ಬೆಂಗಳೂರು:ಕರ್ನಿನಾಟಕ ಕಾರ್ಮ್ಮಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರುರವರು ಪತ್ರಕರ್ತ ಮಿತ್ರರ ಜೊತೆಗೆ ಒಂದು ಸಂತಸದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ಕೆಯುಡಬ್ಲ್ಯೂಜೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಒಂದು ಕೋಟಿ ರೂ ಗೆ ತಲುಪಿಸಬೇಕು ಎನ್ನುವುದು ನಮ್ಮ ಸಂಕಲ್ಪ.
ಕಳೆದೊಂದು ತಿಂಗಳಿಂದ ಆಡಿಟಿಂಗ್ ನಡೆಯುತಿತ್ತು.
ನಮ್ಮ ಕಚೇರಿಯ ವೆಚ್ಚ ಸಿಬ್ಬಂದಿ ಸಂಬಳ, ಕಾರ್ಯಕ್ರಮಗಳು, ಸಂಚಾರ ವೆಚ್ಚ ಇತ್ಯಾದಿ ಕಳೆದು ಉಳಿಸಿದ ಹಣವನ್ನು ಕ್ಷೇಮಾಭಿವೃದ್ಧಿಗೆ ಇಪ್ಪತ್ತು ಲಕ್ಷ ರೂ ಕೆಯುಡಬ್ಲ್ಯೂಜೆ ಕ್ಷೇಮಾಭಿವೃದ್ಧಿ ನಿಧಿಗೆ ಜಮೆ ಮಾಡಿದ್ದೇವೆ.
ಈಗ ಸಂಘದ ಕ್ಷೇಮಾಭಿವೃದ್ಧಿ ನಿಧಿ 65 ಲಕ್ಷದಿಂದ 86 ಲಕ್ಷ (ಎಂಬತ್ತಾರು ಲಕ್ಷ)ರೂ ದಾಟಿದೆ. ಇದು ನೀವೆ ಸದಸ್ಯತ್ವ ಮೂಲಕ ನೀಡಿದ ಹಣದಲ್ಲಿ ಖರ್ಚು ವೆಚ್ಚ ತೆಗೆದು ಉಳಿಸಿ ಜಮೆ ಮಾಡಿರುವುದು.ಇನ್ನೇನು ಕೋಟಿ ರೂ ಸನಿಹದಲ್ಲಿ ಇದ್ದೇವೆ. ಅದಕ್ಕೆ ನಿಮ್ಮ ಸಹಕಾರ ಕಾರಣ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಂಘದ ಹಣಕಾಸು ಸ್ಥಿತಿ ಹೇಗಿತ್ತು? ಎನ್ನುವುದು ನಿಮ್ಮೆಲ್ಲರಿಗೂ ತಿಳಿದ ಸಂಗತಿಯೇ. ಅದರ ವಿವರಕ್ಕೆ ಹೋಗುವುದಿಲ್ಲ.
ಕಚೇರಿಯ ಸಿಬ್ಬಂದಿಗೆ ಹತ್ತು ತಿಂಗಳ ಸಂಬಳ ಕೂಡ ಕೊಟ್ಟಿರಲಿಲ್ಲ. ಅಂತಹ ಸಂಕಷ್ಟದ ಸ್ಥಿತಿ ಅದು. ಅಂದಿನಿಂದ ಎದುರಿಸಿದ ಕಷ್ಟ ಮತ್ತು ಸವಾಲುಗಳು ಒಂದೆರಡಲ್ಲ. ನಾನಾ ಕಾರಣಗಳಿಗಾಗಿ ಕೋರ್ಟ್ ಅಡ್ಡಾಡಿದ್ದೆ ಹೆಚ್ಚು. ಇನ್ನು ಕೆಲ ಪ್ರಕರಣಗಳಿಗೆ ಕೋರ್ಟ್ ಗೆ ಹೋಗುತ್ತಲೇ ಇದ್ದೇವೆ.
