ಶಿವಮೊಗ್ಗ: ಶಿವಮೊಗ್ಗಕ್ಕೆ ಆಗಮಿಸಿದ್ದ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ರವರಿಗೆ ರಾಷ್ಟ್ರ ಭಕ್ತ ಬಳಗದ ವತಿಯಿಂದ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರ ಆಡಳಿತಾವಧಿ 2023ರ ನವೆಂಬರ್‌ನಲ್ಲಿ ಪೂರ್ಣಗೊಂಡಿದ್ದು, ಸುಮಾರು ಒಂದೂವರೆ ವರ್ಷಗಳಿಂದ ನಗರದಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಸ್ಥಿತಿ ಎದುರಾಗಿದ್ದು, ನಾಗರಿಕರ ದೈನಂದಿನ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಯೋಜನೆಗಳ ಹಾಗೂ ಜನರ ಆಶಯಗಳನ್ನು ಪ್ರತಿಬಿಂಬಿಸುವ ನಿಗದಿತ ನಾಯಕತ್ವದ ಅಗತ್ಯವಿದ್ದು ಪ್ರತಿ ವಾರ್ಡ್ಗಳಲ್ಲಿ ಜನಪ್ರತಿನಿಧಿಯ
ಅವಶ್ಯಕತೆ ಇದ್ದು, ಮಹಾನಗರ ಪಾಲಿಕೆ ಚುನಾವಣೆಯ ಪ್ರಕ್ರಿಯೆ ತ್ವರಿತಗೊಳಿಸಿ, ನಗರ ಅಭಿವೃದ್ಧಿ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಿವಮೊಗ್ಗದ ನಾಗರಿಕರ ಪರವಾಗಿ ರಾಷ್ಟ್ರ ಭಕ್ತರ ಬಳಗದ ವತಿಯಿಂದ ಮನವಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಕೆ.ಈ.ಕಾಂತೇಶ್,ಮಾಜಿ ಮಹಾನಗರ ಪಾಲಿಕೆ ಸದ್ಯಸರಾದ ಎಂ.ಶಂಕರ್,ಸುವರ್ಣ ಶಂಕರ್,ಲಕ್ಷ್ಮಿ ಶಂಕರ್ ನಾಯ್ಕ,ಆರತಿ ಆಮಾ ಪ್ರಕಾಶ್, ಈ.ವಿಶ್ವಾಸ್,ರಾಜು, ಬಾಲು, ಹಿಂದಿನ ಮಹಾನಗರ ಪಾಲಿಕೆ ಸದ್ಯಸರಾದ ಅನಿತಾ,ಸೀತಾಲಕ್ಷ್ಮಿ,
ಆಶಾ ಚನ್ನಬಸಪ್ಪ,ಶಿವಾಜಿ,ಮೋಹನ್, ವಾಸಣ್ಣ ಪ್ರಮುಖರಾದ ಆನಂದಣ್ಣ,STD ರಾಜು,ಜಾಥವ್,
ಶ್ರೀಕಾಂತ್,ನಾಗರಾಜ್,ಪ್ರದೀಪ್,ಗುರುಶೇಟ್,
ಪ್ರಕಾಶ್ ,ಚಿದಾನಂದ ,ಮಂಜುಳ ಪಾಂಡೆ,ಮಣಿ,ರಾಷ್ಟ್ರ ಭಕ್ತರ ಒಳಗ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here