ಬೆಂಗಳೂರು:ರೈತರಿಗೆ ಶಕ್ತಿ ತುಂಬಲು ಸಹಕಾರ ಸಂಘಗಳಿವೆ.ಇವುಗಳಿಗೆ ಬಲತುಂಬುವುದು ನಬಾರ್ಡ್ ಆದ್ದರಿಂದ ನಬಾರ್ಡ್ನಿಂದ ೨೦೨೦/೨೧ರಲ್ಲಿ ೫೫೦೦ ಕೋಟಿ ಸಾಲ ಬಂದಿದೆ,೨೧/೨೨ರಲ್ಲಿ ೫೪೮೩ ಕೋಟಿ ಬಂದಿದೆ,೨೨/೨೩ ರಲ್ಲಿ ೫೫೫೦ ಕೋಟಿ ಬಂದಿದೆ,೨೩/೨೪ ರಲ್ಲಿ ೫೬೦೦ ಕೋಟಿ ಬಂದಿದೆ ಆದರೆ ಈ ಭಾರಿ ಕೇವಲ ೨೩೦೦ ಕೋಟಿ ಬಂದಿದೆ.ರಾಜ್ಯದಲ್ಲಿಮೂವರು ಕೇಂದ್ರ ಸಚಿವರಿದ್ದಾರೆ ಹಾಗೂ ರೈತರ ಪರ ಅನ್ನೋ ಕುಮಾರಸ್ವಾಮಿಯೂ ಇದ್ದಾರೆ.ಇವರೆಲ್ಲಾ
ಯಾಕೆ ಇದರ ಬಗ್ಗೆ ಅವರು ಬಾಯಿ ಬಿಡ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
೨೦೨೧ರಲ್ಲಿ ಸಹಕಾರ ಇಲಾಖೆ ಕೇದ್ರ ಮಾಡಿದೆ
ಅಮಿತ್ ಶಾ ಅವರೇ ಅದರ ಮುಖ್ಯಸ್ಥರಾಗಿದ್ದಾರೆ.ಸಹಕಾರ ಸಂಘಗಳ ಮಾನಿಟರ್ ಅವರೇ ಮಾಡ್ತಿದ್ದಾರೆ
ಕಾರ್ಪೋರೇಟ್ ಸೆಕ್ಟರ್ ಮಾಡೋಕೆ ಹೊರಟಿದ್ದಾರೆ ಆದರೆ ರೈತರ ಪರ ಅವರಿಗೆ ಕಾಳಜಿ ಇಲ್ಲ.ನಾವು ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡ್ತಿದ್ದೆವು ಇವತ್ತು ಬಡ್ಡಿ ರಹಿತ ಸಾಲ ವಿಸ್ತರಣೆ ಮಾಡಿದ್ದೇವೆ.೩ ಲಕ್ಷದಿಂದ ೫ ಲಕ್ಷ ಶೂನ್ಯ ಬಡ್ಡಿ ಸಾಲ ಕೊಡ್ತಿದ್ದೇವೆ.ಧೀರ್ಘಾವದಿಯಲ್ಲಿ ೧೦ ರಿಂದ ೧೫ ಲಕ್ಷ ಕೊಡ್ತಿದ್ದೇವೆ.ಆದರೆ ನಬಾರ್ಡ್ ನಿಂದ ಈ ಭಾರಿ ಕಡಿತವಾಗಿದೆ ಹಾಗಾಗಿ ಸಹಕಾರ ಬ್ಯಾಂಕುಗಳಲ್ಲಿ ಸಾಲ ನೀಡಿಕೆ ಕಡಿಮೆ ಇದರಿಂದ ರೈತರು ಲೇವಾದೇವಿಯವರ ಬಳಿಹೋಗ್ತಾರೆ ಹೆಚ್ಚಿನ ಬಡ್ಡಿಗೆ ಸಾಲ ತೆಗೆದುಕೊಳ್ತಾರೆ ಅವರು ಸಾಲ ತೀರಿಸೋದೆ ಕಷ್ಟವಾಗುತ್ತದೆ ಇದಕ್ಕೆಲ್ಲ ಕಾರಣ ಯಾರು ಕೇಂದ್ರ ತಾನೇ ಎಂದು ಪ್ರಶ್ನಿಸಿದರು.
ನಾವು ಹಿಂದೆ ಕೇಂದ್ರಕ್ಕೆ ನೆರವಿಗಾಗಿ ಬೇಡಿಕೆ ಇಟ್ಟಿದ್ದೆವು ಪ್ರಿಯಾಂಕ್,ಕೃಷ್ಣಬೈರೇಗೌಡ ನಾನು ಹೋಗಿದ್ದೆವು ಅದರೆ ಯಾವುದೇ ರೆಸ್ಪಾನ್ಸ್ ಬರಲಿಲ್ಲ ಕೊನೆಗೆ ಸುಪ್ರೀಂಗೆ ಹೋಗಿ ಪಡೆಯಬೇಕಾಯ್ತು ನಮ್ಮ ಕೇಂದ್ರ ಸಚಿವರು ಯಾಕೆ ಮಾತನಾಡ್ತಿಲ್ಲ ರೈತರ ಪ್ರಾಪಿಟ್ ನೋಡಿ ಸಾಲ ಕೊಡೋಕೆ ಆಗುತ್ತಾ?ಬೇರೆ ಸೆಕ್ಟರ್ ಗಳಿಗೆ ನಬಾರ್ಡ್ ಸಾಲ ಕೊಡುತ್ತೆ
೯,೧೦ ಪರ್ಸೆಂಟ್ ಸಾಲ ಸೌಲಭ್ಯ ನೀಡುತ್ತದೆ
ಆದರೆ ರೈತರ ಬಗ್ಗೆ ಯಾಕೆ ಕಾಳಜಿಯಿಲ್ಲ
ಅಮಿತ್ ಶಾ ಸಹಕಾರಿ ಸಚಿವರಾದ ಮೇಲೆ ಹಿನ್ನಡೆ ರೈತರು ಬರ್ಡನ್ ಆಗ್ತಿದ್ದಾರೆ ಅವರು ದ್ವೇಷಕ್ಕೆ ಬೀಳುವುದೇನಿದೆ ಎಂದು ಸಚಿವ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.