ಬೆಂಗಳೂರು:(ನವೆಂಬರ್ 20):- ಕರ್ನಾಟಕ ಪ್ರದೇಶ ಕುರುಬರ ಸಂಘ(ರಿ) ವತಿಯಿಂದ ನಗರದ ‌ಬನಶಂಕರಿ ಮೊದಲ ಹಂತದ ಶ್ರೀನಿವಾಸ ನಗರದಲ್ಲಿ ‌ನೂತನವಾಗಿ ನಿರ್ಮಿಸಿರುವ ಕನಕ ಕಾಲೇಜು ಮತ್ತು ವಸತಿ ನಿಲಯವನ್ನು ಕನಕಗುರು ಪೀಠ ತಿಂತಿಣಿ ಬ್ರಿಜ್ ಶಾಖಾ ಮಠ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಯವರ ದಿವ್ಯಸಾನಿಧ್ಯದಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್.ಸುರೇಶ(ಬೈರತಿ) ಅವರು ಉದ್ಘಾಟಿಸಿದರು.

ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರೇವಣ್ಣ, ಕೆ.ಆರ್. ನಗರ ಶಾಸಕರಾದ ಶ್ರೀ ಡಿ.ರವಿಶಂಕರ್, ‌ವಿಧಾನ ಪರಿಷತ್ ಸದಸ್ಯರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಮಾಜದ ಬಂಧುಗಳ ಉಪಸ್ಥಿತರಿದ್ದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಕನಕಗುರು ಪೀಠ ತಿಂತಿಣಿ ಬ್ರಿಜ್ ಶಾಖಾ ಮಠ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ವಹಿಸಿದ್ದರು.ಸಮಾರಂಭದಲ್ಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here