ಬೆಂಗಳೂರು:ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಶಯದಲ್ಲಿ ದಿನಾಂಕ 17.3.2025 ರ ಸೋಮವಾರ ಸಂಜೆ 6 ಗಂಟೆಗೆ ಕೆಂಗೇರಿ ಉಪನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪಕ್ಕದಲ್ಲಿರುವ ಶ್ರೀ ಗುರುರಾಜ ಸಭಾಭವನದಲ್ಲಿ ಮಂಕುತಿಮ್ಮನ ಕಗ್ಗದ ಡಿ.ವಿ.ಜಿ. ಅವರ 138 ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಆಗಮಿಸಲಿದ್ದಾರೆ.
ದಯಮಾಡಿ ತಾವು ತಮ್ಮ ಶಾಲಾ ,ಕಾಲೇಜಿನ, ವಿದ್ಯಾರ್ಥಿಗಳು ಹಾಗೂ ತಮ್ಮ ಸಂಸ್ಥೆಯ ಸದಸ್ಯರುಗಳು, ಸ್ನೇಹಿತರು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಯಶವಂತಪುರ ವಿ.ಕ್ಷೇತ್ರ ಕ.ಸಾ.ಪ.ಅಧ್ಯಕ್ಷರಾದ ಶ್ರೀ ಹೆಚ್.ಎಸ್ .ಸುಧೀಂದ್ರ ಕುಮಾರ್ ತೋರಿದ್ದಾರೆ.