ವಿಜಯಪುರ:ವಿಜಯಪುರ ತಾಲೂಕಿನ ಹೊನಗನಹಳ್ಳಿಯು ಹಿಂದೆ ಬಸವನಬಾಗೇವಾಡಿ ವಿಧಾನಸಭೆ ಮತಕ್ಷೇತ್ರದಲ್ಲಿದ್ದು ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಹಿಂದುಳಿದ ಗ್ರಾಮವಾಗಿತ್ತು.ಇತ್ತೀಚೆಗೆ ಕ್ಷೇತ್ರಮರು ವಿಂಗಡನೆಯ ನಂತರ ಬಸವನಬಾಗೇವಾಡಿ ವಿಧಾನಸಭೆ ಮತಕ್ಷೇತ್ರದಿಂದ ಬೇರ್ಪಟ್ಟು ಬಬಲೇಶ್ವರ ವಿಧಾನಸಭೆ ಮತಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು.
ಈ ಗ್ರಾಮವು ಬಬಲೇಶ್ವರ ಮತಕ್ಷೇತ್ರಕ್ಕೆ ಸೇರ್ಪಡೆಯನ್ನು ಈ ಗ್ರಾಮಸ್ಥರು ತಮ್ಮ ಗ್ರಾಮದ ಅಭಿವೃದ್ಧಿಗೆ ಶುಕ್ರದೆಶೆ ಪ್ರಾರಂಭವಾಯಿತೆಂದು ಅತಿಯಾದ ಅಭಿವೃದ್ಧಿಯ ಕಣಸು ಕಂಡು ಸಂತಸ ಪಟ್ಟಿದ್ದರು. ಈ ಗ್ರಾಮದ ಜನರು ಬಬಲೇಶ್ವರ ವಿಧಾನಸಭೆ ಮತಕ್ಷೇತ್ರಕ್ಕೆ ಸೇರಿದಾಕ್ಷಣ ಅಷ್ಟೊಂದು ಸಂತಸಪಡಲು ಬಹುಮುಖ್ಯವಾದ ಕಾರಣವೆಂದರೆ ಕರ್ನಾಟಕ ಸರ್ಕಾರದ ಪ್ರಭಾವಿ ರಾಜಕಾರಣಿಗಳಲೊಬ್ಬರಾದ ಶ್ರೀ ಎಂ.ಬಿ.ಪಾಟೀಲರು ಈ ಮತಕ್ಷೇತ್ರ ಪ್ರತಿನಿಧಿಸುತ್ತಿರುವುದು ಒಂದುಕಡೆಯಾದರೆ ಇದಕಿಂತಲೂ ಹೆಚ್ಚು ಅಂದರೆ ಅವರು ಈ ಗ್ರಾಮದ ಅಳಿಯ ನಮ್ಮೂರವರೇ ಎಂಬಭಾವನೆ ಎಲ್ಲರಮನದಲ್ಲಿ ಮನೆಮಾಡಿತ್ತು.

ಅದರಿಂದಾಗಿ ಯಾವುದೇ ಚುನಾವಣೆ ನಡೆದರೆ ಎಂ.ಬಿ.ಪಾಟೀಲರ ಪರವಾಗಿ ಈ ಗ್ರಾಮದಲ್ಲಿ ತೊಂಭತ್ತೆಂಟು ಪರ್ಸೆಂಟ್ ಮತಗಳು ಇರುತಿದ್ದವು.
