ನಾವು ವಾರ್ತೆ ಓದುವಾಗ ಹೀಗೆ ಗಂಭೀರವದನರಾಗಿರುತ್ತಿದ್ದೆವು.. ಈಗ ಕಿರುಚುತ್ತಾ, ಅರಚುತ್ತಾ, “ಬಿಟ್ಹಾಕಿ, ತಗಂಡೋಗಿ, ಹುಚ್ಚೆಬ್ಸು, ಮಣ್ಣಗಂಟ್ಟಿ, ಬಾಲಂಗೋಚಿ” ಅಂತೆಲ್ಲಾ ಏನೇನೊ ಪದ ಬಳಕೆ ಮಾಡುತ್ತಾ , ಹಾರಾಡುವುದೇ ನ್ಯೂಸ್ ಆಗಿಹೋಗಿದೆ.
ವಾರ್ತೆ ಅಂದಮೇಲೆ ವಿಷಯವನ್ನು ಜನರಿಗೆ ಮುಟ್ಟಿಸುವುದಷ್ಟೇ ನಮ್ಮ ಕೆಲಸವಾಗಿತ್ತು. ಈಗ ನ್ಯೂಸ್ ರೀಡರ್ ಕಂ ಲಾಯರ್ ಕಂ ಜಡ್ಜ್ ಕಂ ಪೊಲೀಸ್ ಕಂ ಇತ್ಯಾದಿ ಇತ್ಯಾದಿ ಎಲ್ಲಾ ಆಗಿಬಿಡುತ್ತಾರೆ.
ನಮಗೆ ಸುದ್ದಿ ಓದುವಾಗ ಯಾವುದೇ ಭಾವನೆಗಳಿರಬಾರದು. ಪಕ್ಷಾತೀತವಾಗಿ ಜಾತ್ಯಾತೀತವಾಗಿ ಗಂಭೀರವಾಗಿ ಓದಬೇಕು ಎಂದಿತ್ತು. ಈಗ….. ಬೇಡ ಬಿಡಿ…
ಆಗ ಬರುವ ಅರ್ಧ ಗಂಟೆ ನ್ಯೂಸ್ ಗಾಗಿ ಜನ ಕಾದು ಕುಳಿತು ನೋಡುತ್ತಿದ್ದರು ಈಗ ದಿನವಿಡೀ ನ್ಯೂಸ್ ಓದುತ್ತಾರೆ ಅಲ್ಲ ಬೊಬ್ಬೆ ಹೊಡೆಯುತ್ತಾರೆ,, ಕೇಳೋರು ಇಲ್ಲ…
ಅದು ನಮ್ಮ ಗೋಲ್ಡನ್ ಡೇಸ್. ಆ ಕಾಲದಲ್ಲಿ ನ್ಯೂಸ್ ರೀಡರ್ ಆಗಿದ್ದು ನಮ್ಮ ಹೆಮ್ಮೆ..
ಹಾ! ಮತ್ತೊಂದು ಖುಷಿಯೆಂದರೆ, ಅಣ್ಣಾವ್ರು ಕಾಡಿನಿಂದ ಬಿಡುಗಡೆಗೊಂಡ ಮೊದಲ ನ್ಯೂಸ್ ಓದಿದ್ದು ನಾನು, ಹಾಗೂ ಅದೇ ನನ್ನ ಮೊದಲ ನ್ಯೂಸ್ ಆಗಿತ್ತು ಎಂಬುದೇ ನಾನೆಂದೂ ಮರೆಯದ ಅತ್ಯಂತ ಖುಷಿಯ ಘಳಿಗೆ..ಕೃಪೆ:ಸಾಮಾಜಿಕ ಜಾಲತಾಣ)