ದಾವಣಗೆರೆ – ಸೈದ್ಧಾಂತಿಕವಾಗಿ ಬದ್ಧತೆಯಿಂದ ಶೋಷಿತರ ಸೇವೆ ಮಾಡಲು ತಯಾರಾಗಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ ಆವರಗೆರೆ ಚಂದ್ರು ಹೇಳಿದರು.
ದಾವಣಗೆರೆ ಪಂಪಾಪತಿ ಭವನದಲ್ಲಿ ಶನಿವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರಗೆರೆ ಚಂದ್ರುರವರು, ಪಕ್ಷದ ಕಾರ್ಯಕರ್ತರು ಮೊದಲು ಸೈದ್ಧಾಂತಿಕವಾಗಿ ತಯಾರಾಗಿ ಬದ್ದತೆಯಿಂದ ಶೋಷಿತರಿಗೆ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಮುಂದಾಗ ಬೇಕೆಂದು ಹೇಳಿದರು.
ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಖಮ್ಮಂ ನಲ್ಲಿ ನಡೆಯುತ್ತಿರುವ ಪಕ್ಷದ ನೂರು ವರ್ಷದ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆಯುತ್ತಿದೆ ದೇಶಾದ್ಯಂತ ಇರುವ ನಮ್ಮ ಕಾರ್ಯಕರ್ತರು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಸಿ ಪಿ ಐ ಗೆ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ನಾವು ನೀವು ಇರುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಸಿಪಿಐ ತಾಲೂಕು ಸಮ್ಮೇಳನದ ಧ್ವಜಾರೋಹಣವನ್ನು ಕಾಂ ಸುರೇಶ್ ಶೇಖರಪ್ಪ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ನ ಖಜಾಂಚಿ ಕಾಂ ಜಿ ಎಲ್ಲಪ್ಪ ನೆರವೇರಿಸಿ ಮಾತನಾಡಿದರು. ಸಿ ಪಿ ಐ ಜಿಲ್ಲಾ ಸಹಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್ ಸಿಪಿಐ ಜಿಲ್ಲಾ ಸದಸ್ಯರುಗಳಾದ ಕಾಂ ಕೆ ಜಿ ಶಿವಮೂರ್ತಿ ಕಾಂ ಬಿ ಚಿನ್ನಪ್ಪ ಕಾಂ ಪಿ ಷಣ್ಮುಖ ಸ್ವಾಮಿ ಕಾಂ ಬೆಳಲಗೆರೆ ರುದ್ರಮ್ಮ ಸಮ್ಮೇಳನಕ್ಕೆ ಶುಭ ಕೋರಿ ಮಾತನಾಡಿದರು.
ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಈ ಮುಂದಿನವರನ್ನು ಸಿಪಿಐ ತಾಲೂಕು ಮಂಡಳಿ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ- ಕೆರನಳ್ಳಿ ರಾಜು ಸಹ ಕಾರ್ಯದರ್ಶಿಗಳಾಗಿ ಕಾಂ ಜಯಣ್ಣ ತೋಳಹುಣಸೆ ಮತ್ತು ಕಾಂ ಎ ದಾದಾಪೀರ್ ಖಜಾಂಚಿಯಾಗಿ ಕಾಂ ಐರಣಿ ಚಂದ್ರು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು ಸೇರಿದಂತೆ ಒಟ್ಟು 15 ಜನರ ಸಮಿತಿ ರಚಿಸಲಾಯಿತು.

LEAVE A REPLY

Please enter your comment!
Please enter your name here