಳಲ್ಲಿ ಇವತ್ತಿಗೂ ಮಗ್ನರಾಗಿದ್ದು ಜೆಡಿಎಸ್ ಕಾರ್ಯಕರ್ತರ ಪಕ್ಷ ನಿಷ್ಠೆಗೆ ಸಾಕ್ಷಿ.ಅದರಲ್ಲಿ ವಿಶೇಷ ವಾಗಿ ಸೇವಾದಳ ವಿಭಾಗವು ಅತ್ಯಂತ ಸಕ್ರೀಯವಾಗಿದ್ದು ಪ್ರತಿ ನಿತ್ಯ ಪ್ರತಿ ಜಿಲ್ಲೆ ತಾಲೂಕುಮಟ್ಟದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು ಹಗಲು ರಾತ್ರಿ ಎನ್ನದೆ ಪಕ್ಷದ ಹೆಸರಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಿರುವುದು ಗಮನಾರ್ಹವಾದದ್ದು.
ಜನತಾದಳ ಜಾತ್ಯತೀತ ಪಕ್ಷದ ಸೇವಾದಳ ವಿಭಾಗವು ಶ್ರೀ ಬಿಎನ್ ಬಸವರಾಜ್ ಪಾದಯಾತ್ರಿಯವರ ಅಧ್ಯಕ್ಷತೆಯಲ್ಲಿ ಬಹಳ ಪಕ್ಷನಿಷ್ಠೆಯಲ್ಲಿ ಅಂದಿನಿಂದ ಇಂದಿನವರೆಗೂ ಯಾವುದೇ ಫಲಾಪೇಕ್ಷೆಯಿಲ್ಲದೆ ಪಕ್ಷದ ಮಾತೃಘಟಕದ ನಿರ್ಲಕ್ಷದ ಮಧ್ಯವೂ ಎದೆಗುಂದದೆ ಸೇವಾದಳ ಘಟಕವನ್ನು ಮುನ್ನಡೆಸುತ್ತಿದ್ದಾರೆ.ಶ್ರೀ ಬಿಎನ್ ಬಸವರಾಜ್ ರವರು ಪಡುತ್ತಿರುವ ಪಕ್ಷ ಸಂಘಟನೆಯನ್ನು ನಿಸ್ವಾರ್ಥ ದಿಂದ ಮಾಡುತ್ತಿರುವುದನ್ನು ಮಾತೃಘಟಕವು ಗಮನಿಸಿ ಬೆನ್ನು ತಟ್ಟಿದ್ದರೆ ಪ್ರತಿ ಜಿಲ್ಲೆಗೆ ಒಂದು ಶಾಸಕ ಸ್ಥಾನವನ್ನು ಗೆಲ್ಲಬಹುದಾಗಿತ್ತು.ಬಸವರಾಜ್ ರವರಿಗೆ ಈ ಪಕ್ಷದಲ್ಲಿ ಅಷ್ಟೊಂದು ಸ್ಥಾನ ಮಾನಗಳು ಸಿಗದಿದ್ದರೂ ಸಹ ಅವರು ಪಕ್ಷದ ವರಿಷ್ಠರ ಬಗ್ಗೆ ಯಾವುದೇ ಅಪಸ್ವರ ಎತ್ತದಿರುವುದು ಅವರ ದೊಡ್ಡ ಗುಣ.ಜೆಡಿಎಸ್ ಪಕ್ಷದಲ್ಲಿ ಆಯಾರಾಮ್ ಗಯಾರಾಮ್ ಗಳಿಗೆ ಮತ್ತು ಕುಟುಂಬದವರಿಗೆ ಕೊಡುತ್ತಿರುವ ಸ್ಥಾನಮಾನ ಗಳು ಸೇವಾದಳದ ರಾಜ್ಯ ಅಧ್ಯಕ್ಷರಿಗೆ ಕೊಟ್ಟಿದ್ದರೆ ಪಕ್ಷ ಸಂಘಟನೆಗೆ ವಿಶೇಷ ಮಹತ್ವ ಬರುತಿತ್ತು.ಬಸವರಾಜ ಪಾದಯಾತ್ರಿಯವರು ಬಹಳ ಸರಳ,ರಾಜಕೀಯ ಪ್ರಜ್ಞಯುಳ್ಳವರು ಮತ್ತು ವಿಚಾರವಂತರು ಸಂಘಟಕರು,ಜನಾನುರಾಗಿಗಳು,ಸ್ನೇಹಜೀವಿ ಇವತ್ತಿಗೂ ಪ್ರತಿ ಜಿಲ್ಲೆಗಳಲ್ಲಿ ಸೇವಾದಳ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ.ಜೆಡಿಎಸ್ ಪಕ್ಷದ ವಿದ್ಯಾರ್ಥಿ ಜನತಾದಳ,ಯುವ ಜನತಾದಳ,ಕಾರ್ಮಿಕ ಜನತಾದಳ, ಮಹಿಳಾ ಜನತಾದಳ,ರೈತ ಜನತಾದಳ,ಸಾಂಸ್ಕೃತಿಕ ಜನತಾದಳ,ವಕೀಲರ ಮುಂತಾದ ಮೊದಲಿದ್ದ ಘಟಕಗಳು ಹೇಳಹೆಸರಿಲ್ಲದಂತೆ ಆಗಿವೆ.