ವಿಜಯಪುರ: ವಿಜಯಪುರ ನಗರದಲ್ಲಿ ಮುಂಬರುವ ದಿನಾಂಕ 28/12/2024 ರಂದು ವಿಜಯಪೂರ ಬಂದ ಕರೆ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ಹೋಟೆಲ್ ಅಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿತ್ತು.ಆದರೆ ಮಾಜಿ ಪ್ರಧಾನ ಮಂತ್ರಿ ಶ್ರೀ ಡಾಕ್ಟರ್ ಮನಮೋಹನ್ ಸಿಂಗ್ ರವರ ನಿಧನದಿಂದಾಗಿ ವಿಜಯಪುರ ಬಂದ್ ಕಾರ್ಯಕ್ರಮವನ್ನು ಡಿ,30,ಕ್ಕೆ ಮುಂದೂಡಲಾಗಿದೆ.
ವಿಜಯಪೂರ ಬಂದ ದಿನದಂದು ಜಿಲ್ಲೆಯಾದ್ಯಂತ ಸರಕಾರಿ ಕಚೇರಿಗಳು,ಸಾರ್ವಜನಿಕ ಸಾರಿಗೆ ,ಶಾಲಾ ಕಾಲೇಜುಗಳು ,ಬಹುತೇಕ ಎಲ್ಲ ಅಂಗಡಿ ಮುಗ್ಗಟ್ಟುಗಳು ಮುಚ್ಚಲಿವೆ.
ಅಗತ್ಯ ವಸ್ತುಗಳು ಹಾಗೂ ಆಸ್ಪತ್ರೆಗಳು ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಲಿವೆ ಎಂದು ಮಾಜಿ ಶಾಸಕರಾದ ರಾಜು ಆಲಗೂರ ಅವರು ಮಾಹಿತಿ ನೀಡಿದ್ದರು.
ಜಿಲ್ಲೆಯ ಎಲ್ಲ ದಲಿತ ಮುಖಂಡರು ,ಅಹಿಂದ ಮುಖಂಡರು,ಲೈಂಗಿಕ ಅಲ್ಪಸಂಖ್ಯಾತ ಮುಖಂಡರು,ರೈತ ಮುಖಂಡರು, ಅಲ್ಪಸಂಖ್ಯಾತ ಮುಖಂಡರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.
ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗು ಮಾತನಾಡಿದ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರ ಹೇಳಿಕೆಯನ್ನು ಖಂಡಿಸಿ ಡಿಸೆಂಬರ್30,ರಂದು ನಡೆಸುತ್ತಿರುವ ಈ ಬಂದಗೆ ನೀವು ಬೆಂಬಲಿಸಿ ನಿಮ್ಮವರಿಗೂ ತಿಳಿಸಿ..