ಮೂಡಲಗಿ :ಜ,31-ಪಟ್ಟಣದ ತಹಶಿಲ್ದಾರರ ಶಿವಾನಂದ ಬಬಲಿಯವರ ಮೂಲಕ ನಿವೃತ್ತಿ ನೌಕರರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. 7 ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ಆರ್ಥಿಕ ನಷ್ಟವನ್ನು ಸರಿಪಡಿಸುವ ದೆಸೆಯಲ್ಲಿ ಸರಕಾರದ ಮುಖ್ಯಕಾರ್ಯದರ್ಶಿಗಳು, ಆರ್ಥಿಕ ಇಲಾಖೆಯ ಅಧಿಕಾರಿಗಳು ಹಾಗೂ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿಯ ಮುಖಂಡರುಗಳ ಉಪಸ್ಥಿತಿಯಲ್ಲಿ ಒಂದು ವಾರದೊಳಗಾಗಿ ದಿನಾಂಕ ನಿಗದಿಗೊಳಿಸಿ ಸಭೆ ಏರ್ಪಾಡು ಮಾಡಬೇಕೆಂದು ರಾಜ್ಯ ಸಂಚಾಲಕ ರಾದ ಜಿ.ಬಿ. ನಾಯಿಕ ಆಗ್ರಹಿಸಿದರು.
ಗುರುವಾರದಂದು ಪಟ್ಟಣದ ತಹಶಿಲ್ದಾರರ ಕಛೇರಿಯಲ್ಲಿ ತಹಶಿಲ್ದಾರರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ದಿನಾಂಕ, 1-7-2022 ರಿಂದ 31-7-2024 ರ ಅವಧಿಯಲ್ಲಿ 25 ತಿಂಗಳು ಸೇವೆಸಲ್ಲಿಸಿ ನಿವೃತ್ತರಾದ ನೌಕರರಿಗೆ 7 ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ, ನಾವು ದಿನಾಂಕ 1-7-2022 ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು ಕೇಳುತ್ತಿರುವುದಿಲ್ಲ. ಬದಲಾಗಿ ನಾವು ಕೇಳುತ್ತಿರುವುದು 7 ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ ಎಂದರು.

ಮೂಡಲಗಿ ತಾಲೂಕಾ ನಿವೃತ್ತ ನೌಕರರ ವೇದಿಕೆಯ ಸಂಚಾಲಕರಾದ ಜಿ.ಆಯ್ ಪತ್ತಾರ ಮಾತನಾಡಿ, ಕಳೆದ ಡಿ.16ರಂದು ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 20,000 ಕ್ಕೂ ಅಧಿಕ ನೌಕರರು ಸಮಾವೇಶಗೊಂಡಿದ್ದರು. ಆಗ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸತೀಶ ಜಾರಕಿಹೊಳಿಯವರು ಘನ ಸರಕಾರದ ವತಿಯಿಂದ ನಮ್ಮ ಮನವಿಯನ್ನು ಸ್ವೀಕರಿಸಿ, ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿ ಈ ವರೆಗೂ ಸಭೆ ಏರ್ಪಾಡು ಮಾಡಿರುವುದಿಲ್ಲ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಲು ತಾವುಗಳು ನಮ್ಮ ವೇದಿಕೆಯ ಮುಖಂಡರುಗಳೊಂದಿಗೆ ಅತೀ ಶೀಘ್ರ ದಿನಾಂಕ ನಿಗದಿಗೊಳಿಸಿ ಸಭೆ ಏರ್ಪಾಡು ಮಾಡಬೇಕಾಗಿ ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕೊಳ್ಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಿ.ಎ. ಡಾಂಗೆ, ವಿ.ಸಿ. ಪತ್ತಾರ,ಎ.ಜಿ.ಶರಣಾರ್ಥಿ,ಕೆ.ಆರ್.ಕೊತ್ತಲ,ಹಂಜಿ,ಕಂಕಣವಾಡಿ,ಜಿ.ಬಿ.ನಾಯ್ಕಿ ಇನ್ನು ಅನೇಕರು ಸೇರಿದಂತೆ ತಾಲೂಕಿನ ನಿವೃತ್ತ ನೌಕರರ ವೇದಿಕೆಯ ಸದಸ್ಯರು ಹಾಜರಿದ್ದರು

LEAVE A REPLY

Please enter your comment!
Please enter your name here