ಅದಕ್ಕೆ ಬುನಾದಿಯೆಂದರೆ ಈ ಗ್ರಾಮದ ಅತ್ಯಂತ ಸಂತಸ ಮತ್ತು ಹೆಮ್ಮೆ ಪಡಬಹುದಾದ ಆದರ್ಶ ರಾಜಕಾರಣಿ ಶ್ರೀ ರಾಮಪ್ಪ ಬಿದರಿಯವರು.ರಾಮಪ್ಪ ಬಿದರಿಯವರು ಈ ಗ್ರಾಮದ ಹೊನ್ನ ಕಳಸವಿದ್ದಂತೆ.ಅವರು ಔಂದ ಸಂಸ್ಥಾನದ ಪ್ರಧಾನಮಂತ್ರಿ ಯಾಗಿದ್ದವರು ಮತ್ತು ಎರಡು ಬಾರಿ ಸಂಸದರಾದವರು ಅಷ್ಟೇ ಅಲ್ಲಾ ಅಂದಿನ ಕಾಲದ ಜವಾರಲಾಲ್ ನೇಹರು ರವರು,ಬಿ.ಡಿ.ಜತ್ತಿಯವರು,ಎಸ್,ನಿಜಲಿಂಗಪ್ಪನವರಂಥಾ ಘಟಾನುಘಟಿ ನಾಯಕರ ಆಪ್ತಬಳಗದವರಾಗಿದ್ದರು.ಅವರ ಕಾಲದಲ್ಲೇ ಶ್ರೀ ಮತಿ ಇಂದಿರಾಗಾಂಧಿ ಇನ್ನೂ ಚಿಕ್ಕ ವಯಸ್ಸಲ್ಲಿದ್ದಾಗಲೇ ಇಂದಿರಾಗಾಂಧಿಯವರೂ ಸೇರಿದಂತೆ ಈ ಗ್ರಾಮಕ್ಕೆ ಈ ಎಲ್ಲಾನಾಯಕರು ಶ್ರೀ ಯುತ ರಾಮಪ್ಪ ಬಿದರಿಯವರ ಮನೆಗೆಬಂದು ಗ್ರಾಮದಲ್ಲಿ ಸಭೆನಡೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿದ್ದರಂತೆ.ಆ ಕಾರ್ಯಕ್ರಮದಲ್ಲಿ ಹಾಡು,ಕುಣಿತ,ಆಟ ಆಡಿದ ಈ ಗ್ರಾಮದ ಬಹುತೇಕರು ತಮ್ಮ ನೆನಪನ್ನು ಮೆಲಕು ಹಾಕುತಿದ್ದರು.ಆ ಸಮಾರಂಭ ನಡೆದ ಸ್ಥಳಕ್ಕೆ ಇಂದಿರಾಕಟ್ಟೆ ಎಂದು ಕರೆಯುತಿದ್ದರು.ಇತ್ತೀಚೆಗೆ ಅದು ಅಕ್ರಮಿಗಳವಶವಾಗಿ ನಾಮಾವಶೇಷವೂ ಇಲ್ಲದಂತಾಗಿಹೋಗಿದೆ.
ಶ್ರೀ ರಾಮಪ್ಪ ಬಿದರಿಯವರು ಆ ತಮ್ಮ ಅಧಿಕಾರದ ಅವಧಿಯಲ್ಲಿ ಈ ಗ್ರಾಮಕ್ಕೆ ಪಂಚಾಯತಿ ಕಟ್ಟಡ,ನಾಲ್ಕು ಕುಡಿಯುವ ನೀರಿನ ಭಾವಿಗಳು,ಪಶುಚಿಕಿತ್ಸಾಕೇಂದ್ರ,ಅಂಚೆಕಚೇರಿ,ಸಮುದಾಯಭವನ,ದೇವಸ್ಥಾನಗಳು,ರೈತಸಹಕಾರಿ ಸಂಘ,ಜಾನುವಾರಗಳಿಗೆ ಕುಡಿಯುನೀರಿನ ಹ್ಯಾಳ,ರಸ್ತೆಗಳು,ಅಷ್ಟೇಅಲ್ಲಾ ಹೊನಗನಹಳ್ಳಿ ರೈಲು ನಿಲುಗಡೆಗಾಗಿ ಹಾಲ್ಟಿಂಗ್ ಸ್ಟೈಷನ್ ಮಾಡಿಸಿ ಈ ರಸ್ತೆಯಲ್ಲಿ ಓಡಾಡುವ ಹತ್ತು ರೈಲುಗಳಲ್ಲಿ ಎಂಟು ರೈಲುಗಳು ಈ ಹೊನಗನಹಳ್ಳಿಯ ಹಾಲ್ಟಿಂಗ್ ನಿಲ್ದಾನದಲ್ಲಿ ನಿಲುಗಡೆಹೊಂದಿದ್ದವು. ಇಷ್ಟೆಲ್ಲಾ ಸಾಲಭ್ಯಗಳಿದ್ದ ಈ ಗ್ರಾಮದ ಈ ಎಲ್ಲಾ ಸೌಲಭ್ಯಗಳನ್ನು ತೊನಶಾಳ,ಕಾರಜೋಳ,ದೂಡಿಹಾಳ,ದದಾಮಟ್ಟಿ,ಹಿಟ್ನಳ್ಳಿ,ಸವನಹಳ್ಳಿ ಅಷ್ಟೆಅಲ್ಲದೆ ಮುಳವಾಡ,ಜುಮನಾಳ ದಗ್ರಾಮಸ್ಥರಿಗೂ ಇದೇ ಕೇಂದ್ರ ಸ್ಥಾವಾಗಿತ್ತು ಮಂಡಲಪಂಚಾಯತ್ ಕೇಂದ್ರ ಕೂಡಾ ಆಗಿತ್ತು. ಇಷ್ಟೆಲ್ಲಾ ಮೂಲಸೌಕರ್ಯ ಗಳುಳ್ಳ ಈಗ್ರಾಮದ ಮತ್ತು ಶ್ರೀ ರಾಮಪ್ಪ ಬಿದರಿಯವರ ಖಾಸ ಮೊಮ್ಮಗಳನ್ನೇ ಮದುವೆಯಾದ ಶ್ರೀ ಎಂ.