ವಿಜಯಪುರ: ಕರ್ನಾಟಕ ರಾಜ್ಯದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಒಂದು ರಾಜಕೀಯ ಹಿನ್ನಲೆಯ ಇತಿಹಾಸವಿದೆ ಎಂಬುದು ಎಲ್ಲರಿಗೆ ತಿಳಿದಿರುವಂತಹ ವಿಷಯ.

ಯಾಕೆ ಈ ವಿಷಯ ತಮಗೆ ನೆನಪಿಸಿ ಕೊಳ್ಳುತ್ತೇನೆಂದರೆ ಮೊದಲು ನಮ್ಮ ಅಜ್ಜನ ಕಾಲದಿಂದಲೂ ಅಥವಾ ನಮ್ಮ ತಂದೆಯವರ ಕಾಲದಿಂದಲೂ ಇಲ್ಲಿ ಯಾವುದೇ ರೀತಿ ಪಟ್ಟಣದಲ್ಲಿ ಭಿನ್ನ ಅಭಿಪ್ರಾಯ ಬರುತ್ತಿರಲಿಲ್ಲವಂತೆ, ಹಾಗೇನಾದರೂ ಭಿನ್ನ ಅಭಿಪ್ರಾಯ ಬಂದಲ್ಲಿ ಎಲ್ಲರೂ ಒಟ್ಟುಗೂಡಿ ಒಂದು ಕಡೆ ಸೇರಿ ಮಾತನಾಡಿ ಬಗೆಹರಿಸುವ ಮನಸು ಆ ಪ್ರೀತಿ ಅವರಲ್ಲಿತ್ತು ಎಂದು ಹಿರಿಯರು ಈಗ ಹೇಳುತ್ತಿದ್ದಾರೆ.

ಬುದುವಾರ ದಿನಾಂಕ 17 ದಂದು ನಮ್ಮ ಮನಗೂಳಿ ಗ್ರೂಪ್ನಲ್ಲಿ ಪ್ರಶ್ನೆಗಳ ಸುರುಮಳೆ ಬರುತ್ತಿದ್ದವು , ಇದು ಈ ರೀತಿ ಮೆಸೇಜ್ ಗಳು ಬರುತ್ತಿರುವುದು ಮೊನ್ನೆ ನಿನ್ನೆಯ ಕಥೆ ಅಲ್ಲ ಪಟ್ಟಣ ಪಂಚಾಯಿತಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಈ ರೀತಿ ಚರ್ಚೆಗಳು ನಡೆಯುತ್ತಾ ಬಂದಿದೆ ಅದನ್ನು ಎಲ್ಲರೂ ಗಮನಿಸುತ್ತಾ ಇದ್ದರು ನಮ್ಮ ಹಿರಿಯರಿಗೆ ಈ ವಿಷಯ ತಿಳಿಸಿದೆ ಗುಂಪಿನಲ್ಲಿ ಈ ರೀತಿ ಚರ್ಚೆ ನಡೆಯುತ್ತಿದೆ ನಿಮ್ಮ ಅಭಿಪ್ರಾಯ ಏನಾದರೂ ಇದ್ದರೆ ಹೇಳಿ ಅಂತ ಪ್ರಶ್ನೆ ಮಾಡಿದಾಗ ಅವರು ಈ ರೀತಿ ಹೇಳಿದರು.

ನಮ್ಮ ಮನಗೂಳಿ ಗ್ರೂಪಿನಲ್ಲಿರುವ ಸ್ನೇಹಿತರಿಗೂ ಹಾಗೂ ಹಿರಿಯರಿಗೂ ಎಲ್ಲರಿಗೂ ಹೇಳುವುದೇನೆಂದರೆ ನೀವು ಒಮ್ಮೆ ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಜ್ಜ ಆಗಿರಬಹುದು ಅಜ್ಜಿ ಆಗಿರಬಹುದು ತಂದೆ ಆಗಿರಬಹುದು ಅವರನ್ನು ಒಮ್ಮೆ ಪ್ರಶ್ನೆ ಮಾಡಿ ಈ 20 ವರ್ಷದ ಹಿಂದೆ ನಮ್ಮ ಊರು ಹೇಗಿತ್ತು ನಮ್ಮ ಮುಖಂಡರು ಹೇಗಿದ್ದರು ಅಂತ ಕೇಳಿ, ಅದೇ ರೀತಿ ಈ 20 ವರ್ಷದಲ್ಲಿ ನಮ್ಮ ಊರು ಹೇಗೆ ಆಗಿದೆ ಮುಖಂಡರು ಹೇಗೆ ಇದ್ದಾರೆ ಅಂತ ಕೇಳಿ ನಿಮಗೆ ಎಲ್ಲವೂ ಉತ್ತರ ಸಿಗುತ್ತೆ.

ದಯಮಾಡಿ ಯಾರು ನಾನು ಹೀಗೆ ಹೇಳುತ್ತೇನೆ ಅಂತ ತಪ್ಪು ತಿಳಿಯಬೇಡಿ ಇದು ನಮ್ಮ ಮನಗೂಳಿ ಮನಗೂಳಿ ಅಭಿವೃದ್ಧಿ ಆಗಲೆಂದು ಪ್ರತಿಯೊಬ್ಬ ಸಾರ್ವಜನಿಕರ ಆಸೆ ಕೂಡ ಹೌದು ಅದಕ್ಕೆ ಯಾಕೆ ನಮ್ಮ ಮನಗೂಳಿ ಈ ರೀತಿ ಆಯ್ತು ಅನ್ನೋದು ಮನಗೂಳಿ ಜನರೇ ಪ್ರಶ್ನೆ ಹಾಕಿಕೊಳ್ಳಬೇಕು ಅಂದಾಗ ನಮ್ಮ ಮನಗೂಳಿ ಅಭಿವೃದ್ಧಿ ಆಗಲು ಸಾಧ್ಯ.

ಮುತ್ಸದ್ದಿ ರಾಜಕಾರಣಿ ಮನಗೂಳಿಯ ಕಳಸ ದಿವಂಗತ ಶ್ರೀ ಬಿ ಎಸ್ ಪಾಟೀಲ್ ಮನಗೂಳಿಯವರು ಇದ್ದಾಗ ಹೇಗೆ ನಮ್ಮ ಊರು ಶಾಂತ ಇತ್ತು ಅಂದರೆ ಅದನ್ನು ನೋಡಿದವರಿಗೆ ಗೊತ್ತು. ತಿಳಿದುಕೊಂಡವರಿಗೆ ಗೊತ್ತು.

ದಿವಂಗತ ಶ್ರೀ ಬಿ ಎಸ್ ಪಾಟೀಲ್ ಅವರು ರಾಜಕೀಯ ಮಾಡುವಾಗ ಸರ್ಕಾರದಲ್ಲಿ ಆಗ ಈಗಿರುವಷ್ಟು ಅನುದಾನ ಯಾವುದೇ ರೀತಿ ಇಲ್ಲದಿದ್ದರೂ ಬರುವ ಅನುದಾನ ಪಡೆದುಕೊಂಡು ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಎಷ್ಟು ನೀಡಬೇಕು ಅಷ್ಟು ಪ್ರಾಮುಖ್ಯತೆ ನೀಡಿದ್ದವರು.

ಮತ್ತಿಷ್ಟು ಈಗ ಮನಗೂಳಿ ಪಟ್ಟಣ ಅಭಿವೃದ್ಧಿ ಕಡೆ ಕೊಂಡುಯುತ್ತಿರುವ ನಮ್ಮ ಹೆಮ್ಮೆಯ ಸಚಿವರಾದ ಶ್ರೀ ಶಿವಾನಂದ ಎಸ್ ಪಾಟೀಲರು ಈಗ ಎಲ್ಲಾ ರೀತಿ ಸವಲತ್ತುಗಳು ನಮ್ಮ ಮನಗೂಳಿಗೆ ಕೊಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೆ ಯಾಕೆ ಹೀಗೆ ಮನಗೂಳಿಯ ಪಟ್ಟಣ ಪಂಚಾಯತಿಯ ಆದಾಗಿನಿಂದಲೂ ಮನಗೂಳಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇದೆ, ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಯಾವ ಸದಸ್ಯರು ಕೂಡ ಸಭೆ ಮಾಡುವುದಿಲ್ಲ, ಸಾರ್ವಜನಿಕರ ಸಭೆ ಕೂಡ ನಡೆಸಿ ಸಭೆ ನಡೆಸುವುದು ಇಲ್ಲ .

ಮನಗೂಳಿ ಪಟ್ಟಣ ಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಆಗಬೇಕಾದರೆ ಜನ ಪ್ರತಿನಿಧಿಗಳ ಮತ ಹಾಕಿದ ಮೇಲೆ ಇವರು ಅಧ್ಯಕ್ಷರು, ಸದಸ್ಯರು ಆಗಿದ್ದಾರೆ ಅನ್ನೋದನ್ನ ಮರೆತಿದ್ದಾರೆ ಅನಿಸುತ್ತೆ.

ಅವರವರ ವೈಯಕ್ತಿಕ ರಾಜಕೀಯ ಮಾಡುವುದಾದರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಅಡಿಯಲ್ಲಿ ಕೆಲಸ ಮಾಡುತ್ತೇನೆ ಅಂತ ಸುಳ್ಳು ಪ್ರಮಾಣ ಮಾಡಿ ಯಾವತ್ತು ರಾಜಕೀಯಕ್ಕೇ ಬರಬಾರದಿತ್ತು.

ಮನಗೂಳಿ ಅಭಿವೃದ್ಧಿ ಮಾಡಲು ಹೊರಟಿರುವ ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಮನಗೂಳಿ ನಿಜವಾಗಲೂ ನೀವು ಅಭಿವೃದ್ಧಿ ಮಾಡುತ್ತಿದ್ದೀರಿ ಎಂದರೆ ಮೊದಲು ನೀವೆಲ್ಲರೂ ನೆಟ್ಟೆಗೆ ಇರಲು ಕಲಿಯಿರಿ ಆಗಾಗ ಸಭೆಗಳನ್ನು ನಡೆಸಿ ಬೇಕಾಬಿಟ್ಟಿ ನಿಮಗೆ ಬೇಕಾದವರನ್ನು ಕರೆಯಿಸಿ ಸಭೆ ಮಾಡುವುದು ಶೋಭೆಯಲ್ಲ,

ಆಡಳಿತ ಮಂಡಳಿ ಯಲ್ಲಿರುವರು ಎಲ್ಲ ಸದಸ್ಯರನ್ನು ಕರೆಯಿಸಿ ಒಂದು ನಿರ್ಧಾರ ತೆಗೆದುಕೊಂಡು ಆಮೇಲೆ ಒಂದು ಸಾರ್ವಜನಿಕ ಸಭೆನದಿಸಿ ಮನಗೂಳಿಯಲ್ಲಿ ಅಭಿವೃದ್ಧಿ ಮಾಡುವ ಕೆಲಸ ಬಗ್ಗೆ ತಿಳಿಸಿ ಜನರ ಅಭಿಪ್ರಾಯ ತೆಗೆದುಕೊಂಡು ಮುಂದಿನ ತೀರ್ಮಾನ ಮಾಡಿ ಅಂದಾಗಲೇ ನಮ್ಮ ಮನಗೂಳಿ ಪಟ್ಟಣ ಅಭಿವೃದ್ಧಿಯಾಗುತ್ತದೆ.
ಅದು ಬಿಟ್ಟು ಬೇಕಾಬಿಟ್ಟಿ ನೀವೇ ಮಾಡಿದ್ದು ಸರಿ ಅಂತ ನಿಮ್ಮ ಬೆನ್ನಿಗೆ ನೀವೇ ಶಭಾಷ್ ಗಿರಿ ತಟ್ಟಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಒಮ್ಮೆ ನೀವೇ ಯೋಚಿಸಿ..

ಇಷ್ಟು ದಿನ ಮನಗೂಳಿ ಪಟ್ಟಣದಲ್ಲಿರುವ ಎಲ್ಲಾ ವಾರ್ಡ್ ಗಳ ಸಭೆ ನಡೆಸಿಕೊಂಡು ಬಂದಿದ್ದೀರಿ, ಆ ಸಭೆಯಲ್ಲಿ ವಾರ್ಡಿನ ಸಾರ್ವಜನಿಕರು ಕೇಳಿರುವ ಪ್ರಶ್ನೆಗಳಿಗೆ ಯಾವುದಾದರೂ ನೀವು ಉತ್ತರ ಕೊಟ್ಟಿದ್ದೀರಾ ಅಥವಾ ಅವರ ಕೊರತೆಗಳನ್ನು ದೂರು ಮಾಡಿದ್ದೀರಾ ಒಮ್ಮೆ ಯೋಚಿಸಿ..
ಸಭೆಯಲ್ಲಿ ಮಾಡುತ್ತೇನೆ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಅಂತ ಹೇಳಿ ಸಭೆ ಮುಗಿಸುವ ಕೆಲಸ ನೀವು ಮಾಡಬಾರದು ಜನರ ಕೊರತೆಗಳನ್ನು ದೂರು ಮಾಡಲು ಮುಂದಾಗುವ ಮುಖಂಡರುಗಳು ನೀವಾಗಬೇಕು.

