ರಾಜಾಜಿನಗರ: ಶ್ರೀರಾಮಸೇವಾ ಮಂಡಳಿ ಮತ್ತು ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ, ನಲ್ಲಾನ್ ಚಕ್ರವರ್ತಿ ಟ್ರಸ್ಟ್ ವತಿಯಿಂದ 16ನೇ ವರ್ಷದ ಮೂರು ದಿನಗಳ ಕಾಲ ಕನಕ ಪುರಂದರ ಸಂಗೀತ ಉತ್ಸವ ಹಾಗೂ ಸಾಧಕ ಸಂಗೀತ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ.
ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರಾದ ಕೇಶವಪ್ರಸಾದ್ ರವರು, ಲೇಖಕರಾದ ಡಾ||ಗುರುರಾಜ್ ಪೋಶೆಟ್ಟಿಹಳ್ಳಿ, ರಾಜಾಜಿನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಲೇಟ್ ಡಾ||ಆರ್.ರಮೇಶ್ ಮತ್ತು ಅದಿಶಕ್ತಿ ಮಹಿಳಾ ಭಜನ ಮಂಡಳಿಯ ನಿರ್ದೇಶಕಿ ಶ್ರೀಮತಿ ಎ.ಉಷಾರಾಣಿರವರಿಗೆ ಗಾನಚೇತನ ಪ್ರಶಸ್ತಿ ಮತ್ತು 5ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯರಾದ ಕೇಶವಪ್ರಸಾದ್ ರವರು ಮಾತನಾಡಿ ಸನಾತನ ಧರ್ಮ ಉಳಿಸುವುದು ಮತ್ತು ಧಾರ್ಮಿಕ ಜೀವನ ನಡೆಸುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಕನಕದಾಸರ, ಪುರಂದಾಸರು ಕೊಡುಗೆ ಅಪಾರ.
ವಿದೇಶಿ ವ್ಯಾಮೋಹ ಹೆಚ್ಚಾಗಿದೆ ಇಂದು ನಾಡಿನ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟಸಾಧ್ಯ.
ಭಗವಂತನನ್ನು ನಂಬಿದರೆ ಯಾರಿಗೂ ಅನ್ಯಾಯವಾಗುವುದಿಲ್ಲ.
ಹಿಂದಿನ ಕಾಲದಲ್ಲಿ ಯಾವುದೇ ವಾಹನ ವ್ಯವಸ್ಥೆ ಇಲ್ಲದೇ ಹೋದರು, ಸಾಧು ಸಂತರು ಬರಿಗಾಲಿನಲ್ಲಿ ನಡೆದುಕೊಂಡು ಹಿಂದೂ ಧರ್ಮ ಉಳಿಯವುದಕ್ಕಾಗಿ ಶ್ರಮಿಸಿದರು.
ಕನಕದಾಸರು ನಾಲ್ಕು ಹೆಚ್ಚು ಕೀರ್ತನೆ ರಚಿಸಿದ್ದರು ಎಂಬುದು ಆಶ್ಚರ್ಯವಾಗುತ್ತದೆ, ಪುರಂದರ ದಾಸರನ್ನು ನವಕೋಟಿ ನಾರಾಯಣ ಎಂದು ಕರೆಯುತ್ತಿದ್ದರು. ವಜ್ರ ವ್ಯಾಪಾರಿಯಾಗಿದ್ದ ಪುರಂದಾಸರು ನಂತರ ದೈವಭಕ್ತರಾಗಿ ಮುಂದೆ ದಾಸರಾಗಿ ನಾಡಿಗೆ ಕೀರ್ತಿ ತಂದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಎಸ್.ಶ್ರೀಧರ್ ರವರು ಮಾತನಾಡಿ ಕನಕದಾಸರು, ಪುರಂದರ ದಾಸರು ನಾಡು ಕಂಡ ದಾಸಶೇಷ್ಟರು. ಕನಕದಾಸರು ವ್ಯಾಸತೀರ್ಥರ ಶಿಷ್ಯರಾಗಿದ್ದರು, ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನೆ ಹಿಮ್ಮುಖವಾಗಿ ತಿರುಗಿ ದರ್ಶನ ನೀಡಿ ಇಂದು ಕನಕನ ಕಿಂಡಿ ಎಂದೇ ಪ್ರಸಿದ್ದಿ ಪಡೆದಿದೆ.
ಜಾತಿಯ ವಿರುದ್ದ ಹೋರಾಡಿ ಮಾಡಿದ ಮಹಾನ್ ಸಂತ ಕನಕದಾಸರು. ಶ್ರೀಪುರಂದಾಸರು ಸಹ ದಾಸಶೇಷ್ಠರು ಹರಿದಾಸ ಸಾಹಿತ್ಯಕ್ಕೆ ಅಮೂಲ್ಯರತ್ನರಾಗಿದ್ದರು.
ನಾಡಿಗೆ ದಾಸ ಶೇಷ್ಠರು ನೀಡಿದ ಕೊಡುಗೆ ಸ್ಮರಣೆ ಮಾಡಲು ಮೂರು ದಿನಗಳ ಕನಕ, ಪರಂದರ ಸಂಗೀತ ಉತ್ಸವ ಅಚರಿಸಲಾಗುತ್ತಿದೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಜಯರಾಮ್, ಎಸ್.ಮಹೇಶ್, ವೆಂಕಟೇಶ್ ಬಾಬು, ಮಂಜುನಾಥಸ್ವಾಮಿ, ಸುದರ್ಶನ್, ರುಕ್ಮಿಣಿ, ಮದನ್ ರಾವ್, ಬಸವರಾಜು,ರವೀಂದ್ರ, ಎನ್.ಬಾಬು, ಹೆಚ್.ಕೃಷ್ಣಮೂರ್ತಿರವರು ಉಪಸ್ಥಿತರಿದ್ದರು.
ಜಗದೀಶ್ವರಿ ಮಹಿಳಾ ಮಂಡಳಿ ವತಿಯಿಂದ ಭಜನೆ ಕಾರ್ಯಕ್ರಮ , ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಮೂರು ದಿನಗಳ ಕಾಲ ಸಂಗೀತ, ನೃತ್ಯ ಉಪನ್ಯಾಸ, ದೇವರನಾಮ, ಭಜನೆ ಕಾರ್ಯಕ್ರಮಗಳು ಜರುಗಲಿದೆ