ದಾವಣಗೆರೆ, ಏ.೧೪ : ಡಾ; ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿ ಸ್ವಾತಂತ್ರö್ಯ, ಸಮಾನತೆ ಪ್ರತಿಪಾದಿಸುವುದರೊಂದಿಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಬಣ್ಣಿಸಿದರು.
ಸೋಮವಾರ (ಏ.೧೪) ಮಹಾನಗರಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಮತ್ತು ಮಹಾನಗರ ಪಾಲಿಕೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದವರು ಡಾ; ಬಿ.ಆರ್.ಅಂಬೇಡ್ಕರ್, ತಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಪ್ರಜೆಯು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಏನನ್ನಾದರೂ ಸಾಧಿಸಬಹುದೆಂದು ಜಾಗೃತಿ ಮೂಡಿಸುವ ಜೊತೆಗೆ ಅಸ್ಪೃಶ್ಯತೆ ವಿರುದ್ದ ಹೋರಾಡಿ ಸಮಸಮಾಜಕ್ಕಾಗಿ ಶ್ರಮಿಸಿದವರು.
ಡಾ; ಅಂಬೇಡ್ಕರ್ ಅವರು ಕಾನೂನುತಜ್ಞ ಮತ್ತು ಅರ್ಥಶಾಸ್ತçದ ಪರಿಣಿತರು. ಹಾಗಾಗಿ ಅವರನ್ನು ಆರ್ಥಿಕ ತಜ್ಞ ಎಂದು ಕರೆಯತ್ತೇವೆ. ಜಾತಿ ಪದ್ದತಿ ವಿರುದ್ಧ ನಿರಂತರವಾಗಿ ಹೋರಾಡಿದವರು, ಇವರು ಸದಾ ಸಮಾಜದ ಪರಿವರ್ತನೆಗೆ, ಏಳಿಗೆಗೆ, ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅನೇಕ ಹೋರಾಟಗಳನ್ನು ಮಾಡುತ್ತಾ ತಮ್ಮ ಜೀವನವನ್ನೇ ಪಣಕ್ಕಿಟ್ಟಂತಹ ಮಹಾನ್ ವ್ಯಕ್ತಿ. ಹಾಗಾಗಿ ಇಂತಹ ಮಹಾನೀಯರ ತತ್ವದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಸಮಾಜದ ನಿರ್ಮಾಣವಾಗಲಿದೆ. ಇಂದು ಅವರು ರಚಿಸಿದಂತಹ ಸಂವಿಧಾನದಿAದ ಎಲ್ಲರಿಗೂ ಸಮಾನವಾದ ನ್ಯಾಯ ದೊರಕಲು ಸಾಧ್ಯವಾಗಿದೆ. ಈ ನಟ್ಟಿನಲ್ಲಿ ಸಂವಿಧಾನ ಪೀಠಿಕೆಗೆ ಅನುಗುಣವಾಗಿ ನಾವು ಕೆಲಸ ಮಾಡೋಣ, ಅದರಲ್ಲಿರುವ ನೀತಿ ನಿಯಮಗಳನ್ನು ತಪ್ಪದೇ ಪಾಲೊಸೋಣ ಎಂದರು.

ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ ಬಡವರು, ದೀನದಲಿತರು ಅಂಬೇಡ್ಕರ್ ಅವರ ಎರಡು ಕಣ್ಣುಗಳಿಂದ್ದAತೆ, ಮನುಷ್ಯ ೨ ರೂಪಾಯಿ ದುಡಿದರೆ ೧ ರೂಪಾಯಿ ಆಹಾರಕ್ಕಾಗಿ ೧ ರೂಪಾಯಿ ಪುಸ್ತಕಕ್ಕಾಗಿ ಖರ್ಚು ಮಾಡಿ ಎಂದು ಹೇಳಿಕೊಟ್ಟವರು. ಡಾ;ಬಿ.ಆರ್. ಅಂಬೇಡ್ಕರ್ ಸಮಗ್ರ ದೇಶದ ವಿಶ್ವಕೋಶ, ಅವರಲ್ಲಿದ್ದ ಜ್ಞಾನದಿಂದ ದೇಶ, ಸಮಾಜಕ್ಕಾಗಿ ಹೋರಾಟ ಮಾಡಿ ಸಮಸ್ಯೆಗಳನ್ನು ಮಾತ್ರ ಬಿಂಬಿಸದೆ, ಪರಿಹಾರವನ್ನು ಸಹ ಸಂವಿಧಾನದ ಮೂಲಕ ತಿಳಿಸಿದರು.
ಡಾ; ಅಂಬೇಡ್ಕರ್ ಅವರು ಮಹಾನ್ ವ್ಯಕ್ತಿತ್ವ ಹೊಂದುವ ಜೊತೆಗೆ ಚಿಂತಕರಾಗಿದ್ದರು. ಇವರ ವಿಚಾರ, ಆದರ್ಶಗಳನ್ನು ದಿನನಿತ್ಯ ಪಾಲನೆ ಮಾಡಬೇಕು. ಸಂವಿಧಾನವನ್ನು ಅರಿತ ಅಧಿಕಾರಿಗಳು, ಶೋಷಿತ, ದಲಿತ ವರ್ಗದವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ದೊರಕಿಸಿ ಅವರ ಸೇವೆಗೆ ಪಾತ್ರರಾದರೆ ತಾವುಗಳು ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸರ್ಕಾರ ತಂದAತಹ ಭಾಗ್ಯಗಳು, ಗ್ಯಾರಂಟಿ ಯೋಜನೆಗಳು-ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಒಳಗೊಂಡಿದೆ. ಈ ಯೋಜನೆಗಳು ಮತ್ತು ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಂವಿಧಾನದ ಆಶಯಗಳಂತೆ ಅನುಷ್ಠಾನ ಮಾಡಿರುವುದನ್ನು ಮೌಲ್ಯಯುತವಾಗಿ ಗಮನಿಸಬೇಕಾಗಿದೆ. ಹಾಗೂ ಸುಸ್ಥಿರ ಅಭಿವೃದ್ಧಿಯ ಯೋಜನೆಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಗಳಾಗಿವೆ. ಜೊತೆಗೆ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿದ ಕೀರ್ತಿ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಆದರೆ ಬಡ ಪೌರಕಾರ್ಮಿಕರ ಹುದ್ದೆಯನ್ನು ಖಾಯಂಗೊಳಿಸಲು ಮಧ್ಯವರ್ತಿಗಳು ಹಣದ ಬೇಡಿಕೆಯನ್ನು ಇಡುತ್ತಿದ್ದಾರೆ, ಕೂಡಲೇ ಅದನ್ನು ಪರಿಶೀಲಿಸಿ ತಡೆಯಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಸಂವಿಧಾನ ಪೀಠಿಕೆ ಓದಿದರು. ಸುರೇಶ್ ಹನಗವಾಡಿ ಮತ್ತು ರವಿಕುಮಾರ್ ಇವರಿಗೆ ಸನ್ಮಾನಿಸಲಾಯಿತು. ಹಾಗೂ ಜಿಲ್ಲೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಹರ್ಷಿತ, ಗಗನ್, ಅಂಕಿತ್, ರಶ್ಮಿ, ಮಂಜುನಾಥ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಪರಿಕ್ಷಾಂಗ ಕುಲಸಚಿವ ಡಾ; ಹೆಚ್.ವಿಶ್ವನಾಥ ಉಪನ್ಯಾಸ ನೀಡಿದರು. ರಾಜ್ಯ ತಾಂಡ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷರಾದ ಜಯದೇವನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ನಾಗರಾಜ, ಮುಖಂಡರಾದ ಮಲ್ಲೇಶ್, ರವಿನಾರಾಯಣ, ರುದ್ರಮುನಿ, ಮಂಜುನಾಥ, ಗುಡ್ಡಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ; ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ವಿವಿಧ ರಸ್ತೆಗಳ ಮೂಲಕ ಮೆರವಣಿಗೆ ಸಾಗಿ ಪಾಲಿಕೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.


LEAVE A REPLY

Please enter your comment!
Please enter your name here