ಇಲಕಲ್ಲ

ಜಾತಿಗಣತಿ ಸಮೀಕ್ಷೆಯ ವಿಷಯದಲ್ಲಿ ಹಿಂದೂ ಎಂದು ಬರೆಸಬೇಕೆಂದು ಕೆಲವು ಮಠಾಧೀಶರುಗಳಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದಲೇ ಫಂಡಿಂಗ್ ಆಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

ಇಲಕಲ್ಲ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಸಮೀಕ್ಷೆ ವಿಚಾರದಲ್ಲಿ ಸ್ವಾಮೀಜಿಗಳಿಗೆ ಫಂಡಿಂಗ್ ಮಾಡಿ ಹಿಂದೂ ಅಂತ ಬರೆಸಲು ಒತ್ತಡ ಹಾಕಿದ್ದಾರೆ ಎನ್ನುವ ಮಾಹಿತಿಯಿದೆ. ಯಾವ ಯಾವ ಮಠಾಧೀಶರು ಅಂತ ಹೇಳೋದಿಲ್ಲ. ಕೆಲವರು ವಿರೋಧ ಮಾಡಿದ್ದಾರೆ.

ನಮ್ಮ ರಾಷ್ಟ್ರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು. ಅದು ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ, ಎಂದು ಕಾಶಪ್ಪನವರ ಹೇಳಿದರು.

ಕೂಡಲಸಂಗಮದಲ್ಲೇ ಮತ್ತೇ ಪೀಠ ಕಟ್ಟಿ ಬೆಳೆಸ್ತೇವೆ ಎಂದು ಉಚ್ಚಾಟಿತ ಪೂಜ್ಯ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು ಹಣ ಹಾಕಿ ಯಾವ ನದಿ ದಂಡೆಯಲ್ಲಾದ್ರೂ ಮಠ ಕಟ್ಟಿಕೊಳ್ಳಲಿ. ಅವರ ಹಿಂದುತ್ವವನ್ನೇ ಪಾಲನೆಮಾಡಲಿ. ನಮ್ಮದು ಬಸವ ತತ್ವ, ಅದರಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುವವರು ಮಾತ್ರ ನಮ್ಮ ಗುರುಗಳು, ಎಂದರು.

ತಾವು ಮೃತ್ಯುಂಜಯ ಶ್ರೀಗಳ ಮೇಲೆ ಮಾಡಿರುವ ಎಲ್ಲಾ ಆರೋಪಕ್ಕೂ ದಾಖಲೆಗಳಿವೆ ಎಂದು ಸ್ಪಷ್ಟನೆ ನೀಡಿದರು.

ಕೆಲವೊಂದು ವಿಷಯಗಳನ್ನು ಮಾಧ್ಯಮಗಳ ಮು೦ದೆ ಹಂಚಿಕೊಳ್ಳಲು ಆಗೋದಿಲ್ಲ. ಸಂದರ್ಭ ಬಂದ್ರೆ ಯಾವುದನ್ನು ಹೇಳೋದಕ್ಕೂ ಹೇಸೋದಿಲ್ಲ, ಅದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ಇವರ ಅಕ್ರಮಗಳನ್ನೆಲ್ಲ ಒಂದು ಸಿಡಿಯಲ್ಲಿ ಹಾಕಿಟ್ಟಿದ್ದೇವೆ ಮಾಡಿದ್ದೇವೆ. ಸಮಯ ಬಂದಾಗ ಬಹಿರಂಗ ಪಡಿಸ್ತೀವಿ, ಎಂದು ಎಚ್ಚರಿಸಿದರು.

“ನಾನು ಹೇಳಿದ್ದು ಆ ಸಿಡಿ ವಿಚಾರವಲ್ಲ. ಆ ಸಿಡಿಯನ್ನ ಯಾರ್ಯಾರೋ ಖರೀದಿ ಮಾಡಿ ಹಂಚಿಕೊಂಡಿದ್ದಾರೆ,” ಎಂದು ನಿಗೂಢವಾಗಿಯೇ ಕಾಶಪ್ಪನವರ ಹೇಳಿದರು.

“ಸಿಡಿ ವಿಚಾರದಲ್ಲಿ ಭಯ ಯಾಕೆ ಇದೆ ಅವರಿಗೆ. ಎಲ್ಲವನ್ನು ತಂತ್ರಜ್ಞಾನದಿಂದ ಮಾಡೋಕೆ ಆಗುತ್ತಾ, ಅಷ್ಟು ನಿಷ್ಠಾವಂತರಾಗಿದ್ದರೆ ಭಯ ಯಾಕೆ,” ಎಂದು ಪ್ರಶ್ನಿಸಿದ್ದಾರೆ.(ಕೃಪೆ:ಬಸವ ಮೀಡಿಯಾ ಗರುಪ್)

LEAVE A REPLY

Please enter your comment!
Please enter your name here