ವಿಜಯಪುರ : “ನನ್ನೊಳಗಿನ ನಾನು ನೀನೇ “ಎಂಬ ಕೃತಿಯ ಮೂಲಕ ಶ್ರೇಷ್ಠ ವಚನ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡಿ .ವಿಶ್ವ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ವಿಜಯಪುರ ಜಿಲ್ಲೆಯ ಹೆಮ್ಮೆಯ ದಕ್ಷ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಸಾಹೇಬರು ನೀಡಿದ್ದಾರೆ. ಈ ಶ್ಲಾಘನೀಯ ಕಾರ್ಯವನ್ನು ಎಷ್ಟು ಕೊಂಡಾಡಿದರು ಕಡಿಮೆಯೇ ಎಂದು ಕಿತ್ತೂರು ಕರ್ನಾಟಕ ಪಂಚಸೇನೆ ಸಂಚಾಲಕ. ಯುವ ಮುಖಂಡ ಶರಣ ಬಸಪ್ಪ ಗಂಗಶಟ್ಟಿ ನುಡಿದರು. ನಗರದ ಗಾಂಧಿ ವೃತ್ತ ಪೋಲಿಸ್ ಠಾಣೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ದಿನಾಂಕ ೦೪-೦೭-೨೦೨೫ ರಂದು ಸಾಯಂಕಾಲ ಬೇಟಿಯಾಗಿ ಡಿವೈಎಸ್ಪೀ ಬಸವರಾಜ ಯಲಿಗಾರ ಸಾಹೇಬರಿಗೆ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಿ ಮಾತನಾಡಿದರು. ಪಂಚಸೇನೆ ಜಿಲ್ಲಾ ಅಧ್ಯಕ್ಷ ಸಂತೋಷ ಮುಂಜಣ್ಣಿ ಬಸವಾದಿ ಶರಣರು ಜನಿಸಿದ ನಾಡಲ್ಲಿ ಪೋಲೀಸ್ ಅಧಿಕಾರಿಗಳು ಶರಣರ ತತ್ವ ಚಿಂತನೆ ಮೈಗೂಡಿಸಿಕೊಂಡು ಕಲೆ. ಸಾಹಿತ್ಯ.ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಸಂತೋಷದ ವಿಷಯ. ಶ್ರೀಯುತರ ಕಾರ್ಯ ಇನ್ನೂ ಮುಂದುವರೆಯಲಿ ಇನ್ನೂ ಹೆಚ್ಚಿನ ಕೃತಿ ಪುಷ್ಪಗಳು ಹೊರಹೊಮ್ಮಿ ಭಾರತೀಯ ಮತ್ತು ವಿಶ್ವ ಸಾಹಿತ್ಯಕ್ಕೂ ಹೆಚ್ಚಿನ ಕೊಡುಗೆ ನೀಡಲಿ ಎಂದು ಆಶಿಸಿದರು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹೋರಾಟ ವೇದಿಕೆ ಬೆಂಗಳೂರು ಜಿಲ್ಲಾ ಸಂಚಾಲಕ.ನ್ಯಾಯವಾದಿ ದಾನೇಶ ಅವಟಿ ಮಾತನಾಡಿ.ಬಸವರಾಜ ಯಲಿಗಾರ ಸಾಹೇಬರು ಜಗಜ್ಯೋತಿ ಬಸವೇಶ್ವರ ಸಾವಿರಾರು ಮೌಲಿಕ ವಚನಗಳನ್ನು ಇಂಗ್ಲೀಷಕ್ಕೆ ಕೇವಲ ಭಾಷಾಂತರವಲ್ಲ ಭಾವಂತರ ಮಾಡುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ.ನಾಡಿನ ಪೋಲೀಸ್ ಇಲಾಖೆಯ ಖಾಖಿ ¨ಬಟ್ಟೆಯಲ್ಲಿಯೂ ಕವಿ.ಸಾಹಿತಿ.ಶ್ರೇಷ್ಠ ಚಿಂತಕ ಹೃದಯದವರು ಇದ್ದಾರೆಂಬುದನ್ನು ಸಾಬೀತುಪಡಿಸಿದ್ದಾರೆ. ಶ್ರೇಷ್ಠ ವಾಗ್ಮಿಗಳು.ವಿವಿಧ ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಶ್ರಿಯುತರಿಂದ ಇಂಥಹ ಹಲವಾರು ಶ್ರೇಷ್ಠ ಕಾರ್ಯ ಗಳಾಗಲಿ.ಪ್ರಶಸ್ತಿ ಪುರಸ್ಕಾರ ಮೂಡಿಗೇರಿ.ಪೋಲೀಸ್ ಇಲಾಖೆಯ ಹಾಗೂ ಕನ್ನಡಮ್ಮನ ಹಿರಿಮೆ ಗರಿಮೆಗಳನ್ನು ಹೆಚ್ಚಿಸಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪೀ ಬಸವರಾಜ ಯಲಿಗಾರ ಸಾಹೇಬರು ತಾವು ಮಾಡಿದ ಅಳಿಲು ಸೇವೆಗೆ ಪ್ರತಿಯಾಗಿ ಜನರು ಗೌರವ ಅಭಿಮಾನ ನೀಡುತ್ತಿರುವುದು ಕಂಡು ಹೃದಯ ತುಂಬಿ ಬಂದಿದೆ. ಇಲ್ಲಿ ನಾನು ನಿಮಿತ್ಯ ಮಾತ್ರ ಲೇಖನಿಯಂತೆ ಕಾರ್ಯ ಮಾಡಿದ್ದು.ಎಲ್ಲವೂ ಬಸವಾದಿ ಶರಣರ ಇಚ್ಛೆಯಂತೆ ಸಾಗಿದೆ. ಅವರ ಆಶೀರ್ವಾದ. ಆತ್ಮೀಯರ.ಸಹೃದಯರ ಆಶಯದಂತೆ ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಮಾಡುವ ಹುಮ್ಮಸ್ಸು ಬಂದಿದೆ.ಪೋಲೀಸ್ ವೃತ್ತಿಜೀವನದ ಕಾಯಕ ಸೇವೆಯೊಂದಿಗೆ.ಸಾಹಿತ್ಯವೆAಬ ದಾಸೋಹ ಕಾರ್ಯ ವನ್ನು ಮುಂದುವರೆಸುವುದಾಗಿ ತಿಳಿಸಿ.ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಸ್ತಾನ್ ಹುಡೇದ. ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಂಜು ಗುಂದಗಿ ಇನ್ನೂ ಅನೇಕರು ಉಪಸ್ಥಿತರಿದ್ದರು. (ವರದಿ: ದಾನೇಶ ಅವಟಿ. ವಕೀಲರು . ರಾಜ್ಯ ಸಂಚಾಲಕರು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹೋರಾಟ ವೇದಿಕೆ ಬೆಂಗಳೂರು. ಮೂ ೯೫೩೫೩೯೦೫೮೮)

LEAVE A REPLY

Please enter your comment!
Please enter your name here