ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತಿದ್ದ ಹಿರಯ ರಾಜಕಾರಣಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು ವಯೋಸಹಜ ಕಾಯಿಲೆಯಿಂದ ನಿಧನರಾದ ಪ್ರಯುಕ್ತ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಬೇಕಾಗಿದೆ.
ಈ ಕ್ಷೇತ್ರದಲ್ಲಿ ಬಹುತೇಕ ಅಹಿಂದ ಮತಗಳ ಹೆಚ್ಚಾಗಿದ್ದು ಇಲ್ಲಿಯ ವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಪಕ್ಷ ಗೆಲುವು ಸಾಧಿಸಿದ್ದಿಲ್ಲಾ.ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರರ್ಥಿಗೆ ಟಿಕೇಟ್ ಕೊಡಬೇಕೆಂದು ಕೇಳಿಬಂದರೂ ಸಹ ಕೊನೆಯದಾಗಿ ಒಂದೇ ಮಾತು ಶಿವಶಂಕರಪ್ಪನವರು ಹಿರಿಯರು ಅವರು ರಾಜಕೀಯದಲ್ಲಿರುವವರೆಗೂ ಅವರೇ ಆ ಸ್ಥಾನದಲ್ಲಿರಬೇಕೆಂಬ ಬಹುಜನರ ಅಪೇಕ್ಷೆಯಿಂದಾಗಿ ಈ ಕ್ಷೇತ್ರದ ಟಿಕೇಟ್ಗಾಗಿ ಹೆಚ್ಚು ಒತ್ತಡವು ಹೈಕಮಾಂಗೆ ಇರಲಿಲ್ಲಾ. ಬಹುಜನರ ಅಪೇಕ್ಷೆಯಂತೆ ಶಿವಶಂಕರಪ್ಪನವರು ತಮ್ಮ ಕೊನೆಯ ಉಸಿರಿನ ವರೆಗೂ ಈ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದರು. ಆದರೆ ಈಗ ಅವರ ನಿಧನದ ನಂತರ ಉಪಚುನಾವಣೆಯಲ್ಲಿ ಅಲ್ಪ ಸಂಖ್ಯಾತರಿಗೆ ಟಿಕೇಟ್ ನೀಡಬೇಕೆಂದು ಮುಸ್ಲಿಮ್ ಸಮುದಾಯ ಒಕ್ಕೂರಲಿನ ಮಾತುಗಳನ್ನಾಡುತಿದ್ದಾರೆ.ಮತ್ತೊಂದು ಕಡೆಯಲ್ಲಿ ಕುರುಬ ಸಮುದಾಯದವರೂ ಅವಕಾಶಕ್ಕಾಗಿ ಕಾಯುತಿದ್ದಾರೆ.ಇವರ ಮಧ್ಯ ಕೆಲವರು ಶಾಮನೂರು ಮನೆತನದವರಿಗೇ ಟಿಕೇಟ್ ಕೊಡಬೇಕೆಂದೂ ಕೇಳಿವರುತ್ತಿವೆ.ದಾವಣಗೆರೆಯ ಬಹುತೇಕರು ಶಾಮನೂರು ಮನೆತನದವರಿಗೆ ಟಿಕೇಟ್ ಕೊಟ್ಟರೆ ಅಭ್ಯಂತರವಿಲ್ಲಾ ಆದರೆ ಆ ಮನೆತನದಲ್ಲಿ ಯಾರಿಗೆ ಟಿಕೇಟ್ ಕೊಡುತ್ತಾರೆಂದು ಕಾತರದಲ್ಲಿದ್ದಾರೆ.ಅದರಲ್ಲಿ ಶಾಮನೂರು ಪಟಾಲಮ್ ನಕೆಲವರು ಹಾಲಿ ಸಚಿವ ಎಸ್ ಎಸ್ ಮಲ್ಲಿ ಕಾರ್ಜುನರ ಮಗನಾದ ಸಮರ್ಥ ಅವರ ಹೆಸರನ್ನು ಗಾಳಿಲಿ ಬಿಟ್ಟು ಬೆನ್ನು ತಟ್ಟಿಸಿಕೊಳ್ಳುವತ್ತ ಸಾಗಿದ್ದಾರೆ.ರಾಜಕೀಯದ ಎಬಿಸಿಡಿ ಅರಿಯದ ನಿಖಿಲ್ ಕುಮಾರ್ ಸ್ವಾಮಿಯಂಥವರೇ ಈ ಸಮರ್ಥ ಕೂಡ ಹೌದು.ಹಾಗೇನಾದರೂ ಒಂದು ವೇಳೆ ಸಮರ್ಥ ರವರಿಗೆ ಕಾಂಗ್ರೆಸ್ ಟಿಕೇಟ್ ಕೊಟ್ಟರೆ ಬಿಜೆಪಿಗರಿಗೆ ವಿಜಯ ಶತಸಿದ್ದ ಎರಡು ಮಾತಿಲ್ಲಾ.
