ಭಾಲ್ಕಿಯಲ್ಲಿ ಅತ್ಯಾಧುನಿಕ ಆರ್.ಟಿ.ಒ ಕಚೇರಿ ನಿರ್ಮಾಣ ಪೂರ್ಣ – ಏಪ್ರಿಲ್ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಳ್ಳಲಿದೆ.

ನನ್ನ ಸತತ ಪರಿಶ್ರಮದ ಫಲವಾಗಿ ಭಾಲ್ಕಿ ನಗರದ 5 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು ₹10 ಕೋಟಿ ಅನುದಾನದೊಂದಿಗೆ ನಿರ್ಮಾಣಗೊಂಡ ಅತ್ಯಾಧುನಿಕ ಆರ್.ಟಿ.ಒ ಕಚೇರಿ ಈಗ ಸಂಪೂರ್ಣವಾಗಿದ್ದು, ಏಪ್ರಿಲ್ 16 ರಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರಿಂದ ಉದ್ಘಾಟನೆ ನಡೆಯಲಿದೆ.

ಡ್ರೈವಿಂಗ್ ಟ್ರೈನಿಂಗ್ ಟ್ರ್ಯಾಕ್ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳಿಂದ ಸಜ್ಜುಗೊಂಡ ಈ ನೂತನ ಕಟ್ಟಡ ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ. ವಾಹನ ಚಾಲಕರಿಗೆ ಸುಗಮವಾದ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಸೌಲಭ್ಯ ಭಾಲ್ಕಿಯಲ್ಲಿಯೇ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here