ತುಮಕೂರು:ನವಂಬರ್ 24ರಂದು ತುಮಕೂರು ನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಪತ್ರಕರ್ತ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು ಜೊತೆಯಲ್ಲಿ ನಮ್ಮ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಮಹಿಳಾ ಪತ್ರಕರ್ತರಿಗೆ, ವಿಶೇಷವಾಗಿ ಕುಟುಂಬದವರಿಗೆ, ಮಕ್ಕಳಿಗೆ, ಕ್ರೀಡಾಕೂಟವನ್ನು ಜಿಲ್ಲಾ ಸಂಘ ಆಯೋಜಿಸಿದ್ದು ಇದರ ಯಶಸ್ವಿಗೆ ಜಿಲ್ಲಾ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು ಜಿಲ್ಲೆಯ ಎಲ್ಲಾ ಪತ್ರಕರ್ತರು ರಾಜಕಾರಣಿಗಳು, ಜಿಲ್ಲಾಡಳಿತ, ಅಧಿಕಾರಿ ವರ್ಗದವರು ಸಂಪೂರ್ಣ ಸಹಕಾರ ನೀಡುತ್ತಿದೆ. ಹಾಗೂ ಇದರ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಮತ್ತಷ್ಟು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿರ್ವಹಿಸಲು ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಹಾಗೂ ರಾಜ್ಯ ಪದಾಧಿಕಾರಿಗಳ ನಿರ್ದೇಶನದಂತೆ ಜಿಲ್ಲಾ ಸಂಘ ಯಶಸ್ವಿಯಾಗಿ ಮಾಡಲು ವಿವಿಧ ಸಮಿತಿಗಳ ಪದಾಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ
ಚಿ.ನಿ. ಪುರುಷೋತ್ತಮ್ ಜಿಲ್ಲಾಅಧ್ಯಕ್ಷರು,
ಟಿ. ಇ ರಘುರಾಮ್ಜಿ ಲ್ಲಾ ಪ್ರಧಾನ ಕಾರ್ಯದರ್ಶಿ
ಕ್ರೀಡಾ ಸಂಚಾಲಕರು.
ಸತೀಶ್ ಹಾರೋಗೆರೆ ಜಿಲ್ಲಾ ಕಾರ್ಯದರ್ಶಿ
ಯಶಸ್ ಕೆ. ಪದ್ಮನಾಭ ಜಿಲ್ಲಾ ನಿರ್ದೇಶಕ ಹಾಗೂ
ಜಿಲ್ಲಾ ಪದಾಧಿಕಾರಿಗಳು,ನಿರ್ದೇಶಕರುಗಳು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲೆಯ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಬೇಕೆಂದು ಈ ಮೂಲಕ ಕೋರುತ್ತೇವೆ ಎಂದು ಮನವಿ ಮನವಿ ಮಾಡಿಕೊಂಡಿದ್ದಾರೆ.