ಇಂದು ಮತ್ತು ನಾಳೆ ಎರಡುದಿನಗಳಕಾಲ ಹಾಸನದಲ್ಲಿ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಎಲ್ಲಾ ಸ್ಪರ್ಧಾಳುಗಳು ಕ್ರೀಡಾಮನೋಭಾವದಿಂದ ತಮ್ಮ ಆಟ ಪ್ರದರ್ಶಿಸಿ ವಿಜಯಶಾಲಿಗಳಾಗಲು ಹೆಜ್ಜೆ ಹಾಕಿರಿ ಎಲ್ಲರಿಗೂ ಶುಭವಾಗಲಿ.
ಪತ್ರಕರ್ತರಲ್ಲಿಯೂ ಕೂಡಾ ಸ್ನೇಹ ಮನೋಭಾವ ಕಡಿಮೆಯಾಗಿ ಕೆಲವು ಜಾತಿವಾದ,ಹೊಟ್ಟೆಪಾಡಿಗೆ ಪತ್ರಕರ್ತರಮುಖವಾಡ ಧರಿಸಿ ಭ್ರಷ್ಟ ಅಧಿಕಾರಿಗಳಿಗೆ ಶರಣಾಗಿ,ದುಷ್ಟರಾಜಕಾರಣಿಗಳಿಗೆ ಗುಲಾಮರಾಗಿ ಮಾರಾಟವಾದ ಪತ್ರಕರ್ತರಿಂದ ಇಂದು ನೈಜ ಪ್ರಾಮಾಣಿಕ ಸತ್ಯ ನಿಷ್ಠ ನೇರ ನಡೆನುಡಿಯ ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿರುವ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಹಾಗೂ ರಾಜ್ಯಪ್ರಧಾನಕಾರ್ಯದರ್ಶಿ ಶ್ರೀ ಜಿಸಿ.ಲೋಕೇಶರವರ ಮುಖಂಡತ್ವದ ರಾಜ್ಯಸಮಿತಿಯಿಂದ ಪತ್ರಕರ್ತರಿಗೆ ಸ್ವಲ್ಪಮಟ್ಟಿನ ಗೌರವ ಉಳಿದಿದೆ ಎಂದರೆ ತಪ್ಪಾಗಲಾರದು.ಪತ್ರಕರ್ತರ ಸಂಘದ ಹೆಸರಲ್ಲಿ ಪತ್ರಕರ್ತರಿಗೆ ಅನುಕೂಲವಾಗುವುದಕಿಂತಹೆಚ್ಚಾಗಿ ಪತ್ರಕರ್ತರ ಸಂಘದ ಹೆಸರಲ್ಲಿ ಮುಖಂಡರೆನಿಸಿಕೊಂಡವರಲ್ಲಿ ಬಹುತೇಕರು ತಮ್ಮ ಸ್ವಂತಕ್ಕಾಗಿ ಬಂಧು ಬಳಗ,ಹೆಂಡ್ತಿ,ಮಕ್ಕಳು,ಅಳಿಯಂದಿರು,ತಾಯಿ ಹೆಸರುಗಳಲ್ಲಿ ಹೆಸರುಗಳಲ್ಲಿ ನಿವೇಶನ ಸೌಲಭ್ಯಗಳನ್ನು ಪಡೆದು ಹೆಚ್ಚಾಗಿ ಕೊನೆಗೆ ಕೆಲವರು ಒಂದೆರಡು ಸ್ಟೆಪ್ನಿಗಳಿಗೂ ಹಂಚಿಕೆ ಮಾಡಿಸಿದ್ದಾರೆನ್ನುವ ಅಪವಾದ ಕೇಳಿಬರುತ್ತಿವೆ.