ಮೂಡಲಗಿ:ಡಿ,05-ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಜೀವವಿಮೆ ಹಣಕ್ಕಾಗಿ ಅಣ್ಣನ ಕೊಲೆ ಮಾಡಿದ ತಮ್ಮ.
50 ಲಕ್ಷ ಜೀವವಿಮೆ ಹಣಕ್ಕಾಗಿ ಅಣ್ಣನಾದ ಹನುಮಂತ ಗೋಪಾಲ ತಳವಾರ (35) ಎಂಬುವವನನ್ನು, ತಮ್ಮನಾದ ಬಸವರಾಜ ತಳವಾರ ತನ್ನ ಸಹಚರರಾದ ಬಾಪು ಶೇಖ, ಈರಪ್ಪ ಹಡಿಗಿನಾಳ ಹಾಗೂ ಸಚಿನ ಕಂಟೆನ್ನವರ ಕೊಲೆ ಮಾಡಿದ್ದಾರೆಂದು ಘಟಪ್ರಭಾ ಠಾಣೆಯ ಪೊಲೀಸರು ಪತ್ತೇಹಚ್ಚಿ ಬಂಧಿಸಿದ್ದಾರೆ.
ನವೆಂಬರ್,07ರಂದು ಕಲ್ಲೋಳಿಯಲ್ಲಿ ಶವ ಪತ್ತೇ.ಮೊದಲು ಸಹಜ ಸಾವು ಎಂದು ತಿಳಿದಿದ್ದರು, ಇದು ಸಹಜ ಸಾವು ಅಲ್ಲ ಎಂದು ವೈದ್ಯರು ಹೇಳಿದಾಗ ತನಿಖೆ ನಡೆಸಿದಾಗ ಬಯಲಿಗೆ ಬಂತು.

ಬಸವರಾಜ ತಮ್ಮ ,50 ಲಕ್ಷ ಮೊತ್ತದ ಜೀವವಿಮೆ ಪಾಲಿಸಿಯನ್ನು ಒಂದು ವರ್ಷದ ಹಿಂದೆ ಅಣ್ಣನಾದ ಹನುಮಂತ ಹೆಸರಿನಲ್ಲಿ ಮಾಡಿದ್ದರು.ಹನುಮಂತನಿಗೆ ಮದ್ಯ ಕುಡಿಸಿ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆ ಸುಳಿವು ಸಿಕ್ಕ ಕೂಡಲೇ ಆರೋಪಿಗಳು ಪರಾರಿ,ಮೊಬೈಲ್ ಆದರಿಸಿ ಬಂದಿಸಿದರು.
ಈಗ ಘಟಪ್ರಭಾ ಠಾಣೆಯಲ್ಲಿ ಆರೋಪಿಗಳು ಬಂದಿತ್ತರಾಗಿದ್ದಾರೆ ಎಂದು ತಿಳಿದು ಬಂದಿರುವುದು.

LEAVE A REPLY

Please enter your comment!
Please enter your name here