ಹೊಸದುರ್ಗ:ವರದಾ ನದಿಯ ಸುಂದರ ವಿಶಾಲ ದಡದಲ್ಲಿ ವಿಶಾಲ ಹೊಳೆಯ ದಡದಲ್ಲಿ…ಮೈದಾಳುತ್ತಿರುವ ಏಷ್ಯಾದಲ್ಲಿ ಅತ್ಯಂತ ಎತ್ತರದ 37 ಅಡೆಯ ಕನಕ ಶಿಲಾ ಮೂರ್ತಿ ಸದ್ಯದಲ್ಲೇ ಲೋಕಾರ್ಪಡೆಯಾಗುವ ಪೂರ್ವ ಸಂದರ್ಭದಲ್ಲಿ ಕುರುಬ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲಾ ಪ್ರೌಢಶಾಲೆ ಕಾಲೇಜ್ ಇನ್ನಿತರೆ ತಾಂತ್ರಿಕ ಕಾಲೇಜುಗಳ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ
ಇಲ್ಲಿ ಪ್ರತಿಯೊಬ್ಬ ಭಕ್ತರ ಜೋಡಿಗೆ ಕಾಣಿಕೆ ಸರ್ಕಾರದ ಅನುದಾನ, ಚಾಚು ತಪ್ಪದೇ
ಮಠದ ಅಭಿವೃದ್ಧಿಗಾಗಿ ಬೇಗ ವ್ಯಯವಾಗುತ್ತಿದೆ.
ಭಕ್ತರೇ ಭಕ್ತರಿಂದಲೇ ನಿರ್ಮಾಣಗೊಳ್ಳುತ್ತಿರುವ
ಭಕ್ತರ ಭಕ್ತಿ ಇಲ್ಲಿ… ಎದ್ದು ಕಾಣುತ್ತಿದೆ.
ಹೊಸದುರ್ಗ ಹುಲಿ ಯಾರು ರಸ್ತೆಯಲ್ಲಿರುವ ಹೊಸದುರ್ಗ ಶಾಖಾಮಠ ರಾಜ್ಯದ ಕುರುಬ ಸಮುದಾಯ ಪ್ರಗತಿಯ ಸಂಕೇತ. ಸದ್ಯದಲ್ಲೇ ಕನಸು ನನಸಾಗುವ ಸಕಾರ ಗೊಳ್ಳುತ್ತಿರುವ ದಿನಗಳು ಹತ್ತಿರ ಬರುತ್ತಿದೆ.
ಈ ಅಂಗವಾಗಿಯೇ ನವೆಂಬರ್ ತಿಂಗಳ 18 ರಂದು
ಲಕ್ಷ ದೀಪೋತ್ಸವ ಹಚ್ಚುವ ಒಂದು ವಿನೂತನ ದೀಪದಿಂದ ದೀಪ ಹಚ್ಚಿ ಕನಕರ ಮನೆಮನೆಯಲ್ಲೂ ಕನಕನ ದೀಪಗಳು ಬೆಳಗಿಸಿ ತಲುಪಿಸುವ ಗುರಿ.. ಒಂದು ದೂರದ ಆಲೋಚನೆ. ಶ್ರೀ ಈಶ್ವರ ನಂದಪುರಿ ಸ್ವಾಮಿಗಳದು.
