ನಿಪ್ಪಾಣಿ ನಗರದಲ್ಲಿ ಜೊಲ್ಲೆ ಗ್ರೂಪ್ ಮತ್ತು ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಸಮೃದ್ಧಗೊಳಿಸಲು ಮತ್ತು ಪರಿಸರವನ್ನು ರಕ್ಷಿಸಲು ಪತಂಜಲಿ ವೃಕ್ಷಾರೋಪಣ ಮಾಸದ ಅಂಗವಾಗಿ “ಗಿಡಮೂಲಿಕೆ ವಿತರಣಾ”
(‘ಜಡಿ -ಬೂಟಿ’)ದಿನಾಚರಣೆ ಆಚರಿಸಿ,ಆಯುರ್ವೇದಿಕ್ ಸಸಿಗಳನ್ನು ನೆಡಲಾಯಿತು.
ಭಾರತವು ಆಯುರ್ವೇದಿಕ ಸಸ್ಯಗಳ ಧಾನ್ಯಭೂಮಿ. ಇಲ್ಲಿಯ ಪ್ರಾಚೀನ ಆಯುರ್ವೇದ ಶಾಸ್ತ್ರವು ನಮಗೆ ಸಸ್ಯಗಳ ಮೂಲಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿಸಿದೆ.ತುಳಸಿ, ನಿಂಬೆ,ಅಮಲಕ,ಅಶ್ವಗಂಧ,ಮುಂತಾದ ಗಿಡಮೂಲಿಕೆಗಳು ಅನೇಕ ರೋಗಗಳಿಗೆ ಮನೆಮದ್ದುಗಳಾಗಿ ಉಪಯೋಗವಾಗುತ್ತಿವೆ.
ಮನೆಗಳಲ್ಲಿ,ಶಾಲೆಗಳಲ್ಲಿ ಆಯುರ್ವೇದಿಕ ಗಿಡಮೂಲಿಕೆಗಳನ್ನು ಬೆಳೆಸುವುದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ಪರಿಚಯಿಸಿ ಪಾರಂಪರಿಕ ಆರೋಗ್ಯ ಕಾಪಾಡಬಹುದು.ಆಚಾರ್ಯ ಬಾಲಕೃಷ್ಣ ಜಿ ಜನ್ಮದಿನವನ್ನು ಜಡಿ ಬೂಟಿ ದಿನಾಚರಣೆ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಎಂ.ಪಿ.ಪಾಟೀಲ, ಅರ್ಯುವೇದಿಕ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ ಡುಂಡಿ,ಡಾ. ದಾನಮ್ಮ ಹಂಜಿ,ನಿಪ್ಪಾಣಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ಶ್ರೀ ಜೆ.ಡಿ.ಶಿಂಧೆ, ಉಪಾಧ್ಯಕ್ಷರಾದ ಶ್ರೀ ದಶರಥ ಕುಂಬಾರ,ಶ್ರೀ ಸುಭಾಷ ಮೆಹತಾ, ಶ್ರೀಮತಿ ಆಶಾ ತಿಳವೆ,ಶ್ರೀಮತಿ ಸುಪ್ರಿಯಾ ಭುಸಾರಿ,ಯೋಗ ಸಮಿತಿ ಸದಸ್ಯರು,ನಗರಸಭೆ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.