ಮೈಸೂರ:
ಸಾರ್ವಜನಿಕ ಹಿತಾಸಕ್ತಿಗೆ ಸಂಪೂರ್ಣ ವಿರುದ್ದವಾಗಿರುವ ಜನ ವಿರೋಧಿ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಕಳೆದ 106 ದಿನಗಳಿಂದ ಶಾಂತಿಯುತ ಹೋರಾಟ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಪರಿಣಾಮಕಾರಿಯಾದ ಒತ್ತಡ ಉಂಟು ಮಾಡಲು ವಿಜಯಪುರದಲ್ಲಿ ದಿನಾಂಕ 01-01-2026 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತುಕತೆ ಮೂಲಕ ಬಗೆಹರಿಸುವ ಬದಲು ಅತ್ಯಂತ ದೌರ್ಜನ್ಯ ಹಾಗೂ ಹೀನಾಯ ಬಲಪ್ರಯೋಗ ನಡೆಸಿ ಬಂಧಿಸಿ ಕೊಲೆ ಯತ್ನ, ಕೊಲೆ ಬೆದರಿಕೆ ಯಂತಹ ಮೊಕದ್ದಮೆಗಳನ್ನು ಪೋಲಿಸಿನವರು ಹಾಕಿದ್ದಾರೆ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಕ್ರಮವನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟಿಸಲಾಯಿತು.
ಈ ಹೋರಾಟದ ಸಂಧರ್ಭದಲ್ಲಿ ಎಐಕೆಕೆಎಂಎಸ್‌ನ ರಾಜ್ಯ ಅಧ್ಯಕ್ಷರಾದ ಎಂ.ಶಶಿಧರ್, ಜನಾಂದೋಲನಗಳ ಮಹಾ ಮೈತ್ರಿಯ ರಾಜ್ಯ ನಾಯಕರಾದ ಉಗ್ರನರಸಿಂಹೇಗೌಡರು, SUCI-C ಜಿಲ್ಲಾ ಕಾರ್ಯದರ್ಶಿ ರವಿ. ಬಿ., ಎಐಕೆಕೆಎಂಎಸ್‌ನ ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಎಸ್.ಎನ್. ಸ್ವಾಮಿ, ಎಐಕೆಕೆಎಂಎಸ್‌ನ ಜಿಲ್ಲಾ ಅಧ್ಯಕ್ಷರಾದ ಬಸವರಾಜು ಹೆಚ್.ಎಂ. ಎಐಕೆಕೆಎಂಎಸ್‌ನ ಜಿಲ್ಲಾ ಉಪಾಧ್ಯಕ್ಷರಾದ ಕೆಲ್ಲಹಳ್ಳಿ ರಾಮಣ್ಣ, ಬಿ, AIUTUC ನಾಯಕರು, AIMSS ನಾಯಕರು, AIDYO ನಾಯಕರು ಹಾಗೂ ರೈತರದ ನಂಜುಡ, ಉಮೇಶ್, ಶಿವಣ್ಣ ನಾಯಕ, ಮಹೇಶ್, ರೈತ ಮಹಿಳೆಯರಾದ ಜಯಲಕ್ಷ್ಮೀ, ನಾಗಮ್ಮ, ಹೂವಮ್ಮ ಮುಂತಾದವರು ಉಪಸ್ಥಿತರಿದ್ದರು.