ಹಾಗಂತ ಯಾವ ಹಂತದಲ್ಲಿಯೂ ಸಂಘ ನಿಂತ ನೀರಾಗಲಿಲ್ಲ. ಹಾಗೆ ಆಗಲು ಎಂದೂ ಬಿಡಲಿಲ್ಲ. ಅದು ನಮ್ಮ ಬದ್ಧತೆ.
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಪತ್ರಕರ್ತರ ಕ್ರೀಡಾಕೂಟ, ಕ್ರಿಕೆಟ್ ಟೂರ್ನಿ, ಹಿರಿಯರ ಮನೆಯಂಗಳದಲ್ಲಿ ಗೌರವ, ಕ್ಯಾಲೆಂಡರ್, ನಾನಾ ಪ್ರಶಸ್ತಿಗೆ ಭಾಜನರಾದ ವೃತ್ತಿ ಬಾಂಧವರಿಗೆ ಕೆಯುಡಬ್ಲ್ಯೂಜೆ ಗೌರವ, ಅಕಾಡೆಮಿ ಸೇರಿದಂತೆ ನಾನಾ ಕಡೆಯಲ್ಲಿ ಸರ್ಕಾರದಲ್ಲಿ ನಾಮನಿರ್ದೇಶನ ಹೊಂದಿದ ಸದಸ್ಯರುಗಳಿಗೆ ಗೌರವ, ರಾಜ್ಯ ಪತ್ರಕರ್ತರ ಸಮ್ಮೇಳನ, ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ… ಹೀಗೆ
ನಿರಂತರವಾಗಿ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಸಂಘ ಕ್ರೀಯಾಶೀಲವಾಗಿದೆ.
ಆ ಮೂಲಕ ಸಂಘದ ಶಕ್ತಿ ಬಳಸಿ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಟ್ಟಿ ಧ್ವನಿಯಾಗಿದೆ ಎನ್ನುವುದು ನಮ್ಮ ನಿಮ್ಮೆಲ್ಲರಿಗೂ ಅಭಿಮಾನದ ಸಂಗತಿ.
ಇದೆಲ್ಲದರ ನಡುವೆಯೂ ಪತ್ರಕರ್ತರು ಮತ್ತು ಸಂಕಷ್ಟಕ್ಕೆ ಸಿಲುಕಿದಾಗ ಸಿಎಂ ಪರಿಹಾರ ನಿಧಿಯಿಂದ ನೆರವು ಕೊಡಿಸುವ ಕೆಲಸವನ್ನು ಸಂಘ ನಿರಂತರವಾಗಿ ಮಾಡುತ್ತಲೇ ಬಂದಿದೆ. ಮತ್ತೊಂದೆಡೆ ಕೆಯುಡಬ್ಲ್ಯೂಜೆ
ಕಚೇರಿಯ ನವೀಕರಣವು ನಡೆದಿದೆ.
ಕೆಯುಡಬ್ಲ್ಯೂಜೆ ಕ್ರಿಯಾಶೀಲವಾಗಿ ಕೆಲಸ ಮಾಡಲು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಕಾರಣ.ರಾಜ್ಯ ಪದಾಧಿಕಾರಿಗಳು ಮತ್ತು ರಾಜ್ಯ ಸಮಿತಿ ನೀಡಿದ ಸಹಕಾರವನ್ನು ಮರೆಯಲಾಗದು. ಎಲ್ಲರಿಗೂ ಪ್ರೀತಿಯ ವಂದನೆಗಳು.ಇನ್ನೂ ಸವೆಸಬೇಕಾದ ಹಾದಿ ಬಹಳ ಇದೆ. ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಕ್ರಿಯಾಶೀಲ ಅಧ್ಯಕ್ಷರು ಹಾಗೂ ನಿರಹಂಕಾರಿ ಸ್ನೇಹಜೀವಿ ಪರಸ್ಪರ ಗೌರವಾಧಾರಿತ ಮನೋಭಾನೆಯ ಸಂಘಜೀವಿ ಶಿವಾನಂದ ತಗಡೂರು ರವರು ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ.