ವಿಜಯಪುರ:ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಪೀಠ ಸರೂರ ಜಗದ್ಗುರುಗಳು ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 91 ದಿನದ ಅನಿರ್ಧಿಷ್ಟ ಧರಣಿ 3ನೇ ದಿನದ ಅಹೋರಾತ್ರಿ ಧರಣಿ ಉದ್ದೇಶಿಸಿ ಮಾತನಾಡಿದ ಅವರು ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿದ ಅವರು ಸರಕಾರ ಸರಕಾರಿ ಮೆಡಿಕಲ್ ಕಾಲೇಜ್ ಮಾಡದಿದ್ದರೆ ತಾವು ಕೂಡಾ ಅಹೋರಾತ್ರಿ ಅನಿರ್ಧಿಷ್ಟ ಧರಣಿ ಸಂದರ್ಭ ಬಂದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರುಗಳಾದ ಲಲಿತಾ ಬಿಜ್ಜರಗಿ, ಅನಿಲ ಹೊಸಮನಿ, ಬಾಬುರಾವ ಬೀರಕಬ್ಬಿ, ಜಗದೇವ ಸೂರ್ಯವಂಶಿ, ಎಂ ಆರ್ ಗುರಿಕಾರ, ಮಲ್ಲಿಕಾರ್ಜುನ ಬಟಗಿ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಸುರೇಶ ಬಿಜಾಪುರ, ಸಂಜೀವ ಶಟಗಾರ,ಸಿದ್ದನಗೌಡ ಪಾಟೀಲ ಪ್ರಕಾಶ ಸಬರದ, ಮೀನಾಕ್ಷಿ ಸಿಂಗೆ, ಶರಣಪ್ಪ ಕಟ್ಟಿ ಮಲ್ಲಪ್ಪಗೌಡ ಬಿರಾದಾರ ಮಾರುತಿ ಬೂದಿಹಾಳ ಗೀತಾ ಎಚ್ ಶಿವರಂಜಿನಿ,ಈಶ್ವರಚಂದ ಪಡಗಾನೂರ ಲಾಯಪ್ಪ ಇಂಗಳೆ ಸೇರಿದಂತೆ ವಿವಿಧ ಹೋರಾಟಗಾರರು ಉಪಸ್ಥಿತರಿದ್ದರು.





