ವಿಜಯಪುರ:ಶಾಮನೂರು ಶಿವಶಂಕರಪ್ಪನವರೇ,…”ನಮ್ಮನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಸಾಧ್ಯನಾ” ? ಅಂತ ಸವಾಲು ಹಾಕಿ ಈ ವಿಷಯವನ್ನು ಚರ್ಚೆಗೆ ಎಳೆದು ತಂದವರು ನೀವೇ ಮೊದಲು ಹಾಗಾದರೆ” ಅಹಿಂದ ವರ್ಗ ಬಿಟ್ಟು ನೀವು ಗೆಲ್ಲಲು ಸಾಧ್ಯನಾ ??ಜಾತಿಗಣತಿ ಬಗ್ಗೆ ತಕರಾರು ಇದ್ದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಆದರೆ ಧಮ್ಕಿ ಹಾಕಲು ಬರಬೇಡಿ. ನೀವು ಶಾಸಕರಾಗಲು, ಮಗ ಮಂತ್ರಿ ಆಗಿದ್ದು, ಸೊಸೆ ಸಂಸದೆಯಾಗಿದ್ದು ಇದೇ ಅಹಿಂದ ವರ್ಗದ ಮತದಾರರ ಬೆಂಬಲದಿಂದ ಅನ್ನೋದನ್ನ ಮರಿಬೇಡಿ .ದಲಿತ ಮುಸ್ಲಿಂ ಹಿಂದುಳಿದ ವರ್ಗದವರ ಬಗ್ಗೆ ಋಣ ಇಟ್ಟುಕೊಳ್ಳಿ .ದರ್ಪ ಬಿಡಿ .ಜಾತಿಗಣತಿ ವಿಷಯ ಚುನಾವಣಾ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಇತ್ತು. ನೀವು ಆಗಲೇ ಅದನ್ನು ವಿರೋಧಿಸಬೇಕಾಗಿತ್ತು ವಿರೋಧಿಸಲಿಲ್ಲ ಏಕೆಂದರೆ ನಿಮಗೆ ಈ ವರ್ಗದ ಮತ ಬೇಕಾಗಿತ್ತು. ಈಗ ನಿಮಗೆ ದಮ್ಮು ತಾಕತ್ತು ಇದ್ದರೆ ರಾಜೀನಾಮೆ ಕೊಡಿ ಪಕ್ಷೇತರರಾಗಿ ಗೆದ್ದು ಬಂದು ತೋರಿಸಿ. ನಿಮ್ಮದೇ ಜಾತಿಯ ಬಿ ಎಸ್ ಯಡಿಯೂರಪ್ಪನವರಿಗೆ ಕಾಟಕೊಟ್ಟ ಬಿಜೆಪಿಯ ಬಿ ಎಲ್ ಸಂತೋಷ್ಗೆ ಇದೇ ರೀತಿ ಬೆದರಿಕೆ ಹಾಕಿ ನೋಡೋಣ .ನೀವು ಕೂಡ ಎಲ್ಲರಂತೆ ಜನಸಾಮಾನ್ಯ ನೀವೇನು ರಾಜ ಮಹಾರಾಜರಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಹಂಚಿ ತಿನ್ನುವ ಕಾಲ ಯಾರಿಗೂ ಅನ್ಯಾಯವಾಗಲ್ಲ ನಿಮ್ಮ ಪಾಲು ನಿಮಗೆ ನಮ್ಮ ಪಾಲು ನಮಗೆ ಸಿಗಲೇಬೇಕು. ರಾಜ್ಯದ ಕಟ್ಟ ಕಡೆಯ ಬಡವರ ಪರವಾಗಿ ಶಕ್ತಿ ಇಲ್ಲದವರ ಪರವಾಗಿ ಧ್ವನಿ ಇಲ್ಲದವರ ಪರವಾಗಿ ನಮ್ಮ ನಿಲುವು ದಿಟ್ಟ ಮತ್ತು ಸ್ಪಷ್ಟ”… “ಬಡವರ ಮಕ್ಕಳೂ ಬೆಳೆಯಬೇಕು ” ಸೋಮನಾಥ್ ಕಳ್ಳಿಮನಿ ವಿಜಯಪುರ ಯವರು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here