ಬಿ.ಪಾಟೀಲರು ನಮ್ಮೂರ ಹೆಮ್ಮೆ ಅವರಿಂದ ಈಗಿರುವ ಮೂಲಸೌಕರ್ಯಗಳು ಇನ್ನೂ ಹೆಚ್ಚಿಗೆ ಮೇಲ್ದರ್ಜೆಗೇರಿ ಇಡೀ ಗ್ರಾವು ಒಂದು ಮಾದರಿಯ ಹೋಬಳಿ ಕೇಂದ್ರವಾಗುತ್ತದೆಂಬ ಗ್ರಾಮಸ್ಥರ ಕಣಸು ಕಣಸಾಗಿಯೇ ಉಳಿದು ಇದಕ್ಕೆ ತದ್ವಿರುದ್ಧವಾಗಿ ಈ ಯಾವ ಮೂಲ ಸೌಕರ್ಯಗಳು ಮೇಲ್ದರ್ಜೆಗೆ ಏರುವುದು ಒಂದುಕಡೆ ಇರಲಿ ಇದ್ದಬದ್ದಸೌಕರ್ಯಗಳೆಲ್ಲವೂ ಒಂದೊಂದಾಗಿ ಕಳಚಿ ಹೋದವು.ಅದಕ್ಕೆ ಉದಾಹರಣೆ ಈಗ್ರಾಮದ ರೈಲುನಿಲ್ದಾಣ ನೋಡಿದರೆ ಗೊತ್ತಾಗುತ್ತದೆ. ಎಂ.ಬಿ.ಪಾಟೀಲರ ಪತ್ನಿಯ ತವರೂರಲ್ಲಿ ಇವರಬಗ್ಗೆ ನಮ್ಮ ಗ್ರಾಮದ ಕಣ್ಣು ಎಂದು ಜನತಿಳಿದಿದ್ದರು.ಆದರೆ ಇವರು ಈ ಗ್ರಾಮವನ್ನು ಪೂರ್ಣ ನಿರ್ಲಕ್ಷಿಸಿದ್ದರು.ಗ್ರಾಮಕ್ಕೆ ಬೇಕಾದ ಸೌಲಭ್ಯಪಡೆಯಲು ಹೋರಾಟಗಳನ್ನೇ ಮಾಡಬೇಕಾಯ್ತು ಕೆಲವು ಸಮಯದಲ್ಲಿ.
ಆದರೆ ದಿನಾಂಕ:01-03-2025,ರಂದು ಹೊನಗನಹಳ್ಳಿ ಗ್ರಾಮಪಂಚಾಯತಿ ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿ ಸಭಿಕರನ್ನುದ್ದೇಶಿಸಿ ಎಂ.ಬಿ.ಪಾಟೀಲರು ಮಾತನಾಡಿದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿ ಅವರು ಈ ಗ್ರಾಮದ ಅಭಿವೃದ್ಧಿಯ ಕೆಲಸಗಳ ಮುನ್ನೋಟದ ಭರವಸೆಯ ಮಾತುಗಳು ನನಗೆ ಬಹಳ ಸಂತಸವನ್ನುಂಟುಮಾಡಿದೆ.ಅವರು ಈ ವಿಡಿಯೋದಲ್ಲಿರುವ ಮಾತುಗಳಂತೆ ಅಭಿವೃದ್ಧಿ ಆದರೆ ಮತ್ತು ಅದರಜೊತೆಯಲ್ಲಿ ಈ ಹೊನಗನಹಳ್ಳಿಯನ್ನು ಹೋಬಳಿಯನ್ನಾಗಿ ಘೋಷಣೆ ಮಾಡಲಿ ಎಂದು ಆಶಿಸುತ್ತೇನೆ.ಇವತ್ತಿನ ಅವರು ಈ ಗ್ರಾಮದಲ್ಲಿ ತಮ್ಮ ಬಿಡುವಿಲ್ಲದ ಸಮಯವನ್ನೂ ಲೆಕ್ಕಿಸದೆ ಸುಧೀರ್ಘ ವಾಗಿ ಈ ಗ್ರಾಮದ ಅಭಿವೃದ್ಧಿ ಪರ ಮಾತನಾಡಿ ಮೂಡಿಸಿದ ಭರವಸೆಯನ್ನು ಆದಷ್ಟು ಬೇಗನೇ ನೆರವೇರಿಸಲೆಂದು ಬಯಸುವೆ.(ಎಸ್.ಕೆ.ಒಡೆಯರ್,ಹೊನಗನಹಳ್ಳಿ ನನ್ನ ಹುಟ್ಟೂರು)