ಅದರ ಅಧ್ಯಕ್ಷರುಗಳು ಅಧಿಕಾರಕ್ಕಾಗಿ ಬರ್ತಾರೆ ಅಧಿಕಾರ ಹೋದತಕ್ಷಣ ಹೋಗ್ತಾರೆ ಇಂಥವರನ್ನು ಕಂಡರೆ ಕುಮಾರಸ್ವಾಮಿಗೆ ಬಹಳ ಖುಷಿ.ಕಾರಣ ಅವರು ಕಲಾವಿದರು ಕುಮಾರಸ್ವಾಮಿಯವರನ್ನ ಮರಳುಮಾಡುವಂಥ ಕಲಾಪ್ರದರ್ಶನ ಮಾಡ್ತಾರೆ ಆ ಕಲೆ ಕುಮಾರಸ್ವಾಮಿ ಇಷ್ಟಪಟ್ಟು ನೈಜ ಕಾರ್ಯಕರ್ತರನ್ನು ಕಡೆಗನಿಸಿದ್ದರಿಂದ ಜೆಡಿಎಸ್ ಇಂಥ ಪರಿಸ್ಥಿತಿಗೆ ಇಳಿದಿದೆ.ದೇವೆಗೌಡರ ಶ್ರಮ ಕುಮಾರಸ್ವಾಮಿಯವರಲ್ಲಿ ಮರೆಯಾಗಿ ಹೋಗಿದೆ.
ಬಿಎನ್ ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಗಳಲ್ಲೂ ಸಂಘಟನೆಮಾಡಿ ನಿರಂತರ ಜನಪರ ಕೆಲಸದಲ್ಲಿ ತೊಡಗಿ ಜನಮನ್ನಣೆ ಪಡೆದಿದೆ.ಇಂದಿಗೂ ಆ ವಿಶ್ವಾಸ ಸೇವಾದಳ ಹೊಂದಿದೆ.ಪ್ರತಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತ ಅವರ ಕುಂದುಕೊರತೆ ಸಲುವಾಗಿ ನಮ್ಮ ಪಕ್ಷದ ಶಾಸಕರ ಬಳಿ ಹೋದಾಗ ಐಬಿ ಗಳಲ್ಲಿ ಜನರ ಎದರೇ ಅವಮಾನಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಆದರೂ ಆ ಮನುಷ್ಯ ನಗುನಗುತ್ತಾನೆ ಹೊರಬಂದಿದ್ದಾರೆ.ನಮಗೇನಾದರೂ ಅಂಥ ಮಾತು ಹೇಳಿದ್ದರೆ ಅಲ್ಲೇ ಮುಖಕ್ಕೆ ಹೊಡೆದಂಗೆ ಪ್ರತ್ಯುತ್ತರ ಕೊಟ್ಟು ಬರುತ್ತದ್ವಿ ಅನಿಸುತ್ತದೆ.
ರಾಜ್ಯದ ಪ್ರತಿಜಿಲ್ಲಾ ಪ್ರವಾಸ ಮಾಡುತ್ತ ಸಂಘಟಿಸುತ್ತಾ ಕಾರ್ಯಕರ್ತರ ನಿರಂತರ ಸಂಪರ್ಕ ದಲ್ಲಿರುವ ಪಕ್ಷದ ರಾಜ್ಯ ನಾಯಕರುಗಳಲ್ಲಿ ಬಸವರಾಜ್ ಕೂಡಾ ಒಬ್ಬರು.ಅವರು ಡೋಂಗಿ ತನಮಾಡದೆ ಹೊಗಳುಬಂಟರನ್ನು ಇಟ್ಟುಕೊಳ್ಳದೆ ಯಾವ ನಾಯಕರನ್ನೂ ಓಲೈಕೆ ಮಾಡದೇ ಪಕ್ಷದ ಕೆಲಸ ಕಾರ್ಯಕರ್ತರ ವಿಶ್ವಾಸ ಅವರ ಪ್ರಮುಖವಾದ ಕೆಲಸ. ಯಾರ್ಯಾರೋ ಬರ್ತಾರೆ ಅಧಿಕಾರ ಅನುಭವಿಸಿ ಹೊರಟು ಹೋಗ್ತಾರೆ.ನಮ್ಮ ಪಕ್ಷದಲ್ಲಿ ಏನಾಗಿದೆಯಂದರೆ ಹೆತ್ತ ತಾಯಿಗೆ ಹರಕಲು ಸೀರೆ ಉಡಿಸಿ ಪಕ್ಕದ ಮನಿಯವರಿಗೆ ಜರತಾರೆ ಪಿತಾಂಬರ ಉಡಿಸುವ ಚಾಳಿಯಿಂದಾಗಿ ಪಕ್ಷಕ್ಕೆ ಹಿನ್ನಡೆ.