ವಿಜಯಪುರ: ವಿಜಯಪುರ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅನೇಕ ವೀರರ ಗಂಡುಮೆಟ್ಟಿದ ನಾಡು ಎನಿಸಿಕೊಂಡಿದೆ.ಅಲ್ಲದೆ ಕಲೆ,ಕ್ರೀಡೆ,ಪಶುಸಾಕಾಣಿಕೆ,ಸಾಂಸ್ಕೃತಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದೆ.ಇಂಥಾ ಜಿಲ್ಲೆಯನ್ನು ಆಡಳಿತಾರೂಢ ಪಕ್ಷಗಳು ಸದಾಕಾಲ ಈ ಜಿಲ್ಲೆಗೆ ಅನ್ಯಾಯಮಾಡುತ್ತಾನೇ ಬಂದಿದೆ.
ಸ್ವಾತಂತ್ರ್ಯ ನಂತರದ ದಿನಗಳಲ್ಲಂತೂ ಮಹಾನ್ ನಾಯಕರುಗಳು ಗಾಂಧಿಜಿಯವರ ಅನುಯಾಯಿಗಳು ಹಳ್ಳಿಗಳಿಂದಲೇ ಪಟ್ಟಣಗಳ ಉದ್ದಾರ.ಆದ್ದರಿಂದ ಗ್ರಾಮಸ್ವರಾಜ್ಯವೆಂದು ಗ್ರಾಮೀಣ ಪ್ರದೇಶಗಳಿಗೆ ಅಂದು ಉತ್ತೇಜನನೀಡಿ ಗ್ರಾಮಗಳಿಗೆ ರಸ್ತೆ,ಕುಡಿಯುವನೀರು,ಪಶುವೈದ್ಯಶಾಲೆ,ಅಂಚೆ,ಆರೋಗ್ಯಕೇಂದ್ರ,ಶಾಲೆಕಾಲೇಜು,ವಾಚನಾಲಯ,ಸಮುದಾಯಕೇಂದ್ರ,ರೈತರಸಹಕಾರ ಸಂಘಸಂಸ್ಥೆಗಳ ಸೇರಿದಂತೆ ಆಗಿನ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಸೌಲಭ್ಯಗಳನ್ನು ಒದಗಿಸಿದ್ದರು.ಅವರೆಂದು ತಾನು ಇಂದ್ರ ಚಂದ್ರ ರೆಂದು ಹೊಗಳಿಸಿಕೊಳ್ಳಲು ಬೀದಿಯ ಹುಚ್ಚುನಾಯಿಗಳನ್ನು ಸಾಕಿರಲಿಲ್ಲಾ.ಅವರ ಜೀವನವು ಸದಾ ಜನಸಮುದಾಯದ ಹಿತಚಿಂತನೆಗಾಗಿ ತುಡಿಯುತಿದ್ದರು.ಅಂಥ ರಾಜಕಾರಣಿಗಳ ಅನುಯಾಯಿಗಳೆಂದು ಮತ್ತು ಅಂಥವರ ಸಂಭಂದಿಕರೆಂದು ಹತ್ತುಹಲವಾರು ಕಪಟವೇಷಧರಿಸಿ ಇತ್ತೀಚೆಗೆ ಸ್ವಾರ್ಥ ಹಿತಾಶಕ್ತಿಗಾಗಿ ಐಶಾರಾಮಿ ಜೀವನಕ್ಕಾಗಿ ತನ್ನ ಸಂಸಾರ,ಕುಟುಂಬ, ವ್ಯವಹಾರದ ಅಭಿವೃದ್ಧಿಗೆ ಹೆಚ್ಚು ಗಮನಹರಿಸಿ ಇದ್ದಬದ್ದ ಸೌಕರ್ಯಗಳ ಮೆಂಟೆನೆನ್ಸ್ ಹೆಸರಲ್ಲಿ ಸುಳ್ಳು ಖರ್ಚುಗಳನ್ನು ಹಾಗಿ ಹಣ ಲಪಟಾಯಿಸಿ ಇದ್ದಬದ್ದ ಸೌಲಭ್ಯಗಳನ್ನೂ ನಾಶಮಾಡಿದ ನಾಲಾಯಕರು ಲಕ್ಷ,ಕೋಟಿ,ಕೋಟಿಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನುಂಗಿ ಶ್ರೀಮಂತಿಕೆ ಅಧಿಕಾರ ವೃದ್ಧಿಸಿಕೊಂಡು ಅದರೆ ರುಚಿ ನೆತ್ತಿಗೇರಿ ಇತರರು ಆಸ್ಥಾನಕ್ಕೆ ಬರದಂತೆ ತಡೆಗಟ್ಟಲು ತನ್ನ ಸುತ್ತ ಪಟಾಲಮ್ ಕಟ್ಟಿಕೊಂಡು ಚಾಪ್ ಬೀಸಾಕಿ ಬೊಗಳಲು ಬೀದಿಯ ಹುಚ್ಚುನಾಯಿಗಳನ್ನು ಸಾಕಿದವರು ಮತ್ತು ತನ್ನ ಅಧಿಕಾರ ಶಾಸ್ವತ ಗೊಳಿಸಿಕೊಳ್ಳಲು,ಅಕ್ರಮವಾಗಿ ಗಳಿಸಿದ ಆಸ್ತಿಪಾಸ್ತಿ, ಅಧಿಕಾರದ ರಕ್ಷಣೆ ಮಾಡಿಕೊಳ್ಳುವವನೇ ಪ್ರಭಾವಿ ಎಂದು ಬಿಂಬಿಸಿಕೊಳ್ಳುವ ನಾಲಾಯಕರು ಬೀಸಾಕಿದ ಚಾಪ್ಸ್ ನೆಕ್ಕಿ ವಿವಿಧ ಬಿರುದುಗಳ ಮುಖಾಂತರ ಬೊಗಳುವ ಬೀದಿಯ ಹುಚ್ಚುನಾಯಿಗಳೇ ದೇಶದ್ರೋಹಿಗಳಾಗಿದ್ದಾರೆ.ಪ್ರಭಾವಿಗಳೆಂದರೆ ದೌರ್ಜನ್ಯ, ದಬ್ಬಾಳಿಕೆ, ಅಕ್ರಮ, ಅನೈತಿಕತೆ,ಸುಲಿಗೆ ಕೋರರೆಂದು ಅರ್ಥೈಸಿಕೊಳ್ಳಬೇಕಾಗಿದೆ.ಜನಸಾಮಾನ್ಯರಿಗೆ ಬೇಕಾದುದನ್ನು ಕೇಳಿದರೆ ಜನಪರಹೋರಾಟಗಾರರನ್ನು ತನ್ನ ವೈರಿಎಂಬಂತೆ ಬಿಂಬಿಸಿ ಅಂಥವರಿಗೆ ಆರ್ಥಿಕ,ಸಾಮಾಜಿಕ,ಸುಳ್ಳುಗಳ ಸುರಿಮಳೆ ಮುಖಾಂತರ ಕೀಳಾಗಿ ಕಾಣುವುದು.ಅಂಥವರ ಬದುಕನ್ನು ಮೂರಾಬಟ್ಟೆಮಾಡಲು ಹವಣಿಸುವುದು ಇದು ಪ್ರಭಾವಿಗಳ ಕೆಲಸವಲ್ಲಾ.ಈಗ ಅದನ್ನೇ ಮಾಡುತ್ತಾ ಪ್ರಭಾವಿ ಎನಿಸಿಕೊಳ್ಳುವುದು ರಣ ಹೇಡಿಗಳ ಕೆಲಸ. ಆದರೆ ನೆನಪಿರಲಿ ಜನರೊಚ್ಚಿಗೆದ್ದು ಬೀದಿಗಿಳಿದರೆ ನಿಮ್ಮಂಥಾ ನಾಲಾಯಕರ ಮೈಮೇಲೆ ಬಟ್ಟೆಯೂ ಉಳಿಯೊಲ್ಲಾ ಬೀದಿಲಿ ಬೆತ್ತಲೆಯಾಗಬೇಕಾಗಬಹುದು ಎಂಬ ಎಚ್ಚರದಲ್ಲಿರಲಿ.ಎಸ್.ಕೆ.ಒಡೆಯರ್ ಪತ್ರಕರ್ತ





