“ಪೌರ-ಕಾರ್ಮಿಕರ ದಿನಾಚರಣೆ”ಯ ದಿನದಂದು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಸನ್ಮಾನ್ಯ ಭಾರತ ಸರ್ಕಾರದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ರವರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ಉದ್ಘಾಟಿಸಿದರು.

ಈ ವೇಳೆ ಮಾನ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ, ಮಾನ್ಯ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ, ಶ್ರೀ ಕೃಷ್ಣಭೈರೇಗೌಡ, ಶ್ರೀ ರಾಮಲಿಂಗಾರೆಡ್ಡಿ, ಶ್ರೀ ರಹೀಂ ಖಾನ್, ಶ್ರೀ ಬಿ.ಎ. ಸುರೇಶ್, ಶ್ರೀ ಕೆ.ಹೆಚ್ ಮುನಿಯಪ್ಪ, ಶಾಸಕರಾದ ಶ್ರೀ ಶಿವಣ್ಣ, ಶ್ರೀ ಎಸ್.ಟಿ ಸೋಮಶೇಖರ್, ಶ್ರೀ ರಿಜ್ವಾನ್ ಹರ್ಷದ್, ಶ್ರೀ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ರವಿ, ಶ್ರೀ ಯು.ಬಿ ವೆಂಕಟೇಶ್, ಆಡಳಿತಗಾರರಾದ ತುಷಾರ್ ಗಿರಿ ನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.