ಅವಕಾಶ ವಿದ್ದಾಗ ಬಸವರಾಜ್ ಅವರಿಗೆ ಎಂ.ಎಲ್.ಸಿ.ಮಾಡಲು ಕಾರ್ಯಕರ್ತರು ಕೇಳಿಕೊಂಡರು,ಅಧಿಕಾರವಿದ್ದಾಗ ನಿಗಮ ಮಂಡಳಿಗೂ ಗುರುತಿಸಲಿಲ್ಲಾ.ಇಂಥ ಪಕ್ಷನಿಷ್ಠ ಸಂಘಟಕರಿಗೆ ಅಧಿಕಾರ ಕೊಟ್ಟರೆ ಇನ್ನೂ ಹೆಚ್ಚಿಗೆ ಪಕ್ಷಸಂಘಟನೆ ಮಾಡಲು ಅನುಕೂಲವಾಗುತ್ತದೆ,ಬಸವರಾಜ್ ಪಾದಯಾತ್ರೆ ಯಂಥ ಕಾರ್ಯಕರ್ತರು ಪ್ರತಿ ಜಿಲ್ಲೆಯಲ್ಲಿ ಇವತ್ತಿಗೂ ಅನಾಥರಂತೆ ಪಕ್ಷ ನಿಷ್ಠವಾಗಿಯೇ ಇದ್ದಾರೆ.ಯಾವ ಜಿಲ್ಲೆಯಲ್ಲೂ ಮಾತೃ ಘಟಕದವರು ಸಹಕರಿಸಲ್ಲಾ ಆದರೂ ಪಕ್ಷದ ನಿಷ್ಠೆ ಯಲ್ಲಿ ಇದ್ದಾರೆ.
ಕುಮಾರಸ್ವಾಮಿಯವರ ವೀಕ್ನೆಸ್ ಅಂದರೆ ಕೆಲಸ ಮಾಡುವ ಕಾರ್ಯಕರ್ತರನ್ನು ಗಮನಿಸಲ್ಲಾ.ಎದುರಿಗೆ ಗಿಮಿಕ್ ಮಾಡುವ ನಯವಂಚಕರೆಂದರೆ ಪ್ರಾಣ.ಇದು ಪ್ರಾಮಾಣಿಕ ಕಾರ್ಯಕರ್ತರ ಮರ್ಮಾಘಾತದಂತಾಗುತ್ತದೆ.
ಈಗ ನವ ಉತ್ಸಾಹಿ ಯುವಕ ನಿಖಿಲ್ ಕುಮಾರ್ ಸ್ವಾಮಿಯವರ ಮೇಲೆ ಸಾಕಷ್ಟು ಕಾರ್ಯಕರ್ತರು ಭರವಸೆ ಹೊಂದಿದ್ದಾರೆ.ಹಿಂದೆ ಎಲೆಮರೆಕಾಯಿಯಂತೆ ಪಕ್ಷಕ್ಕೆ ದುಡಿದು ಯಾವುದೇ ಅಧಿಕಾರವಿಲ್ಲದೆ ರಾಜಕೀಯ ಬದುಕನ್ನೇ ಕಳೆದುಕೊಂಡ ಕಾರ್ಯಕರ್ತರಿಗೆ ಹೊಸ ಚಿಗುರೊಡೆದಿದೆ.ನಿಖಿಲ್ ಕುಮಾರ್ ಸ್ವಾಮಿಯವರಾದರೂ ಬಸವರಾಜ್ ಪಾದಯಾತ್ರಿಯಂತವರನ್ನು ಗುರುತಿಸಿ ಪಕ್ಷದ ಸಂಘಟನೆ ಮತ್ತು ಅವರಿಗೆ ಪಕ್ಷದಲ್ಲಿ ಗುರುತರ ಹುದ್ದೆ ನೀಡಿ ಪಕ್ಷಕ್ಕಾಗಿ ದುಡಿಸಿಕೊಳ್ಳಬೇಕೆಂದು ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿರುವ ಪಕ್ಷನಿಷ್ಟ ಕಾರ್ಯಕರ್ತರ ಅಭಿಲಾಶೆಯಾಗಿದೆ.ಯುವ ಮುಖಂಡರು ಯಾವರೀತಿಯ ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಬಳಸಿಕೊಳ್ತಾರೆ ಕಾದು ನೋಡೋಣ ಅವಕಾಶವಿದೆ.
ಪಾದಯಾತ್ರೆಯವರ ಕಾರ್ಯಕ್ರಮಗಳ ಪಟ್ಟಿಮಾಡಿದರೆ ಸಾವಿರಾರು ಪುಟದಷ್ಟಾಗುತ್ತದೆ ಮುಂದೆ ನೋಡೋಣ ಆ ಕುರಿತು ಕಂತು ರೂಪದಲ್ಲಿ ಪ್ರಕಟಿಸು ಕೆಲಸ ಮಾಡಲು ಪ್ರಯತ್ನಿಸುವೆ. (ಎಸ್.ಕೆ.ಒಡೆಯರ್ ದಾವಣಗೆರೆ)

LEAVE A REPLY

Please enter your comment!
Please enter your name here