ಚಿತ್ರದುರ್ಗ:ಹಿರಿಯೂರು ಬಳಿ ಬಸ್ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
KA 01 AE 5217 ನಂಬರಿನ ಖಾಸಗಿ ಸೀಬರ್ಡ್ ಕಂಪನಿ ಬಸ್, ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು. ಹಿರಿಯೂರು ಪಟ್ಟಣದ ಬಳಿ HR 38, AB 3455 ನಂಬರಿನ ಕಂಟೇನರ್ ಲಾರಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಂತರ ಲಾರಿ ನಿಯಂತ್ರಣಕ್ಕೆ ಸಿಗದೆ, ಎದುರಿಗೆ ಬರುತ್ತಿದ್ದ ಬಸ್ಸಿಗೆ ಗುದ್ದಿದೆ. ಬಸ್ಸಿನ ಡಿಸೇಲ್ ಟ್ಯಾಂಕ್ಗೆ ಲಾರಿ ಬಂದು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಐಜಿಪಿ ರವಿಕಾಂತೇ ಗೌಡ.. ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ಹಿರಿಯೂರಿನ ಜಾವಗುಂಡನ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಬಸ್ ಹೊರಟಿತ್ತು. ಈ ವೇಳೆ ಎದುರಿಗೆ ಬಂದ ಲಾರಿ, ಡಿವೈಡರ್ಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ ಎಂದು ತಿಳಿಸಿದ್ದಾರೆ.





