ಬೆಂಗಳೂರು, ಫೆಬ್ರವರಿ 25 ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ ಬೆಂಗಳೂರು ಹಾಗೂ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಇದೇ 26 ಫೆಬ್ರವರಿ 2025, ಬುಧವಾರ
ಸಂಜೆ 6 ಗಂಟೆಯಿಂದ ಗುರುವಾರ ಬೆಳಿಗ್ಗೆ 6 ರವರೆಗೆ
ಬೆಂಗಳೂರು ವಿವಿ ಜ್ಣಾನಭಾರತಿಯ
ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ವಿಮರ್ಶಕ ಪ್ರೊ ಕಿ.ರಂ.ನಾಗರಾಜ ನೆನಪಿನ
ಕಾವ್ಯಶಿವರಾತ್ರಿ ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು
ಸಂಸ್ಕೃತಿ ಚಿಂತಕರಾದ ಶೂದ್ರ ಶ್ರೀನಿವಾಸ್ ನೆರವೇರಿಸಲಿದ್ದಾರೆ
ಅಧ್ಯಕ್ಷತೆಯನ್ನು ಡಾ. ಜಯಕರ್ ಎಸ್.ಎಂ.
ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಇವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶೇಖ್ ಲತೀಫ್,ಕುಲಸಚಿವರು, ಬೆಂಗಳೂರು ವಿಶ್ವವಿದ್ಯಾಲಯ,
ಡಾ. ಶ್ರೀನಿವಾಸ್ ಸಿ
ಕುಲಸಚಿವರು (ಮೌಲ್ಯಮಾಪನ) ಬೆಂಗಳೂರು ವಿಶ್ವವಿದ್ಯಾಲಯ, ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಷರೀಫ,
ರಮೇಶ್ ಬಾಬು ,ಗಂಗರಾಜು ,
ಮಹದೇವ ನಾಯಕ್ ಹಾಗೂ ಕಿ.ರಂ ಮಕ್ಕಳಾದ ಕೆ.ಎನ್. ಸಹನ, ಕೆ.ಎನ್.ಕವನ, ಕೆ.ಎನ್.ಚಂದನ ಭಾಗವಹಿಸಲಿದ್ದಾರೆ.
ಪ್ರೊ. ಬಿ. ಗಂಗಾಧರ
ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು,
ವಂದನಾರ್ಪಣೆಯನ್ನು
ಡಾ. ಪ್ರದೀಪ್ ಮಾಲ್ಗುಡಿ
ಅಧ್ಯಕ್ಷರು ಜನಸಂಸ್ಕೃತಿ ಪ್ರತಷ್ಠಾನ ಇವರು ಮಾಡಲಿದ್ದಾರೆ