ಬೆಂಗಳೂರು:ಭಾರತ ಸರ್ಕಾರದ ರೈಲ್ವೆ ಮಂತ್ರಾಲಯದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ಪಾಸ್ ನೀಡುವ ಯೋಜನೆ ಈ ಮೊದಲು ಜಾರಿಯಲ್ಲಿತ್ತು. ಇದರಿಂದಾಗಿ ಶೇಕಡ 50 ರಿಯಾಯಿತಿ ದರದಲ್ಲಿ ರೈಲು ಪ್ರಯಾಣ ಮಾಡುವ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗಿತ್ತು.
ಕೋವಿಡ್ ನಂತರ ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರದಿಂದ ಪತ್ರಕರ್ತರಿಗೆ ಲಭ್ಯವಿದ್ದ ಯೋಜನೆಯು ಇಲ್ಲದಂತಾಗಿದೆ.

ಆದುದರಿಂದ ತಾವುಗಳು ಈ ಬಗ್ಗೆ ಮರುಚಿಂತನೆ ಮಾಡಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಮೊದಲು ಇದ್ದಂತೆ ರೈಲ್ವೆ ಪಾಸ್ ಸೌಲಭ್ಯವನ್ನು ಈ ಕೂಡಲೆ ಪುನರಾರಂಭಿಸಬೇಕೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ್ ರವರು ಕೇಂದ್ರ ರೈಲ್ವೆ ರಾಜ್ಯಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಮನವಿ ಮಾಡಿಕೊಂಡಿದ್ದರ ಫಲದಿಂದಾಗಿ.ವಿ.ಸೋಮಣ್ಣ ನವರು ಮನವಿಗೆ ಸ್ಪಂದಿಸಿ ಮರು ಪತ್ರ ಬರೆದು ತಮ್ಮ ಮನವಿ ಸ್ವೀಕರಿಸಿದ್ದೇನೆ ಮುಂದಿನ ಕ್ರಮಕ್ಕಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕಾಗಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.