ನೀವು ನಡೆಸಿರುವ ಸಭೆ ಮನಗೂಳಿ ಪಟ್ಟಣದಲ್ಲಿ ಯಾರಿಗೂ ತೃಪ್ತಿಕರ ಆಗಿಲ್ಲ ಸಭೆಯಲ್ಲಿ ನೀವು ನೀಡಿರುವ ಆಶ್ವಾಸನೆ, ಭರವಸೆಗಳು ಹೆಚ್ಚು, ಕೆಲವೊಂದು ವಾರ್ಡ್ ಸಭೆಗಳಲ್ಲಿ ಸಾರ್ವಜನಿಕರನ್ನು ನಿಮ್ಮ ಕಡೆ ಮಾತನಾಡಿಸಲು ಹೇಳಿಕೊಟ್ಟಿದ್ದೀರಿ ಅಂತ ಜನತೆಗೆ ಗೊತ್ತಾಗಿದೆ ಗೊತ್ತಾಗಿದೆ.

ನಮ್ಮ ಮನಗೂಳಿಯ ಜನತೆ ತುಂಬಾ ಬುದ್ಧಿವಂತರು ಅಷ್ಟೇ ಮೃದು, ಸಹನೆ, ಶಾಂತಿ ಜೊತೆಗೆ ಎಲ್ಲರೂ ವಿದ್ಯಾವಂತರು, ಪ್ರಜ್ಞಾವಂತರು ನೀವು ಮಾಡುವುದನ್ನು ಎಲ್ಲವನ್ನು ಸಹಿಸು ಕೊಂಡು ಇದ್ದಾರೆ ಅಂದರೆ ಅವರಿಂದ ಏನು ಮಾಡಲು ಆಗುವುದಿಲ್ಲಂತಲ್ಲ, ನೀವೆಲ್ಲರೂ ಏನು ಮಾಡುತ್ತೀರಿ ಅಂತ ಕಾದು ಕೊಂಡು ಕುಳಿತಿದ್ದಾರೆ ಯಾವಾಗ ಏನು ಮಾಡಬೇಕು ಅಂತ ದೇವರು ಬುದ್ಧಿ ಕೊಟ್ಟಿದ್ದರೆ ಅದು ತಮಗೆಲ್ಲರಿಗೆ ನೆನಪಿರಬೇಕಾದ ವಿಷಯ ‘ತುಂಬಿದ ಕೊಡ ತುಳುಕುವುದಿಲ್ಲ’ ಎಣ್ಣೆ ಇರುವಷ್ಟು ಬತ್ತಿ ಬೆಳಕು ಕೊಡುತ್ತೆ ದೀಪ ಆಮೇಲೆ…

ಸೂಕ್ಷ್ಮವಾಗಿ ಗಮನಿಸಿ ನಮ್ಮಲ್ಲಿ ದೊಡ್ಡ ದೊಡ್ಡ ರಾಜಕೀಯ ಮುಖಂಡರಿದ್ದಾರೆ ಊರಿನ ಗಣ್ಯ ವ್ಯಕ್ತಿಗಳಿದ್ದಾರೆ ಎಲ್ಲರೂ ಯಾಕೆ ಸಹನೆಯಿಂದ ಸುಮ್ಮನೆ ಇದ್ದಾರೆ ಎಂಬುದು ತಿಳಿದುಕೊಳ್ಳಿ, ಯಾವತ್ತಾದರೂ ಇವರೆಲ್ಲರನ್ನು ಊರಿನ ಅಭಿವೃದ್ಧಿ ಮಾಡುವ ವಿಷಯದ ಸಲುವಾಗಿ ಇವರನ್ನು ಕರೆಯಿಸಿ ಮಾತುಕತೆ ಮಾಡಿದ್ದೀರಾ ಇವರ ಸಹಕಾರ ಬೆಂಬಲ ಕೇಳಿದ್ದೀರಾ….

