ಹಾಸನ:ರಾಜಕೀಯದಲ್ಲಿ ಪಾರದರ್ಶಕತೆ ಮತ್ತು ಅಭಿವೃದ್ಧಿಯ ಉದ್ದೇಶ ಇರಬೇಕೇ ಹೊರತು, ಕೀಳುಮಟ್ಟದ ತಂತ್ರಗಳಿಗೆ ಮೊರೆ ಹೋಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಗೊರೂರಿನಲ್ಲಿ ಅವರು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣ ಸಂಬಂಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. , ಹಾಸನ ಜಿಲ್ಲೆಯ ಎಸ್ಪಿ ಮಹಮದ್ ಸುಜೇತಾ ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅವರು, ಜಿಲ್ಲೆಯಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆಕ್ಷೇಪಿಸಿದರು. ಇಂತಹ ರಾಜಕೀಯ ತಂತ್ರಗಾರಿಕೆ ಮತ್ತು ವ್ಯವಸ್ಥೆಯ ದುರುಪಯೋಗದಿಂದ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದರು.,
ರಾಜಕೀಯ ಮಾಡುವುದಿದ್ದರೆ ನೇರವಾಗಿ ಮಾಡಬೇಕು. ಅಭಿವೃದ್ಧಿ ಪೂರಕ, ಪಾರದರ್ಶಕ ವಾಗಿರಬೇಕು. ಅದನ್ನು ಬಿಟ್ಟು ವೈಯಕ್ತಿಕ ಹಿತಸಾಧನೆ, ಬೇರೊಬ್ಬರನ್ನು ಹಣಿಯಲು ಅಥವಾ ಸಿಎಂ ಆಗಲು ಹನಿಟ್ರ್ಯಾಪ್ ನಂತಹ ಬ್ಲಾಕ್ ಮೇಲ್ ರಾಜಕಾರಣ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದರು.
ಗೊರೂರಿನಲ್ಲಿ ಬುಧವಾರ ಮಾತನಾಡಿ, ಇದರಿಂದ ಯಾರಿಗೇ ಆಗಲಿ ಕೆಟ್ಟ ಹೆಸರು ಬರಲಿದೆ. ರಾಜ್ಯಕ್ಕೂ ಕೆಟ್ಟ ಹೆಸರು ಬರಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಯಾರೋ ಒಬ್ಬರು ಸಿಎಂ ಆಗಲು ಹೀಗೆ ಮಾಡಿದ್ದಾರೆ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ. ಆದರೆ ಅವರ ಪಕ್ಷದಲ್ಲೇ ಅವರು, ಆರೋಪ-ಪ್ರತ್ಯಾರೋಪ ನಡೆಯುತ್ತಿವೆ ಎಂದರು.
ಇದೇ ವೇಳೆ ಹಾಸನ ಜಿಪಂನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸೂರಜ್, ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಹಾಲಿ ಸಿಇಒ ಅವರು ಪ್ರತಿ ಕಾಮಗಾರಿಗೂ ಇಂತಿಷ್ಟು ಪರ್ಸಂಟೇಜ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ದೂರಿದರು.
ನನಗೇ ಅನ್ಯಾಯ ಆಗಿದೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸರ್ಕಾರದ ಆಟದ
ಗೊಂಬೆಯಾಗಿದೆ. ಹಿಂದೆ ನನ್ನ ಪ್ರಕರಣದಲ್ಲೇ ಎಸ್ಪಿ ಅವರು ದೂರು ದಾಖಲಿಸಲು ಒಂದು ದಿನ ತಡ ಮಾಡಿ ಅನ್ಯಾಯ ಮಾಡಿದರು ಎಂದು ಸೂರಜ್ y ಆರೋಪಿಸಿದರು. ಚನ್ನರಾಯಪಟ್ಟಣ ತಾಲೂಕು ಸಾತೇನಹಳ್ಳಿ ಗ್ರಾಪಂ ಮೇಲೆ ಸದಸ್ಯ ಹಲ್ಲೆ ಮಾಡಿದ್ದಾನೆ. ಆತನ ಮೇಲೆ ಎಫ್ ಐಆರ್ ದಾಖಲಿಸಲು ಸೂಚನೆ ನೀಡಿಲ್ಲ ಎಂದು ಎಸ್ಪಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ ಹೊರ ಹಾಕಿದರು.
ಈ ಬಗ್ಗೆ ನಮ್ಮ ಜಿಲ್ಲೆಯ ಶಾಸಕರಾದ ಸಿಮೆಂಟ್ ಮಂಜು, ಹೆಚ್.ಕೆ.ಸುರೇಶ್, ಹೆಚ್.ಡಿ.ರೇವಣ್ಣ ಮೊದಲಾದವರು ಅಧಿವೇಶನದಲ್ಲೇ 25257 ಮಾಡಿದ್ದಾರೆ. ಜಿಪಂನಲ್ಲಿ ನರೇಗಾ ಸೇರಿದಂತೆ ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದರು. ಜಿಲ್ಲೆಯ ಗ್ರಾಪಂ, ತಾಪಂ ನಿಂದಲೂ ಅನೇಕ ಕಾಮಗಾರಿಗಳಿಗೆ ಪರ್ಸಂಟೇಜ್
ಕೊಡಬೇಕಿದೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಮಾಡುತ್ತೇನೆ. ಭ್ರಷ್ಟಾಚಾರ ಮಿತಿ ಮೀರಲು ಕಾರಣರಾಗಿರುವ ಸಿಇಒ ಅವರನ್ನು ವರ್ಗ ಮಾಡಬೇಕು ಎಂದು ಮನವಿ ಮಾಡಿದರು.