ಆದರೆ ಹೈ ಕಮಾಂಡ್ ಇಲ್ಲಿ ಜಾಗೃತಿ ವಹಿಸಬೇಕಾಗಿರುವುದು ಬಹಳ ಅಗತ್ಯ ವೆನಿಸುತ್ತದೆ.ಹೈ ಕಮಾಂಡ್ಗೆ ಶಾಮನೂರು ಫ್ಯಾಮಿಲಿಗೇ ಟಿಕೇಟ್ ಕೊಡಲು ಮುಂದಾದರೆ ಎಸ್ ಎಸ್.ಬಕ್ಕೇಶ್ ಸೂಕ್ತ ವ್ಯಕ್ತಿ ಎಂದು ಬಹುತೇಕರ ಅಭಿಪ್ರಾಯ.
ಹೌದು ಎಸ್ ಎಸ್ ಬಕ್ಕೇಶ್ ರವರಿಗೆ ಹಿರಿತನದ ಅನುಭವ,ರಾಜಕೀಯ ಹೊರ ಒಳ ಸುಳಿವು ಮತ್ತು ಜನರ ನಾಡಿಮಿಡಿತ ಗೊತ್ತಿದೆ.ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಅವಿಭಜಿತ ಜಿಲ್ಲೆ ಚಿತ್ರದುರ್ಗ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಭೇಶ್ ಎನಿಸಿಕೊಂಡಿದ್ದಾರೆ.ಮತ್ತು ಇಲ್ಲಿಯ ವರೆಗೆ ಅವರ ತಂದೆಯವರು ಮತ್ತು ಸಹೋದರ ರಾಜಕೀಯ ಉನ್ನತ ಸ್ಥಾನದಲ್ಲಿದ್ದರೂ ಸಹ ಬಕ್ಕೇಶ್ ರವರು ಹಮ್ಮು,ಬಿಮ್ಮು ಇಲ್ಲದೆ ಯಾವುದೇ ಅಧಿಕಾರ,ಕಚೇರಿ ಗಳಲ್ಲಿ ಹೆಸರು ಬಳಸಿಕೊಳ್ಳದೆ ಬಹಳ ಸರಳ ಸಜ್ಜನ ವ್ಯಕ್ತಿತ್ವದಿಂದ ಜನಮನದಲ್ಲಿದ್ದಾರೆ.ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾರೊಂದಿಗೂ ಏರು ದ್ವನಿಯಲ್ಲಿ ಗದುರಿಸದೇ ಸಹನೆಯಿಂದ ಸ್ನೇಹ ಭಾವದಿಂದ ನಗನಗುತ್ತಾ ಬೆರೆಯುವ ಸ್ವಭಾವದವರು.
ಶಾಮನೂರು ಮನೆಯವರಿಗೇ ಟಿಕೇಟ್ ಕೊಡುವುದಾದರೆ ಅದು ಬಕ್ಕೇಶ್ ಸೂಕ್ತ ಅಭ್ಯರ್ಥಿ ಎಂದು ಜನರ ಅಭಿಪ್ರಾಯ ವಾಗಿದೆ.ಬಕ್ಕೇಶ್ ರವರೂ ಕೂಡಾ ಅವರ ತಂದೆಯ ಹಾದಿಯಲ್ಲಿ ನಡೆದು ದಲಿತ,ಹಿಂದುಳಿದ,ಅಲ್ಪಸಂಖ್ಯಾತ ರಹಿತರಕ್ಷಣೆ ಕಾಯುವುದರಲ್ಲಿ ಅನುಮಾನವಿಲ್ಲಾ.ಅಭಿವೃದ್ಧಿ ಕೂಡಾ ನಡೆಯುತ್ತದೆ ಮತ್ತು ಸ್ವತಂತ್ರ ವಾಗಿ ತೀರ್ಮಾನ ತಗೆದುಕೊಳ್ಳುವಷ್ಟು ರಾಜಕೀಯ ಪ್ರಭುದ್ವರು. ಹೈಕಮಾಂಡ್ ಸರಿಯಾದ ತೀರ್ಮಾನ ಮಾಡಿದರೆ ಮಾತ್ರ ಕಾಂಗ್ರೆಸ್ ಸ್ಥಾನ ಉಳಿಯುತ್ತದೆ.ಯಾರ್ಯಾರೋ ಹೊಗಳುಬಂಟರ ಮಾತುಗಳಿಗೆ ಮರುಳಾಗಿ ಈಗಾಗಲೇ ಹಲವು ಹೆಸರುಗಳನ್ನು ಉರುಳಿಸುತ್ತಿರುವವರು ಹುರುಳಿಲ್ಲದ ಹೆಸರುಗಳು.