ಕನಕನ ಸಂದೇಶ ಕೇವಲ ಗೋಡೆ ಮೇಲಿನ ಬರಹಗಳಲ್ಲ
ಕೃತಿಗಳಲಿಲ್ಲ. ಅದು ಪ್ರತಿ ಕುರುಬ ಸಮುದಾಯ ತಳ ಸಮುದಾಯಗಳ ಪ್ರತಿ ಮನೆ ಮನಗಳಲ್ಲಿ ಸಂದೇಶವಾಗಿ ಅದು ಕಾರ್ಯರೂಪಕ್ಕೆ ಇಳಿಯಲು ಕೃತಿ ಬದುಕಿನಲ್ಲೂ ಅಳವಡಿಸಿಕೊಳ್ಳುವ
ಕನಕದಾಸರ ವೈಚಾರಿಕ, ಬದುಕಿನ ವೈಖರಿ, ಕುಲ ಮತಗಳಿಂದ ಎಲ್ಲರನ್ನೂ ಕೂಡಿಸಿಕೊಂಡು ಬಾಳ್ವೆ ಮಾಡುವ…
ಆತನ ಸಂದೇಶವನ್ನ ಇಡೀ ನಾಡಿಗೆ ತಲುಪಿಸುವ
ಮಹಾನ್ ಸುಂದರ ಆಲೋಚನೆ ಶ್ರೀಗಳದು
ದಾವಣಗೆರೆ ತಾಲೂಕಿನ ಬಾಯಿಕೊಂಡ ಲೋಕಿಕೆರೆ ತ್ ದಾವಣಗೆರೆ ಹಲವಾರು ಭಕ್ತರ ಮನೆ ಮನೆಗಳಿಗೆ ಹೋಬಳಿಯ ಗ್ರಾಮಗಳಿಗೆ
ತಾಲೂಕಿನ ಐತಿಹಾಸಿಕ ದೊಡ್ಡ ಗ್ರಾಮ ಲೋಕಿ ಕರಿಯ ಶ್ರೀ ಬೀರೇಶ್ವರ ಗುಡಿಯ
ನಿರ್ಮಾಣದ ಸ್ಥಳಕ್ಕೆ ಭೇಟಿ ಕೊಟ್ಟ ಶ್ರೀಗಳು.
ಕುರುಬರ ಆರಾಧ್ಯ ದೈವ ಸಾಂಸ್ಕೃತಿಕ ವೀರ. ಶಲ್ಯ ಸಂಸ್ಕೃತಿಯ ಪ್ರತೀಕ.ಇಲ್ಲ ಗುಡಿ ಕಟ್ಟಿನ ಬಳಗಸ್ತರು ದಾನಿಗಳ ಭಕ್ತರ ಗುಡಿಕಟ್ಟಿನ ಸಹಕಾರದಿಂದ ಸುಂದರ ಶಿಲ್ಪ ಕಲಾ ಕೃತಿ ಇಲ್ಲಿ ಬೈದಾಳುತ್ತಿದೆ.ಇದು ಈಗಿನ ಪೀಳಿಗೆಗೆ ಸೇರಿದಂತೆ ಮುಂದಿನ ಪೀಳಿಗೆಗೂ ಕೂಡ. ಆದರ್ಶವಾಗಲಿ ಎಂದು ಭಕ್ತರಿಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಬಾಡದ ಸುರೇಶ್, ದಾವಣಗೆರೆ ಜಿಲ್ಲಾ ವಿದ್ಯಾವರ್ಧ ಸಂಘದ ನಿರ್ದೇಶಕ ಬಾಡದ ರವಿ ರೈತ ಸಂಘದ ಮುಖಂಡ ಹನುಮಂತಪ್ಪ. ಲೋಕಿಕೆರೆ ಗುಡಗಟ್ಟಿನ ಮುಖಂಡರಾದ ತಾಳೆಗರ ಬೂಮಪ ಚೌಡಿಗೆರ್ ಹನುಮಂತಪ್ಪ, ಪೂಜಾ ರಾಜನಪ್ಪ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಸಮಾಜದ ಹಿರಿಯ ಪತ್ರಕರ್ತ ಮಾಧ್ಯಮ ವೃತ್ತ ಪ್ರಶಸ್ತಿ ವಿಜೇತ ಪುರಂದರ ಲೋಕಿಕೆರೆ, ಪೂಜಾರ್ ಆನಂದಪ್ಪ, ಪೂಜಾರ್ ವಸಂತಪ್ಪ, ನಿ. ಶಿಕ್ಷಕ ಶಂಕರ್, ತಾಳಿದರ ಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ, ಚೌಟ್ಕರ ಸಿಆರ್ ಮಾದಪ್ಪ ಯುವ ಮುಖಂಡರು, ಸೇರಿದಂತೆ ಸಮಾಜದ ಯುವಕರು, ಸಮಾಜದ ಮಹಿಳೆಯರು, ಶ್ರೀಗಳ ಭೇಟಿಯ ಸಮಯದಲ್ಲಿ
ಉಪಸಿತರಿದ್ದರು.ನಂತರ ಶ್ರೀಗಳ ಸಂಚಾರ
ದಾವಣಗೆ ಹೋಬಳಿ ಬಸಾಪಟ್ಟಣ ಹೋಬಳಿಯ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಲಕ್ಷಾಂತರ ದೀಪೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.



LEAVE A REPLY

Please enter your comment!
Please enter your name here