ಇವರು ಒಟ್ಟು ಸಂಘದ ಸದಸ್ಯರಿಗೆ ವಂಚಿಸಿ ಸ್ವಹಿತಾಶಕ್ತಿಯಿಂದ ಸಂಘಟನೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಜನರು ಸಾರ್ವಜನಿಕವಾಗಿ ಮಾತಾಡಿಕೊಂಡು ಪತ್ರಕರ್ತರನ್ನು ಹಿಯಾಳಿಸುವಮಟ್ಟಕ್ಕೆ ಬಂದಿದೆ.ಪೆಗ್ಗು ವಿಷ್ಕಿ ತುಂಡುಮಾಸಕ್ಕಾಗಿಯೇ ಕೆಲವು ಪತ್ರಕರ್ತರು ಮಂತ್ರಿ ಕಂತ್ರಿ ಅಧಿಕಾರಿಗಳೊಂದಿಗೆ ಇದ್ದರೆ ಸಾಲದು.ತಮ್ಮ ಸ್ನೇಹವನ್ನು ಬಳಸಿಕೊಂಡು ಸಮಗ್ರ ಸಂಘದ ಸದಸ್ಯರಿಗೆ ಎಲ್ಲಾ ಸೌಲಭ್ಯ ನಿವೇಶನ ಕೊಡಿಸಲು ಶ್ರಮಿಸಬೇಕು.ಕಿವಿಕಚ್ಚಿ ಸಿಕ್ಕ ಸೌಲಭ್ಯಗಳಿಗೂ ವಂಚಿಸುವ ಕೆಲಸ ಮಾಡಬಾರದು.
ಪತ್ರ ಕರ್ತರ ಘನತೆ,ಗೌರವ,ಸಂಘಟನೆಯ ಶಕ್ತಿ ಹೆಚ್ಚಿಸಬೇಕಾದರೆ ಭ್ರಷ್ಟ ಅಧಿಕಾರಿ ದುಷ್ಟರಾಜಕಾರಣಿಜೊತೆ ಸ್ನೇಬೆಳೆಸಿ ಸ್ವಂತಕ್ಕೆ ಆಸ್ತಿಮಾಡಿಕೊಳ್ಳುವುದಲ್ಲಾ.ಸಂಘಟನೆಯ ಸರ್ವ ಸದಸ್ಯರಿಗೆ ಸಮನಾದ ಸೌಲಭ್ಯ,ನ್ಯಾಯ ಕೊಡಿಸುವತ್ತ ದಾಫುಗಾಲು ಹಾಕಬೇಕು.ಪತ್ರಕರ್ತನಾದವನಿಗೆ ಜಾತಿ,ಧರ್ಮ,ಪಕ್ಷ,ಪಂಗಡ,ಹಣದ ವ್ಯಾಮೋಹ ಇರಕೂಡದು.ಆತ್ಮವಂಚಕತನದಿಂದ ಹಿಡಿದ ಪೆನ್ನು ಮುಂದೆ ಚೂರಿಯೂ ಆಗದೆ ಇರದು.ದಯವಿಟ್ಟು ಒಂದೇ ನಿರ್ಮಲ ಮನಸ್ಸಿಂದ ಕ್ರೀಡಾ ಮನೋಭಾವ ಸ್ನೇಹ ಬಂಧುತ್ವ ಪತ್ರಕರ್ತರಿಗೆ ಶೋಭೆ ತರುವುದು.ಎಲ್ಲಾ ಪತ್ರಕರ್ತರು ಒಂದಾಗಿರಬೇಕೆಂಬ ಸದುದ್ದೇಶವೆ ಹೊರತು ಯಾವುದೇ ಜಾತಿವಾದಿ,ಅಧಿಕಾರದಾಹಿ,ಧನದಾಹಿ ಗಳಿಗೆ ಅವಕಾಶ ನೀಡಬಾರದಾಗಿ ಅಷ್ಟೆ.(ಪೆಗ್ ವಿಸ್ಕಿ,ತುಂಡು ಮಾಂಸಕ್ಕಾಗಿ ದುಷ್ಟರಾಜಕಾರಣಿಗಳ ಭ್ರಷ್ಠ ಅಧಿಕಾರಿಗಳಿಗೆ ಮಾರಾಟವಾಗಬಾರದು ಪತ್ರಕರ್ತ.)

LEAVE A REPLY

Please enter your comment!
Please enter your name here