ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ತನ್ನದೇ ಆದ ಜಾತಿ ರಹಿತ ಧರ್ಮಾತೀತವಾಗಿ ಕನ್ನಡ ನಾಡು ನುಡಿ ಜಲ ನೆಲ ರಕ್ಷಣೆಗಾಗಿ ಹುಟ್ಟಿಕೊಂಡ ಸಂಘಟನೆ.ಅದರ ಬೆಳವಣಿಗೆಗೆ ಶ್ರಮಿಸಿದವರು ನಾರಾಯಣ ಗೌಡರ ಪರಿಶ್ರಮ ನಮಗೆ ಹತ್ತಿರದಿಂದ ಗೊತ್ತಿದೆ.ನಾರಾಯಣ ಗೌಡರೊಂದಿಗೆ ಕೈಜೋಡಿಸಿ ಸಂಘಟನೆಗೆ ಶಕ್ತಿ ತುಂಬಿದವರು ಧರ್ಮ,ಜಾತಿ ನೋಡಿ ಅಲ್ಲಾ ಅವರ ಚಿಂತನೆಗಳನ್ನು ಬೆಂಬಲಿಸಿ.
ನಾರಾಯಣ ಗೌಡರು ಬೆಳಸಿದ ಹೆಮ್ಮರದಲ್ಲಿ ಬಂದು ಸೇರಿಕೊಂಡು ಹೆಸರಿಗೆ ಕಳಂಕ ತರುವ ಪ್ರಯತ್ನ ಸರಿಯಲ್ಲಾ.ರಕ್ಷಣಾ ವೇದಿಕೆಯ ಧೇಯ ಧೋರಣೆಗಳಿಗಾಗಿ ಅದು ಬೆಳೆದಿದೆ ಅದರಲ್ಲಿ ಇತ್ತೀಚೆಗೆ ಬಂದು ಸೇರಿಕೊಂಡವರಲ್ಲಿ ಬಹುತೇಕರು ತಮ್ಮ ಸ್ವಾರ್ಥ ಸಾಧನೆಗಾಗಿ ಅವರಿಂದ ಸಂಘಟನೆಗೆ ಯಾವಪ್ರಯೋಜನವೂ ಇಲ್ಲಾ ಪ್ರಯೋಜನೆಯಾಗಿದ್ದರೆ ಕಾರ್ಯಕ್ರಮಗಳಿಗೆ ಹಣಕಾಶಿನ ಸಹಾಯವಾಗಿರಬಹುದಷ್ಟೆ.
ನಾರಾಯಣ ಗೌಡರು ತಮ್ಮ ಮಗನ ಮದುವೆಯ ಆಮಂತ್ರಣ ನೀಡಲು ಸುದೀಪ್ ರನ್ನು ಭೇಟಿಮಾಡಿದ್ದು ಕಾಕತಾಳೀಯ ಈ ಸಮಯದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಯೋಗ್ಯತೆಗನುಸಾರವಾಗಿ ಮಾತನಾಡಿರಬಹುದು.ಆದರೆ ಒಂದು ಜವಾಬ್ದಾರಿ ಯುತ ಸಂಘಟನೆಯವರು ಅದನ್ನು ಸಮಾಧಾನದಿಂದಲೇ ಜನರಿಗೆ ಮನವರಿಕೆ ಮಾಡಿಕೊಡಬಹುದಾಗಿತ್ತು.ಅದನ್ನು ಬಿಟ್ಟು ದರ್ಪದ ಮಾತುಗಳನ್ನಾಡಿ ವಾಗ್ದಾಳಿಗೆ ಅವಕಾಶ ಮಾಡಿಕೊಡಬಾರದಿತ್ತು.ರಕ್ಷಣಾ ವೇದಿಕೆಯ ಘೋಷಣೆ ಒಂದೇ ಕನ್ನಡವೇ ನಮ್ಮ ಜಾತಿ,ಧರ್ಮ ಎಂದು ಅದನ್ನರಿಯದ ಅವಿವೇಕಿಗಳು ತಮ್ಮ ಸ್ವ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೌಡಿವರ್ತನೆಯ ಮಾತನ್ನಾಡುತ್ತಿರುವುದು ನಾಚಿಕೆಗೇಡಿ ವಿಷಯ.ನಾರಾಯಣ ಗೌಡರ ಪರಿಶ್ರಮ,ಅವರ ಗೌರವಕ್ಕೆ ಧಕ್ಕೆ ತರುವ ಯಾವ ಅಯೋಗ್ಯನೂ ಆ ಸಂಘಟನೆಯಲ್ಲಿರಬೇಡ್ರಿ.ತೊಲಗಿ ಆಚೆ.ಪ್ರತಿಭೆ ಬಜಾರಲ್ಲಿ ಸಿಗುವ ವಸ್ತು ವಲ್ಲ ಹಣ ಕೊಟ್ಟು ಖರೀದಿಸಲು.ಅವಿವೇಕತನದ ಮಾತು ಬಿಟ್ಟು ಗೆವಿನ ನಗೆ ಕನ್ನಡಿಗರದೇ ಎಂದು ನೆನಪಿರಲಿ.(ಎಸ್ ಕೆ ಒಡೆಯರ್9141920642)

LEAVE A REPLY

Please enter your comment!
Please enter your name here