ನಮ್ಮ ಮನಗೂಳಿ ಪಟ್ಟಣದಲ್ಲಿ ಸಾರ್ವಜನಿಕರ ಕುಂದು ಕೊರತೆಗಳು ತುಂಬಾ ಇದೆ ಆದರೆ ಕೆಲವು ಆಡಳಿತ ಮಂಡಳಿಯವರು ಇದರ ಕಡೆಗೆ ಗಮನ ಹರಿಸುತ್ತಿಲ್ಲ (ಸದಸ್ಯರಾಗಿರಬಹುದು ಅಥವಾ ಅಧ್ಯಕ್ಷರಾಗಿರಬಹುದು) ಅವರವರ ಸ್ವಾರ್ಥ ರಾಜಕಾರಣಿ ಮಾಡುತ್ತಿದ್ದಾರೆ ಇನ್ನೂ ಕೆಲವರು ಮನಗೂಳಿ ಅಭಿವೃದ್ಧಿ ಮಾಡಬೇಕು ಅನ್ನುವವರು ಇದ್ದಾರೆ ಸದಸ್ಯರು ಆದರೆ ಅವರ ಮಾತು ಏನು ನಡೆಯುತ್ತಿಲ್ಲ.. ನಾವೇ ಮನಗೂಳಿ ಪಟ್ಟಣಕ್ಕೆ ಸರ್ವಾಧಿಕಾರಿ ಅಂತ ಮೆರೆಯುವ ರಾಜಕೀಯ ಮುಖಂಡರೆಂದು ಎದೆ ಉಬ್ಬಿಸಿ ನಡೆಯುವವರನ್ನು ಆದಷ್ಟು ಬೇಗ ಸಾರ್ವಜನಿಕರು ಎಲ್ಲರೂ ಒಟ್ಟುಗೂಡಿ ಮುಖಕ್ಕೆ ಮಸಿ ಬಳಿಯುವುದು ಅತಿ ಶೀಘ್ರದಲ್ಲಿ ಇದೆ ಎಂದು ಗುಸು-ಗುಸು ಮಾತು ಕೇಳಿ ಬರುತ್ತಿವೆ ಮನಗೂಳಿ ಪಟ್ಟಣದಲ್ಲಿ.

ಕಾಲಚಕ್ರ ತಿರುಗುತ್ತಾನೆ ಇರುತ್ತೆ ಕಾಲ ಒಂದೇ ರೀತಿ ಇರುವುದಿಲ್ಲ ಮಾಡಿದ್ದುಣ್ಣೋ ಮಾರಾಯ ಎಂಬ ಗಾದೆ ನೆನಪು ಮಾಡಿಕೊಳ್ಳಬೇಕು ಎಂದು ಮನಗೂಳಿ ಪ್ರತಿ ವಾರ್ಡ್ಗಳಲ್ಲಿ ಗುಸು ಗುಸು ಮಾತು ಹಬ್ಬಿವೆ.

ಕಳೆದ ಬಾರಿ ಮನಗೂಳಿಯಲ್ಲಿ ಕೆನರಾ ಬ್ಯಾಂಕ್ ಕಳ್ಳತನವಾಗಿತ್ತು ಆಗ ಸಭೆಗಳು ಆಗಾಗ ನಡೆದವು ಕೂಡ ಅದರಲ್ಲಿ ಪಂಚಾಯತಿಯ ಎಲ್ಲಾ ಸಾರ್ವಜನಿಕರ ಮತ ಪಡೆದುಕೊಂಡಿರುವ ಜನಪ್ರತಿನಿಧಿಗಳು ಅನಿಸಿಕೊಂಡವರು ಕೆಲವು ಸದಸ್ಯರನ್ನು ಬಿಟ್ಟರೆ ಇನ್ನು ಉಳಿದವರು ಎಲ್ಲರೂ ಬಂದಿದ್ದರು ನಿಜ ಅಲ್ವಾ ಅದು ಯಾಕೆ ಹಾಗೆ ಆಯ್ತು ಎಲ್ಲರೂ ಬರಬಹುದಿತ್ತಲ್ವಾ ..!

