ರಾಹುಲ್ ಗಾಂಧಿ ಮೊನ್ನೆ ಪಾರ್ಲಿಮೆಂಟಿನಲ್ಲಿ ಹಾಗೂ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಎತ್ತಿದ ವಿಚಾರ ಅದೊಂದು ಕೇವಲ ಕಾಂಗ್ರೆಸ್ಸಿನ ಮಾತ್ರ ವಿಷಯವಲ್ಲ,ಇದು ದೇಶದಲ್ಲಿ ಬಲ ಪಡೆಯುತ್ತಿರುವ ಪ್ಯಾಸಿಸಂನ ಅನಾವರಣ ಕೂಡಾ ಆಗಿದೆ…
ರಾಹುಲ್ ಗಾಂಧಿ ಪಾರ್ಲಿಮೆಂಟಿನಲ್ಲೂ,ನಂತರ ಶಿವಸೇನೆ ಮತ್ತು ಎನ್ ಸಿ ಪಿ ಪ್ರತಿನಿಧಿಗಳೊಂದಿಗೆ ಸೇರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದ ವಿಷಯ ಮಹಾರಾಷ್ಟ್ರದಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರ ಸಂಖ್ಯೆ ಯಾರಲ್ಲೂ ಅಚ್ಚರಿ ಮೂಡಿಸುವುದು…!
ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಇದು ಹೆಚ್ಚು ಚರ್ಚೆಯಾಗದ ವಿಷಯವಾದುದರಿಂದ ಎಲ್ಲರಿಗೂ ಗೊತ್ತಿರುವ ಸಾಧ್ಯತೆ ಇಲ್ಲ…
2019 ಅಕ್ಟೋಬರ್ ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ 2024 ರ ಮೇ ಯಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯ ವರೆಗೆ ಮಹಾರಾಷ್ಟ್ರದಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಮತದಾರರ ಸಂಖ್ಯೆ 32 ಲಕ್ಷ…
ಆದರೆ…
2024 ರ ಮೇ ಯ ಪಾರ್ಲಿಮೆಂಟ್ ಚುನಾವಣೆಯ ನಂತರ ಅದೇ 2024 ರ ನವೆಂಬರ್ ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ ಆಗುವಾಗ ಅಂದರೆ ಕೇವಲ ಆರು ತಿಂಗಳಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರ ಸಂಖ್ಯೆ ಎಷ್ಟು ಗೊತ್ತೇ?
39 ಲಕ್ಷ…!!!!
ರಾಹುಲ್ ಗಾಂಧಿ ಮತ್ತು ತಂಡ ಈ ಹೊಸದಾಗಿ ಸೇರ್ಪಡೆಯಾದ 39 ಲಕ್ಷ ಮತದಾರರು ಯಾರು?ಎಂದು ಕೇಳುತ್ತಿದ್ದಾರೆ…
ರಾಹುಲ್ ಗಾಂಧಿ ಪಾರ್ಲಿಮೆಂಟಲ್ಲಿ ಎತ್ತಿ ತೋರಿಸಿದ ಇನ್ನೊಂದು ಮಾಹಿತಿ ಏನೂ ಅಂದ್ರೆ, ಮಹಾರಾಷ್ಟ್ರದ ಶಿರಡಿ ವಿಧಾನಸಭಾ ಕ್ಷೇತ್ರದ ಒಂದು ವಾರ್ಡಿನ ಒಂದೇ ಕಟ್ಟಡದಿಂದ 7000 ಹೊಸ ಮತದಾರರ ಹೆಸರು ಸೇರ್ಪಡೆಯಾಗಿದೆಯಂತೆ!!!
ಆದ್ದರಿಂದ ವಿರೋಧ ಪಕ್ಷಗಳು ಈ 39 ಲಕ್ಷ ಮತದಾರರ ಮಾತ್ರ ಡಿಟೈಲ್ಸ್ ಬೇಕು ಎಂದು ಚುನಾವಣಾ ಆಯೋಗದೊಂದಿಗೆ ಬೇಡಿಕೆ ಸಲ್ಲಿಸಿದೆ…
ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಗೆ ಒಟ್ಟು 39 ಲಕ್ಷ ಓಟು ಹೆಚ್ಚುವರಿ ಬಿದ್ದಿದ್ದರಿಂದಲೇ ಅವರಿಗೆ ಈ ಸಲ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಸಾಧ್ಯವಾದದ್ದು!!!.
ಆದರೆ ವಿರೋಧಪಕ್ಷದ ಬೇಡಿಕೆಗೆ ಚುನಾವಣಾ ಆಯೋಗ ಇದುವರೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ!,
ಕಾರಣ ಏನು ಎಂಬುದು ವ್ಯಕ್ತ…
ಈ ರೀತಿಯ ಕಾರ್ಯಕ್ರಮ ಮುಂದೆ ನಡೆಯಲಿರುವ ದೇಶದ ಯಾವುದೇ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅವರು ಅಪ್ಲಯ್ ಮಾಡಬಹುದು…
ಪ್ಯಾಸಿಸ್ಟರು ಇದರೊಂದಿಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಮಾಧಿ ಮಾಡಲು ಹೊರಟಿದೆ ಎಂದು ಸೂಚಿಸುತ್ತಿದೆ…
ರಾಹುಲ್ ಗಾಂಧಿಯವರ ಪ್ರಕಾರ ಮಹಾರಾಷ್ಟ್ರದ ಈ ಎರಡು ವಿಧಾನಸಭಾ ಚುನಾವಣೆಯ ನಡುವೆ ಸೇರ್ಪಡೆಯಾದ ಹೊಸ ಮತದಾರರ ಸಂಖ್ಯೆ ಹಿಮಾಚಲ ಪ್ರದೇಶದ ಒಟ್ಟು ಜನಸಂಖ್ಯೆಯಷ್ಟು ಇದೆ ಎಂದು!!!…
ಇಂತಹ ಘೋರ ಹಗರಣಗಳ ಬಗ್ಗೆ ಮಾಧ್ಯಮಗಳಲ್ಲಿ ಒಂದು ಅಕ್ಷರ ಕೂಡಾ ಚರ್ಚೆಯಾಗುತ್ತಿಲ್ಲ ಎಂದರೆ ದೇಶದ ಮಾಧ್ಯಮ ಪ್ಯಾಸಿಸಂಗೆ ಎಷ್ಟರ ಮಟ್ಟಿಗೆ ವಿಧೇಯರಾಗಿ ಬಿಟ್ಟಿದ್ದಾರೆ ಎಂಬುದರ ಬಗ್ಗೆ ಸೂಚಿಸುತ್ತಿದೆ…..(ಸಾಮಾಜಿಕ ಜಾಲತಾಣದ ಕೃಪೆ)