ವಿಜಯಪುರ:ವಿಜಯಪುರ ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ 27ನೇ ದಿನ ಪೂರೈಸಿದೆ.

ವಿಜಯಪುರ ಧರಣಿಗೆ ಬೆಂಬಲಿಸಿ ಬಬಲೇಶ್ವರದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿಜಯಪುರದಲ್ಲಿ ಸರಕಾರಿ ಆಸ್ಪತ್ರೆ ಯನ್ನು ಪಿ ಪಿ ಪಿ ಹೆಸರಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ. ಖಾಸಗಿ ಅವರಿಗೆ ಮಾರಾಟ ಮಾಡಲು ನಡೆಸುತ್ತಿರುವ ಹುನ್ನಾರವನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಸರಕಾರದ ನಡೆಯನ್ನು ಖಂಡಿಸಿದರು.

ಸರಕಾರದ ಖಾಸಗಿಕರಣ ನಡೆಯನ್ನು ಖಂಡಿಸಿ ಸಂಪೂರ್ಣ ಸರಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡಲು ಒತ್ತಾಯಿಸಿ ಸಂಘಟನೆಗಳ ಮುಖಂಡರು ಒಕ್ಕೋರಲಿನಿಂದ ಅಗ್ರಹಿಸಿದರು.

ಬಬಲೇಶ್ವರ ತಹಸೀಲ್ದಾರ ಮೂಲಕ ಸರಕಾರಕ್ಕೆ ಹೋರಾಟಗಾರರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಭಗವಾನ ರೆಡ್ಡಿ, ಮಲ್ಲಿಕಾರ್ಜುನ ಬಟಗಿ,ಲಕ್ಷ್ಮಣ ಹಂದ್ರಾಳ, ಜಗದೇವ ಸೂರ್ಯವಂಶಿ,ಲಿಂಗರಾಜ ಬಿದರಕುಂದಿ ಅಕ್ರಂ ಮಾಶಾಳಕರ ಸೇರಿದಂತೆ ಕನ್ನಡ ಪರ ಹಾಗೂ ರೈತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

.

LEAVE A REPLY

Please enter your comment!
Please enter your name here