ದಾವಣಗೆರೆ : ವಸತಿ/ನಿವೇಶನ ರಹಿತರಿಗೆ ತಕ್ಷಣ ನಿವೇಶನ ಕಲ್ಪಿಸಲು ಸಿ.ಪಿ.ಐ.(ಎಂ) ಪಕ್ಷದ ನೇತೃತ್ವದಲ್ಲಿ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಮೆರವಣಿಗೆ ನಿಟುವಳ್ಳಿ ದುರ್ಗಾಂಬಿಕಾ ವೃತ್ತ ಮುಖಾಂತರ, ಜಂಬಣ್ಣ ವೃತ್ತ, ಜಯದೇವ ವೃತ್ತ, ಗಾಂಧಿ ಸರ್ಕಲ್, ಹನುಮಂತಪ್ಪ ಚೌಲ್ಟ್ರಿ, ಮಹಾನಗರ ಪಾಲಿಕೆಗೆ ಮೆರವಣಿಗೆ ಮುಖಾಂತ ತಲುಪಿ ಮಹಾನಗರ ಪಾಲಿಕೆ ಮುಂದೆ ಅನಿರ್ಧಿಷ್ಟ ಅವಧಿಯ ಧರಣಿ ನಡೆಸಿದರು.

ಹಲವಾರು ವರ್ಷಗಳಿಂದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯಲ್ಲಿ ವಸತಿ ಮತ್ತು ನಿವೇಶನ ಇರದ ಬಡವರಿಗೆ ವಸತಿ/ನಿವೇಶನ ಗಳನ್ನ ಹಂಚಿಕೆ ಮಾಡಬೇಕೆಂದು ಶಾಸಕರಲ್ಲಿ, ಸಂಸದರಲ್ಲಿ, ಜಿಲ್ಲಾಧಿಕಾರಿಗಳಲ್ಲಿ ಮತ್ತು ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಮನವಿ ಮಾಡಿಕೊಂಡಿದ್ದರೂ ಇದುವರೆಗೆ ಬಡವರಿಗೆ ವಸತಿ/ನಿವೇಶನಗಳನ್ನ ಹಂಚುಲು ಕ್ರಮ ಕೈಗೊಂಡಿರುವುದಿಲ್ಲ, ಆಶ್ರಯ ಯೋಜನೆಯ ಅಡಿಯಲ್ಲಿ ಕಳೆದ ಬಾರಿ ಭ್ರಹ್ಮಾಂಡ ಭ್ರಷ್ಟಾಚಾರ ನೆಡೆದಿದ್ದು ಪ್ರಕರಣ ಕೋರ್ಟಿನಲ್ಲಿರುತ್ತದೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದೇ ಕಾರಣ ಕೊಡುವ ಮೂಲಕ ವಸತಿ/ನಿವೇಶನ ಇರದ ವಿಧವೆಯರಿಗೆ, ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ ಮತ್ತು ಬಡ ಜನತೆಗೆ ಬಾಯಿಯನ್ನ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ, ಇವರಿಗೆ ನಿವೇಶನಗಳನ್ನು ಕೊಡುವ ಅವಕಾಶಗಳಿದ್ದರೂ ಕೊಡಲು ಇಲ್ಲಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನ ನೋಡಿದರೆ, ನಿವೇಶನ ಕೊಡುವುದರಿಂದ ಲಾಭ ಇಲ್ಲ ವಸತಿ ಯೋಜನೆಗಳಿಂದಲೇ ಲಾಭ ಹೆಚ್ಚು ಎನ್ನುವಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ, ಈ ಹಿಂದೆ ಅರ್ಜಿ ಸಲ್ಲಿಸಿದ ಪಲಾನುಭವಿಗಳಿಗೆ ತಕ್ಷಣ ನಿವೇಶನಗಳನ್ನ ಕೊಡಬೇಕು, ನಿವೇಶನಗಳ ಹಂಚಿಕೆ ಮಾಡುವವರೆಗೆ ಅನಮುಂದುವರೆಸಲಾಗುವುದು. ಎಂದು ಈ ವೇಳೆ
ಆನಂದರಾಜು ಕೆ ಹೆಚ್ ಸಂಘಟನಾ ಕಾರ್ಯದರ್ಶಿ, ಶ್ರೀನಿವಾಸಮೂರ್ತಿ, ನೇತ್ರಾವತಿ, ರಕ್ಷಿತಾ, ಶ್ರೀನಿವಾಸ್ ಇ, ಗಜೇಂದ್ರ, ಮತ್ತಿತರರು ತಿಳಿಸಿದರು.

LEAVE A REPLY

Please enter your comment!
Please enter your name here