ವಿಜಯಪುರ:ಜ್ಞಾನ ದೇಗುಲದ ವಾರ್ಷಿಕ ಸಂಭ್ರಮ!
ಜಂಗಮ ಜೋಳಗೆಯಿಂದ ಹಳಕಟ್ಟಿ ಅವರ ತಾಡವೊಲೆಯ ಪವಿತ್ರತೆಯಿಂದ ಹಿಡಿದು ಇಂದಿನ ಆಧುನಿಕ ಜಗತ್ತಿನಲ್ಲಿ ಅತಿ ಮುಂದುವರೆದಿರುವ ಶತಮಾನ ಕಂಡ ವಿಜಯಪುರದ ಬಿ. ಎಲ್. ಡಿ. ಇ. ಸಂಸ್ಥೆಯ ಪರಿಶ್ರಮದಿಂದ ದೊಡ್ಡ ವೃಕ್ಷವಾಗಿ ಬೆಳೆದು ಅದರ ಜ್ಞಾನದ ಬೀಜಗಳು ನಾಡಿನಾದ್ಯಂತ ಹೆಸರಾಗಿದೆ. ಹಳಕಟ್ಟಿ ಅವರು ಕಟ್ಟಿದ ಈ ಸರಸ್ವತಿ ಮಂದಿರ ಶ್ರೀ. ಬಿ.ಎಮ್. ಪಾಟೀಲರ ಬಹು ದೊಡ್ಡ ಕೆಲಸದಿಂದ ಇಂದು ಹೆಮ್ಮರವಾಗಿ ಬೆಳೆದು ತನ್ನ ಕವಲುಗಳನ್ನು ಚಾಚಿಕೊಂಡಿದೆ. ಈ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕಾಲೇಜುಗಳು ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಈ ಕನ್ನಡ ನೆಲದಲ್ಲಿ ಇಂಗ್ಲಿಷ್ ಶಾಲೆ ಶುರುವಾಯಿತು. ಅದು ಸೋಲಾಪುರ್ ರಸ್ತೆಯಲ್ಲಿ. ಆದರೆ, ವಿಜಯಪುರದ ಮಧ್ಯ ಭಾಗದಲ್ಲಿರುವ ಜನತೆಗೆ ಅನುಕೂಲದ ದೃಷ್ಟಿಯಿಂದ ಜಲ ನಗರದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಯಿತು. ಬೆರಳೆಣಿಕೆಷ್ಟು ಮಕ್ಕಳಿದ್ದರೂ ಕೂಡ ಶಿಕ್ಷಣಕ್ಕೆ ಕೊರತೆ ಇರಲಿಲ್ಲ. ವಿವಿಧ ಚಟುವಟಿಕೆಗಳ ಮೂಲಕ ಶಿಕ್ಷಣದ ಮೂಲಕ ಬೋಧಿಸುವ ವಿಧಾನ ಬಹುಬೇಗನೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಬಂತು 2012 -13ರಲ್ಲಿ ಪ್ರಾರಂಭವಾದ ಈ ಶಾಲೆಗೆ ಕೇವಲ 50-60 ವಿದ್ಯಾರ್ಥಿಗಳನ್ನು ಹೊಂದಿದ್ದು ಇಂದು ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡ ಆಲದ ಮರವಾಗಿದೆ. ಮೊದಲು ಪೂರ್ವ ಪ್ರಾಥಮಿಕ ಪ್ರಾಥಮಿಕ ಶಾಲೆಗಳಿದ್ದು, ಕಲಿಕೆಯಲ್ಲಿ ಉನ್ನತೀಕರಣಗೊಳಿಸಲು ಸಂಸ್ಥೆ ಮುಖ್ಯಸ್ಥರು ಸಿ. ಐ.ಎಸ್. ಸಿ. ಇ. ಮಾಧ್ಯಮವನ್ನಾಗಿ ಪರಿವರ್ತಿಸಿದರು. ಇದರ ನೊಂದಣಿಗಾಗಿ ಜಲನಗರ ಸಿಬ್ಬಂದಿಯು ಬಹಳ ಶ್ರಮಪಟ್ಟ ಫಲವಾಗಿ 2022 ರಲ್ಲಿ ಖಾಯಂ ನೊಂದಣಿಯಾಗಿ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟಿತ್ತು. ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಮಕ್ಕಳ ಕಲಿಕೆಯು ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ ಮಾದರಿಗಳ ಮೂಲಕ ಕಲಿಕೆಯು ನಡೆದರೆ, ಇದರ ಜೊತೆಗೆ ಮಕ್ಕಳ ಮನೋವಿಕಾಸಕ್ಕಾಗಿ ಹಲವಾರು ಚಟುವಟಿಕೆಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ವರ್ಷವೂ ನಡೆಯುತ್ತವೆ. 60 -70 ಜನ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಸೇರಿ 150ರ ವರೆಗೆ ಇದ್ದ, ಇಲ್ಲಿಯ ಎಲ್ಲಾ ವೃತ್ತಿಬಾಂಧವರು ಸಹಕಾರದಿಂದ ಕೆಲಸ ನಿರ್ವಹಿಸುತ್ತಿದ್ದುದರಿಂದ,
ಪ್ರತಿಯೊಂದು ಚಟುವಟಿಕೆಗಳಲ್ಲಿ ಶಾಲೆಯು ತನ್ನ ಚಾಪನ್ನು ಮೂಡಿಸುತ್ತಿದೆ. ಮಾದರಿಗಳ ಮೂಲಕ ಬೋಧಿಸುವುದು, ಪ್ರತಿಯೊಂದು ರಂಗದಲ್ಲಿ ಅವರ ಮಕ್ಕಳ ಪ್ರತಿಭೆಗೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ಮಾಡುವುದು, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಮೂಡಿಸಲು ಸ್ಪರ್ಧೆಗಳನ್ನು ಏರ್ಪಡಿಸಿ ವರ್ಷದ ಕೊನೆಗೆ ಅವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹ ನೀಡುವುದು. ಅತ್ಯಂತ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಎಲ್ಲ ಪ್ರತಿಭೆಗಳು ಅನಾವರಣಗೊಳ್ಳುವಂತಹ ಕಾರ್ಯಕ್ರಮ ನಡೆಯುವುದು ಡಿಸೆಂಬರ್ ತಿಂಗಳಿನ ಕೊನೆಯ ವಾರದಲ್ಲಿ. ಈ ವರ್ಷವೂ 24 -12 – 2024ರಂದು ಅದ್ಧೂರಿಯಾಗಿ ಜರುಗುವುದು. ಅಧ್ಯಕ್ಷರಾದ ಶ್ರೀಯುತರಾದ. ಸುನಿಲ್ ಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ. ಶ್ರೀ. ಪ್ರಾಚಾರ್ಯ ದರ್ಶನ್ ಹುನಗುಂದ್ ಅವರ ಸಹಕಾರದೊಂದಿಗೆ ಶಾಲಾ ಚಟುವಟಿಕೆಗಳು ಅತ್ಯಂತ ಶಿಸ್ತು ಬದ್ಧವಾಗಿ ನಡೆಯುತ್ತಾ ಮಕ್ಕಳ ಪಾಲಕರ ಮನಸ್ಸನ್ನು ಗೆಲ್ಲುವಂತ ಪ್ರಯತ್ನವನ್ನು ಮಾಡುತ್ತಾ ಈ ಶಾಲೆಯು ವಿಜಯಪುರದ ನಗರದಲ್ಲಿ ತನ್ನ ಹೆಸರನ್ನು ಅಗ್ರಸ್ಥಾನದಲ್ಲಿ ಇರಿಸಿಕೊಂಡಿದೆ. ಇಲ್ಲಿಯ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಯವರು ಶಾಲೆಯ ಶ್ರೇಯೋಭಿವೃದ್ಧಿಗಾಗಿ ಸದಾ ಕಾಲವು ಶ್ರಮಿಸುತ್ತಲೇ ಇರುವರು. ಆದ್ದರಿಂದಲೇ ಇಂದು ಈ ದೇಗುಲ ಜ್ಞಾನದ ಕಣಜವಾಗಿ ಕಂಗೊಳಿಸುತ್ತಿದೆ!