ಇತ್ತೀಚಿಗಷ್ಟೇ ರೈತರ ಪರವಾಗಿ ರೈತ ಬೆಳೆದ ಬೆಳೆ ಕಟಾವ್ ಮಾಡಲು ಮಷೀನ್ ಬೆಲೆ ಕಡಿಮೆ ಮಾಡಬೇಕು ಒಂದು ಎಕರೆಗೆ ಇಂತಿಷ್ಟು ಅಂತ ಬೆಲೆ ನಿಗದಿ ಪಡಿಸುವ ಬಗ್ಗೆ ಸೋಮೇಶ್ವರ ಭಜನಾ ಮಂಟಪದಲ್ಲಿ ಅಮ್ಮಿಕೊಂಡಿದ್ದ ಸಭೆಯಲ್ಲಿ ಯಾಕೆ ಎಲ್ಲರೂ ಬಂದು ಇದನ್ನು ಸರಿದೂಗಿಸಲಿಲ್ಲ..!

ನಮ್ಮ ಬಸವನ ಬಾಗೇವಾಡಿ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರ ಸಚಿವರಾದ ಶ್ರೀ ಶಿವಾನಂದ್ ಎಸ್ ಪಾಟೀಲ್ ಅವರು ಕೇಳದೆ ಮನಗೂಳಿ ಪಟ್ಟಣ ಅಭಿವೃದ್ಧಿ ಮಾಡಲು ಎಲ್ಲಾ ರೀತಿ ಸಹಕಾರ ನೀಡಿದ್ದಾರೆ ಈಗಲೂ ನೀಡುತ್ತಿದ್ದಾರೆ, ಇವರಿಲ್ಲದಿದ್ದರೂ ನಮ್ಮ ಶಾಸಕರು ನಮ್ಮ ಮನಗೂಳಿ ಅಭಿವೃದ್ಧಿಗೆ ಶ್ರಮಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅವರ ಹೆಸರನ್ನು ಹೆಚ್ಚಿಸುವ ಕೆಲಸ ಯಾಕೆ ಇವರು ಮಾಡುತ್ತಿಲ್ಲ ಎಂಬುದು ಮನಗೂಳಿ ಪಟ್ಟಣದ ಸಾಮೂಹಿಕ ಅಭಿಪ್ರಾಯವಾಗಿದೆ.

ಆಡಳಿತ ಮಂಡಳಿಯಲ್ಲಿ ಎಲ್ಲರೂ ಕೆಟ್ಟವರು ಹಾಗೆ ಹೀಗೆ ಅಂತ ನಾನು ಇಲ್ಲಿ ಯಾರು ಯಾರಿಗೂ ಟೀಕೆ ಮಾಡುವುದಿಲ್ಲ ಕೆಲವರು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಆದರೆ ಅವರ ಮಾತು ಏನು ನಡೆಯುತ್ತಿಲ್ಲ ಹಾಗಾಗಿ ಮನಗೂಳಿ ಸಾರ್ವಜನಿಕರ ಬುದ್ಧಿವಂತ ಪ್ರಜೆಗಳ ಅಭಿಪ್ರಾಯ ನಮ್ಮ ಮನಗೂಳಿ, ನಮ್ಮ ಹೆಮ್ಮೆಯ ಮನಗೂಳಿ, ನಮ್ಮ ಮನಗೂಳಿ ಎಲ್ಲಾ ರೀತಿ ಅಭಿವೃದ್ಧಿ ಆಗಬೇಕು ಅನ್ನೋದೇ ಊರಿನ ಪ್ರತಿಯೊಬ್ಬರ ಆಸೆಯೊಂದಿಗೆ…
ಇಷ್ಟು ದಿನ ಏನಾಯ್ತು ಆಯ್ತು ಇನ್ನು ಮುಂದೆಯಾದರೂ ಎಲ್ಲರೂ ಒಂದು ಒಂದುಗೂಡಿ ಮನಗೂಳಿ ಅಭಿವೃದ್ಧಿಗೆ ಶ್ರಮಿಸಿ ಆಗಾಗ ಸಾರ್ವಜನಿಕರ ಸಭೆಗಳನ್ನು ನಡೆಸಿ ಅವರ ಕೊಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿ ಮನಗೂಳಿ ಅಭಿವೃದ್ಧಿಗಾಗಿ ತಾವುಗಳು ಕಾರ್ಯ ನಿರ್ವಹಿಸುತ್ತೀರಿ ಅಂತ ನಂಬಿರುತ್ತೇವೆ,..

(✍️ ಮಲ್ಲಿಕಾರ್ಜುನ ಮ ಬುರ್ಲಿ
ಮನಗೂಳಿ)

LEAVE A REPLY

Please enter your comment!
Please enter your name here