ವಿಜಯಪುರ:ಬಾಬುರಾವ್ ಹೂಜರೆ ಮಹಾನ್ ಸ್ವಾತಂತ್ರ್ಯಹೋರಾಟಗಾರ.ಅವಿಭಜಿತ ವಿಜಯಪುರ-ಬಾಗಲಕೋಟ ಜಿಲ್ಲೆಯಿಂದ ಮುಂಬಯಿ ವಿಧಾನ ಸಭೆಯ ಶಾಸಕರಾಗಿ ಸೇವೆ ಸಲ್ಲಿಸಿದರು.ಹುಟ್ಟೂರು ಮಹಾರಾಷ್ಟದ ಸಾಂಗಲಿ ಜಿಲ್ಲೆ,ಜತ್ತ ತಾಲ್ಲೂಕಿನ ಖೋಜನವಾಡಿ ಗ್ರಾಮದ ಸಮಗಾರ (ಚಮ್ಮಾರ) ರ ಬಡ ಕುಟುಂಬದಲ್ಲಿ. ಬೆಳೆದದ್ದು ತಾಯಿಯ ತವರೂರು ಬೆಳಗಾವಿ ಜಿಲ್ಲೆ.ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಸೋದರ ಮಾವನವರ ಆಶ್ರಯದಲ್ಲಿ.ಶಾಲೆ ಕಲಿಯಬೇಕು.ದೇಶದ ಸ್ವತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಕು ದೇಶ ಸೇವೆ ಮಾಡುವ ಬಲವಾದ ಇಚ್ಚೆ ಅವರನ್ನು ಐತಿಹಾಸಿಕ ನಗರ ವಿಜಯಪುರಕ್ಕೆ ಕರೆ ತಂದಿತು.ಒಳ್ಳೆಯ ಶಿಕ್ಷಕರ ಬೋಧನೆ.ಸ್ವತಂತ್ರ್ಯ ಪ್ರೇಮಿಗಳ,ರಾಜಕೀಯ ನಾಯಕರ ಒಡನಾಟ.ಸಮಾಜ ಸೇವೆ.ಪ್ರಗತಿಪರ ಹೋರಾಟಗಳು ಅವರನ್ನು ಸಾರ್ವಜನಿಕರ ಅಭಿಪ್ರಾಯ ಒತ್ತಾಸೆಯಿಂದ. ಅಂದಿನ ಮುಂಬೈ ವಿಧಾನ ಸಭೆಯ ಶಾಸಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ಹಲವಾರು ಜನೋಪಯೋಗಿ. ಕೃಷಿ.ನೀರಾವರಿ.ನಿರುದ್ಯೋಗ ನಿರ್ಮೂಲನೆ.ಕೈಗಾರಿಕೆ ಬೆಳವಣಿಗೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರು.ಆದರೆ ಇವರು ಇಂದು ಯಾರಿಗೂ ನೆನಪಿಲ್ಲ. ಮರೆತು ಹೋದ ಮಹಾನುಭಾವರ ಸಾಲಿನಲ್ಲಿ ನಿಂತ ಇವರ ಕುರಿತು.ಆವರ ಕುಟುಂಬ ವರ್ಗದವರಿಗೆ.ಬಂಧು ಮಿತ್ರರಿಗೆ.ಸಮಕಾಲೀನ ಒಡನಾಡಿಗಳಿಗೆ ಹೆಚ್ಚಿನ ಮಾಹಿತಿ ಇದ್ದರೆ ತಿಳಿಸಿ.ತುಂಬ ಉಪಕಾರವಾಗುತ್ತದೆ.ಎಲೆ ಮರೆಯ ಹೂವಿನಂತೆ ಸಮಾಜದ ಉದ್ಧಾರಕ್ಕಾಗಿ.ದೇಶ ಸೇವೆಗಾಗಿ ಜೀವ ಸವೆಸಿದ.”ತನಗಾಗಿ ಏನೂ ಇಲ್ಲ.ದೇಶಕ್ಕಾಗಿ ಎಲ್ಲ”ಎಂದು ತ್ಯಾಗ ಮಾಡಿದ ಮಹನೀಯರ ಕುರಿತು ಮುಂದಿನ ಜನಾಂಗಕ್ಕೆ ತಿಳಿಸಿ ಕೊಡುವದು.ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಇವರ ಕುರಿತಾಗಿ ಹೆಚ್ಚಿನ ಮಾಹಿತಿ ಇದ್ದವರು ದಯವಿಟ್ಟು ತಿಳಿಸಿರಿ (
ದಾನೇಶ ಅವಟಿ.ವಕೀಲರು ವಿಜಯಪುರ)

LEAVE A REPLY

Please enter your comment!
Please enter your name here