ಕಲಬುರ್ಗಿ: ಹಿಂದುಳಿದ ಆಯೋಗವು ಸಾರ್ವಜನಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ದಿನಾಂಕ 22-8-25 ರಂದು ಪ್ರಕಟಣೆ ಹೊರಡಿಸಿದ್ದು ಆಯೋಗದ ಕ್ರಮ ಸಂಖ್ಯೆ 4 ಮತ್ತು 8 ಕ್ರಮವಾಗಿ ಸಂಖ್ಯೆ 4 ರಲ್ಲಿ ಆದಿ ಬಣಜಿಗ ಲಿಂಗಾಯತ 8 ರಲ್ಲಿ ಆದಿ ಬಣಜಿಗ ಎಂದು ನಮೂದಿಸಿದ್ದು ಸದರಿ ಎರಡು ಹೆಸರಿನಲ್ಲಿರುವ ಸಮಾಜ ಒಂದೇ ಆಗಿದ್ದು ಇಲ್ಲಿ ಹಿಂದುಳಿದ ಆಯೋಗ ಸರ್ಕಾರ ಕಾಣದ ಕೈಗಳು ಆದಿ ಬಣಜಿಗ ಸಮಾಜವನ್ನು ಭಾಗಗಳಾಗಿ ಜನಸಂಖ್ಯೆ ಕುಗ್ಗಿಸುವ ಹುನ್ನಾರ ನಡೆಸಿದ್ದು ಸಮಾಜವು ಇದನ್ನು ಉಗ್ರವಾಗಿ ಖಂಡಿಸುತ್ತದೆ ಈ ಕೂಡಲೇ ಇದ್ದನ್ನು ಕೈಬಿಟ್ಟು ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ಸಮಾಜವನ್ನು ಅಲ್ಪಸಂಖ್ಯಾತರನ್ನಾಗಿಸಿ ಜನಸಂಖ್ಯೆ ಮೇಲೆ ಸಮಾಜಕ್ಕೆ ಸ್ಥಾನಮಾನ ವಂಚಿತರನ್ನಾಗಿ ಮಾಡುವ ಹುನ್ನಾರವನ್ನು ಆದಿ ಬಣಜಿಗ ಸಮಾಜವು ಖಂಡಿಸುತ್ತದೆ ಈ ಕೂಡಲೇ ಹಿಂದುಳಿದ ಆಯೋಗ ಮೇಲಿನ ಕ್ರಮ ಸಂಖ್ಯೆ 4 ಮತ್ತು 8 ರಲ್ಲಿ ಕ್ರಮವಾಗಿ ಆದಿ ಬಣಜಿಗ ಲಿಂಗಾಯತ ಮತ್ತು ಆದಿ ಬಣಜಿಗ ಎರಡನ್ನು ಒಂದೇ ಕ್ರಮ ಸಂಖ್ಯೆಯಲ್ಲಿ ಆದಿ ಬಣಜಿಗ ಮಾತ್ರ ಎಂದು ನಮೂದಿಸಬೇಕೆಂದು ಸರ್ಕಾರಕ್ಕೆ ಮತ್ತು ಹಿಂದುಳಿದ ಆಯೋಗಕ್ಕೆ ಪತ್ರ ಬರೆದು ಆದಿ ಸಮಾಜದ ರಾಜ್ಯ ಕಾರ್ಯದರ್ಶಿ ವಿಶ್ವನಾಥ ಪಾಟೀಲ ಗವನಳ್ಳಿ ಒತ್ತಾಯಿಸಿದ್ದಾರೆ ಒಂದು ವೇಳೆ ಅಖಂಡ ಆದಿ ಬಣಜಿಗ ಒಂದೇ ಕ್ರಮ ಸಂಖ್ಯೆಯಲ್ಲಿ ನಮೊದಿಸಿ ಸಮಾಜಕ್ಕೆ ನ್ಯಾಯ ಒದಗಿಸಲು ಸರ್ಕಾರ ಮತ್ತು ಹಿಂದುಳಿದ ಆಯೋಗ ನಿರ್ಲಕ್ಷ್ಯ ಧೋರಣೆ ತಾಳಿದ್ದರೆ ಸಮಾಜವು ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