ಕೆ.ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಪುರ ಗ್ರಾಮದ ಮಲೆ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ 10ನೇ ವರ್ಷದ ಬೆಳದಿಂಗಳ ಪ್ರಾರಂಭೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಗವಹಿಸಿ ಮಾತನಾಡಿದ ಶಾಸಕ ಎಚ್ ಟಿ ಮಂಜು ಕಸಬಾ ಹೋಬಳಿಯ ಬೆಟ್ಟದ ಮೇಲೆ ನೆಲಸಿರುವ ಮಲೆ ಮಾದೇಶ್ವರ ಸ್ವಾಮಿಯ ಬೆಳದಿಂಗಳ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸುಮಾರು ವರ್ಷಗಳಿಂದ ನಾನು ಈ ಕ್ಷೇತ್ರಕ್ಕೆ ಬರುತ್ತಿದ್ದೇನೆ ನಾನು ಕಾಯಂ ಭಕ್ತನಾಗಿದ್ದೇನೆ ಚುನಾವಣೆಗೆ ಮುಂಚೆ ಬಂದಾಗ ಗುರುಗಳಾದ ಬಸಪ್ಪನವರು ಮುಂದೆ ಶಾಸಕನಾಗ್ತಿಯ ಎಂದು ಆಶೀರ್ವಾದ ಮಾಡಿದ್ದರು. ಅದರಂತೆ ನಾನು ಇವತ್ತು ಶಾಸಕನಾಗಿ ಇಲ್ಲಿ ಬಂದು ನಿಂತಿದ್ದೀನಿ. ಇದು ಈ ಕ್ಷೇತ್ರದ ಮಹಿಮೆ, ಇಲ್ಲಿ ನಿತ್ಯ ನೂರಾರು ಭಕ್ತರಿಗೆ ಅನ್ನ ದಾಸೋಹ ಕಾರ್ಯಕ್ರಮ ನಡೆಯುತ್ತದೆ ಎಂದರು
ನಂತರ ಮಾತನಾಡಿದ ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್ ಅವರು ಶಾಂತಿ ನೆಮ್ಮದಿ ಸಿಗುತ್ತದೆ ಕ್ಷೇತ್ರದ ಗುರುಗಳಾದ ಪೂಜ್ಯ ಬಸಪ್ಪನವರು ಹತ್ತು ವರ್ಷಗಳಿಂದ ಬೆಳದಿಂಗಳ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಆದ್ದರಿಂದ ಎಲ್ಲಾ ಭಕ್ತಾದಿಗಳು ಅವರಿಗೆ ಸಹಕರಿಸಿ ಮಲೆ ಮಾದೇಶ್ವರನ ಕೃಪೆಗೆ ಬಾಜರಾಗಿ ಮತ್ತು ಇದು ದಶಮಾನೋತ್ಸವ ಮುಂದೆ ಶತಮಾನೋತ್ಸವ ವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅಗ್ರಹಾರ ಬಾಚಹಳ್ಳಿ ಚಂದ್ರಶೇಖರ್ ಅವರ ಭಕ್ತಿ ಗೀತೆಗಳ ಗಾಯನ ನೆರೆದಿದ್ದ ನೆರೆದಿದ್ದ ಭಕ್ತರಿಗೆ ರಸದೌತಣ ಉಣಪಡಿಸಿತು. ಮತ್ತು ನೆರೆದಿದ್ದ ನೂರಾರು ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಭಕ್ತಾದಿಗಳು ಮಲೆ ಮಾದೇಶ್ವರನ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಸಂತೃಪ್ತಗೊಂಡರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ರವೀಂದ್ರ ಬಾಬು, ಮಲೆ ಮಾದೇಶ್ವರ ಸ್ವಾಮಿ ದೇವಸ್ಥಾನದ ಗುರುಗಳಾದ ಬಸಪ್ಪ ರವರು ,ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷರಾದ ಸುಜೇಂದ್ರ ಕುಮಾರ್, ಜೆಡಿಎಸ್ ಮುಖಂಡರಾದ ನಾಟನಹಳ್ಳಿ ಮಹೇಶ್, ಯುವ ಕಾಂಗ್ರೆಸ್ ಮುಖಂಡರಾದ ಚೇತನ್, ಹಾಗೂ ಹಿರಿಯ ಪತ್ರಕರ್ತರಾದ ನೀಲಕಂಠ ಹಾಗೂ ಪುರ ಗ್ರಾಮದ ಮುಖಂಡರುಗಳು ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಸೇರಿದ್ದರು.
ವರದಿ : ಜಗದೀಶ್ ಸಿ.ಆರ್ ಕೆ.ಆರ್ ಪೇಟೆ