ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ
ಕೃಷ್ಣಾನರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ/ಕಾರ್ಮಿಕರು ಕಳೆದ 4 ತಿಂಗಳಿನಿಂದ ವೇತನವನ್ನು ಪಡೆಯದೇ ಇರುವುದರಿಂದ ಕುಟುಂಬದ ನಿರ್ವಹಣೆ ಮಾಡಲು ತೊಂದರೆ ಉಂಟಾಗಿದ್ದರಿಂದ NCDC, New Delhi Grant in aid to NCDC for strengthening of the Cooperative Sugar Mills (CSMS) ರೂ.150.00 ಕೋಟಿಗಳನ್ನು ಸಹಾಯಧನ ಮಂಜೂರ ಮಾಡುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಂತೆ ಇಂದು ಸಚಿವರ ಮನೆಗೆ ಹೋಗಿ ಸುಮಾರು 70 ಜನ ಕೂಡಿಕೊಂಡು ಮನವಿ ಪತ್ರ ಸಲ್ಲಿಸಲಾಯಿತು
ಉಲ್ಲೇಖ:-
1) ಮಾನ್ಯ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರ : 18-01-2025
2) ನಂದಿ ಸಸಾಕನಿ, ಕೃಷ್ಣನಗರ, ತಾಲೂಕು: ಬಬಲೇಶ್ವರ ಜಿಲ್ಲೆ: ವಿಜಯಪುರ ಪ್ರಸ್ತಾವನೆ ಪತ್ರ NSSK/ GEN ACCTS/ ಆರ್ಥಿಕ ನೆರವು/ 790/2024-25 ಸಂ:12-02-2025
3) ಮಾನ್ಯ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರ ಪತ್ರ ಸಂಖ್ಯೆ: ಡಿಎಸ್‌ಕೆ/ಸಿಓಎಫ್/ಎನ್‌ಸಿಡಿಸಿ ಅಸಿಸ್ಟಂಟನ್ನ /2024-25 ದಿ: 14-02-2025.
4) ನಂದಿ ಸಹಕರಿ ಸಕ್ಕರೆ ಕಾರ್ಖಾನೆ ನಿ, ಕೃಷ್ಣಾನಗರ, ತಾ:ಬಬಲೇಶ್ವರ ಜಿಲ್ಲೆ: ವಿಜಯಪುರ ಇವರು ತಮಗೆ ವಿನಂತಿಸಿದ ಪತ್ರ ದಿನಾಂಕ: 05-03-2025 ರನ್ವಯ.
5) ಅಪರ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಬೆಂಗಳೂರ ಇವರ ಪತ್ರ ໖: 07-07-2025.
6) ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ) ನವ-ದೆಹಲಿ ಇವರ ಪತ್ರ 2: 06-08-2025.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಳಗನ್ವಯ ಮಾನ್ಯರಲ್ಲಿ ಸಾದರಪಡಿಸುವುದೇನೆಂದರೆ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯು ಸಹಕಾರಿ ವಲಯದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾದರಿ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು, ಕಾರ್ಖಾನೆಯು ಅವಿಭಜಿತ ವಿಜಯಪುರ ಬಾಗಲಕೋಟೆ ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿಯ ಕಬ್ಬು ಬೆಳೆಗಾರರ ಆರ್ಥಿಕ ಬೆಳವಣೆಗೆಗೆ ಸಹಕಾರಿಯಾಗಿರುತ್ತದೆ. ಸನ್ 1992 ರಿಂದ ತನ್ನ ಮೊದಲನೇ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಿ ಸನ್:2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮವು ಪ್ರಾರಂಭದಲ್ಲಿ ಇರುತ್ತದೆ.
ಈ ಕುರಿತು ಉಲ್ಲೇಖ ನಂ: 4 ರನ್ವಯ ಕಾರ್ಖಾನೆಯು ತಮಗೆ ದಿನಾಂಕ: 05-03-2024ರ ಪತ್ರದಲ್ಲಿ ಏನಂತಿಸಿ ಕಾರ್ಖಾನೆಯ ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಕಾರ್ಖಾನೆಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ) ನವ-ದೆಹಲಿ ಇವರಿಂದ ರೂ. 150.00 ಕೋಟಿ ಸಾಲವನ್ನು ಮಂಜೂರ ಮಾಡಲು ಕರ್ನಾಟಕ ಘನ ಸರ್ಕಾರದಿಂದ ಶಿಫಾರಸ್ಸು ಮಾಡಲು ಕಾರ್ಖಾನೆಯವರು ಸರ್ಕಾರಕ್ಕೆ ವಿನಂತಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ, ಕಾರ್ಖಾನೆಯು ಪಡೆದುಕೊಂಡ ಸಾಲಗಳ ಕಂತುಗಳನ್ನು ಮರು ಪಾವತಿ ಮಾಡಬೇಕಾದ ಆವಶ್ಯಕತೆಯನ್ನು ಪರಾಂಭರಿಸಿ ಸಹಕಾರಿ ವಲಯದಲ್ಲಿ ಕಳೆದ 34 ವರ್ಷಗಳಿಂದ ಯಶ್ವಸಿಯಾಗಿ ಕಬ್ಬು ನುರಿಸಿ ಕಬ್ಬು ಬೆಳೆಗಾರರಿಗೆ ಉತ್ತಮ ಬಿಲ್ಲು ಪಾವತಿಸಿ ಈ ಭಾಗದಲ್ಲಿ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಕಾರಣ, ನಮ್ಮ .150.00 NCDC, New Delhi Grant in aid to NCDC for strengthening of the Cooperative Sugar Mills (CSMS) ಕೋಟಗಳನ್ನು ಯೋಜನೆಯಡಿ ಅಗತ್ಯವಾದ ಸಾಲ ಸಹಾಯಧನ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ) ನವ-ದೆಹಲಿ ಇವರಿಂದ ಮಂಜೂರ ಮಾಡಲು ಸರ್ಕಾರಕ್ಕೆ ಉಲ್ಲೇಖ ನಂ:2 ರನ್ವಯ ಕಾರ್ಖಾನೆಯ ಪತ್ರ ದಿನಾಂಕ: 12-02-2025 ರನ್ವಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸದರ ಪ್ರಸ್ತಾವನೆಯನ್ನು ಮಾನ್ಯ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರು ಪರಿಶೀಲಿಸಿ ದಿನಾಂಕ: 14-02-2025 ರನ್ವಯ ಈ ಕುರಿತು ಮಾನ್ಯ ಸರ್ಕಾರದ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು ಇವರಿಗೆ ಕಾರ್ಖಾನೆಯು ಕೋರಿರುವ ಸಾಲವನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ) ನವ-ದೆಹಲಿ ಇವರಿಂದ ಮಂಜೂರ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
ಮಾನ್ಯರು, ಕಾರ್ಖಾನೆಯ ಪ್ರಸ್ತಾವನೆಯಲ್ಲಿರುವ ಎಲ್ಲಾ ಅಂಶಗಳನ್ನು ಪರಿಗಣಿಸಿ ಹಾಗೂ ಈಗಾಗಲೇ ಈ ಕುರಿತು ಸರ್ಕಾರದ ಆರ್ಥಿಕ ಇಲಾಖೆಗೆ ಕಾರ್ಖಾನೆಯು ಮನವರಿಕೆ ಮಾಡಿಕೊಡಮಾಡಿದ್ದರಿಂದ. ನಮ್ಮ ಕಾರ್ಖಾನೆಯು ರೂ.232.67 ಕೋಟಿ ಎನ್.ಸಿ.ಡಿ.ಸಿ ಹಾಗೂ ಎಸ್.ಡಿ.ಎಫ್. ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ರೂ.95.23 ಹಾಗೂ ರೂ.51.75 ಕೋಟಗಳಷ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಪಡೆದುಕೊಂಡ ಸಾಲಗಳಿಗೆ ಹೆಚ್ಚಿನ ಬಡ್ಡಿಯನ್ನು ಪಾವತಿಸುವಲ್ಲಿ ಕಾರ್ಖಾನೆಯ ಆರ್ಥಿಕತೆಗೆ ತೊಂದರೆಯುಂಟಾಗಿದೆ.
ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ/ಕಾರ್ಮಿಕರ ಪ್ರತಿ ತಿಂಗಳ ವೇತನವನ್ನು ಪಡೆಯಲು ಸಹ ತೊಂದರೆಯಾಗಿರುತ್ತದೆ. ಇದು ಅಲ್ಲದೇ ಪ್ರತಿ ವರ್ಷ ನೀಡುತ್ತಿರುವ ಬೋನಸ್ ಹಾಗೂ ಗಳಿಕೆರತೆಗಳಿಗೆ ನಗದಿಕರಣ ಸೌಲಭ್ಯವನ್ನು ಕಳೆದ ಮೂರು ವರ್ಷಗಳಿಂದ ಸಹ ಪಡೆದಿರುವುದಿಲ್ಲ. ಇದರಿಂದ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಮತ್ತು ಕುಟುಂಬದ ನಿರ್ವಹಣೆ ಮಾಡಲು ತೊಂದರೆಯಾಗಿರುತ್ತದೆ. ಪ್ರಸ್ತಾವಣೆಯಲ್ಲಿರುವ ಎಲ್ಲ ಅಂಶಗಳನ್ನು ಮಾನ್ಯರು ಸಹಾನುಭೂತಿಯಿಂದ ಪರಿಶೀಲಿಸಿ ಕಾರ್ಖಾನೆಯು ಈಗಾಗಲೇ ಪಡೆದುಕೊಂಡಿರುವ ಸಾಲದ ಕಂತು ಮತ್ತು ಹೆಚ್ಚಿನ ಬಡ್ಡಿಯ ಹೊರೆಯನ್ನು ಕಡಿಮೆಗೊಳಿಸಿ ಸಹಕಾರಿ ವಲಯದ ಸಕ್ಕರೆ ಕಾರ್ಖಾನೆಯು ಕೈಕೊಂಡ ಹೆಚ್ಚಿನ ಕಬ್ಬು ಅರೆಯುವ ಯೋಜನೆಯನ್ನು ಈಗಾಗಲೇ ಶೇ. 90% ರಷ್ಟು ಪೂರ್ಣಗೊಳಿಸಿದ್ದನ್ನು ಮನಗಂಡು, ನಮ್ಮ ಕಾರ್ಖಾನೆಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ) ನವ-ದೆಹಲಿ ಇವರಿಂದ ರೂ. 150.00 ಕೋಟಿ ಅವಧಿ ಸಾಲವನ್ನು ಮಂಜೂರ ಮಾಡಲು ಕರ್ನಾಟಕ ಘನ ಸರ್ಕಾರದಿಂದ ಶಿಫಾರಸ್ಸು ಮಾಡಬೇಕೆಂದು ಕಾರ್ಮಿಕರ ಒಕ್ಕೂಟದಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಕಾರಣ ಕಾರ್ಖಾನೆಯು ವಿನಂತಿಸಿರುವ ಉತ್ತೇಜಿತ ರೂ.150.00 ಕೋಟಿ ಅವಧಿ ಸಾಲವನ್ನು ಮಂಜೂರಿ ಮಾಡಲು ಸರ್ಕಾರದಿಂದ ಪುನ: ಶಿಫಾರಸ್ಸು ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಅರ್ಜಿಯಲ್ಲಿ ಬರೆಯಲಾಗಿತ್ತು.
ಮಾನ್ಯ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಸಾಹೇಬರು ಇವರಿಗೆ ನಮ್ಮ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಎಲ್ಲಾ ಸಿಬ್ಬಂದಿ ಕಾರ್ಮಿಕರು ಕಾರ್ಖಾನೆ ಅನುಭವಿಸುತ್ತಿರುವ ಕಷ್ಟದ ಸ್ಥಿತಿಗತಿಗಳ ಹಾಗೂ ನೌಕರರು ಅನುಭವಿಸುತ್ತಿರುವ ನೋವುಗಳ ಬಗ್ಗೆ ಮನವಿ ಪತ್ರವನ್ನು ಸಚಿವರಿಗೆ ಹಾಲಿ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ಇವರ ಸಮಕ್ಷಮದಲ್ಲಿ ಸಚಿವರಿಗೆ ಮನವಿ ಕೊಡಲಾಯಿತು.
ಚಿತ್ರದಲ್ಲಿ ಕಾರ್ಖಾನೆಯ ಮಾಜದೂರ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ ಬಾರಡ್ಡಿ, ಕಾರ್ಖಾನೆಯ ನೌಕರರ ಸಹಕಾರಿ ಪತ್ತಿನ ಬ್ಯಾಂಕಿನ ನಿರ್ದೇಶಕರಾದ ಶ್ರೀ ಅಶೋಕ ಪಾಟೀಲ್, ಶ್ರೀ ಸುಭಾಷ್ ಯಡಳ್ಳಿ ಹಾಗೂ ಮಜದೂರ್ ಸಂಘದ ಕಾರ್ಯದರ್ಶಿಗಳಾದ ಹಾಗೂ ಕರ್ನಾಟಕ ಷುಗರ್ ವರ್ಕಸ್್ರ ಫೆಡರೇಷನ್ ಉಪಾಧ್ಯಕ್ಷರಾಗಿ ಹಣಮಂತ ಪಾಂ.ಒಂಟಿಗೋಡಿ ಹಾಗೂ ಕಾರ್ಖಾನೆಯ ಕಾರ್ಮಿಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
(ಮಲ್ಲಿಕಾರ್ಜುನ ಮ ಬುರ್ಲಿ,ಕಾರ್ಖಾನೆ ಮಜದೂರ ಸಂಘದ ಸಹ ಕಾರ್ಯದರ್ಶಿಗಳು)





