ಕಲಬುರ್ಗಿ: ಅ27 ರಾಜ್ಯದಲ್ಲಿರುವ ಆದಿ ಬಣಜಿಗ ಸಮಾಜಕ್ಕೆ 2 ಎ ‌ಮೀಸಲಾತಿ ನೀಡಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಕಲಬುರ್ಗಿ ಜಿಲ್ಲಾಧಿಕಾರಿಗಳ ಮೂಲಕ ಆದಿ ಸಮಾಜದ ಗೌರವಾಧ್ಯಕ್ಷ ವಿಶ್ವನಾಥ್ ಪಾಟೀಲ್ ಗವನಳ್ಳಿ ಮನವಿ ಮಾಡಿದ್ದಾರೆ
ಆದಿ ಸಮಾಜ ಈಗಾಗಲೇ 3 ಬಿ ಅಡ್ಡಿಯಲ್ಲಿದ್ದು ಪ್ರವರ್ಗ 3 ಬಿ ರ ಅಡ್ಡಿಯಿಲ್ಲಿದ್ದು ಪ್ರವರ್ಗ 3 ರಡಿ ಲಿಂಗಾಯತ 19 ಉಪ ಜಾತಿಗಳು ಮೀಸಲಾತಿ ಸೌಲಭ್ಯ ಪಡೆಯುತ್ತವೆ
2009 ರಲ್ಲಿ ಸರ್ಕಾರ ಆದಿ ಬಣಜಿಗ ಸಮಾಜವನ್ನು ಗೇಜೇಟನಲ್ಲಿ ಸೇರ್ಪಡೆ ಮಾಡಿ ಶೇ/ 5 ರಷ್ಟು ಮೀಸಲಾತಿ ನಿಗದಿ ಗೋಳಸಲಾಗಿಯತ್ತು ನಂತರ ಸದರಿ ಆದೇಶವನ್ನು ಅಂದಿನ ಸರಕಾರ ಹಿಂಪಡೆದು ಆದಿ ಸಮಾಜಕ್ಕೆ ಅನ್ಯಾಯವೆಸಗಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು ಆದಿ ಸಮಾಜವು ರಾಜ್ಯದಲ್ಲಿ ಬಿದರ ಕಲಬುರ್ಗಿ ಯಾದಗಿರಿ ಕೊಪ್ಪಳ ರಾಯಚೂರು ಬಳ್ಳಾರಿ ವಿಜಯಪುರ ಬಾಗಲಕೋಟ ಚಿಕ್ಕೋಡಿ ಹಾವೇರಿ ಬೆಳಗಾವಿ ಗದಗ ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹೊಂದಿದೆ
ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 38 ರಿಂದ 40 ಲಕ್ಷ ಜನಸಂಖ್ಯೆ ಹೊಂದಿದೆ ಸಮಾಜಕ್ಕೆ 1883 ರಲ್ಲಿ ಮುಂಬಯಿ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಾಗ ಆದಿ ಬಣಜಿಗ ಸಮಾಜ ಎಂದು ಗೇಜೇಟನಲ್ಲಿ ನಮೂದಿಸಿತ್ತು ಇದನ್ನು ಸರ್ಕಾರ ಮತ್ತು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು
ಆದಿ ಸಮಾಜವು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ ಹಾಗೂ ಸೌಲಭ್ಯ ವಂಚಿತ ಸಮುದಾಯ ವಾಗಿದ್ದು ಸಮಾಜದ ಹೆಚ್ಚಿನ ಜನ ಕೃಷಿ ಮತ್ತು ಕೂಲಿ ಕಾರ್ಮಿಕರ ಕೆಲಸದಲ್ಲಿ ತೊಡಗಿದೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಎಸ್ ಸಿದ್ದಗಂಗಯ್ಯ ನವರು ಎನ್ ಶಂಕರಪ್ಪ ಸಿ ಎಸ್ ದ್ವಾರಕಾನಾಥ್ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದ್ದೇವೆ 2005 ರಲ್ಲಿ ಎಸ್ ಸಿದ್ದಲಿಂಗಯ್ಯ ನಂತರ ಜಯಪ್ರಕಾಶ್ ಹೆಗ್ಡೆ ಅವರು ಅಂದು ಸರ್ಕಾರಕ್ಕೆ ಆದಿ ಬಣಜಿಗ ಸಮಾಜಕ್ಕೆ 2 ಎ ‌ಮೀಸಲಾತಿ ಅವಶ್ಯವಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದೆ ವರದಿಯಲ್ಲಿ ತಿಳಿಸಿದ್ದಾರೆ ಆದರೆ ಸರ್ಕಾರ ಮಾತ್ರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ 2010 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿ ಆದಿ ಬಣಜಿಗ ಸಮಾಜಕ್ಕೆ 2 ಎ ‌ಮೀಸಲಾತಿ ನೀಡಲು ನಮ್ಮ ಸರ್ಕಾರ ಸಿದ್ಧ ಎಂದು ಹೇಳಿದರು ಅದೆ ಸಮಯದಲ್ಲಿ ಧರ್ಮಸಿಂಗ್ ಅವರು ಇದು ಚುನಾವಣೆ ನೀತಿ ಸಂಹಿತೆ ಸಮಯ ಎಂದು ಹೇಳಿಕೆ ನೀಡಿದ್ದರು ಮರುದಿನ ಯಡ್ಡಿಯೂರಪ್ಪ ನಾನು ಆದಿ ಸಮಾಜಕ್ಕೆ ಪ್ರವರ್ಗ 2 ಎ ‌ಮೀಸಲಾತಿ ಸೌಲಭ್ಯ ನೀಡುವ ಹೇಳಿಕೆ ನೀಡೆ ಇಲ್ಲ ಎಂದು ಪುನರುಚ್ಚರಿಸಿದ್ದರು ಆ ಸಮಯ ಚುನಾವಣೆ ನೀತಿ ಸಂಹಿತೆ ಇದ್ದುದು ನೀಜ ಮುಂದೆ ಸಮಾಜದ ಬಗ್ಗೆ ಯಾರೂ ಮಾತನಾಡಲಿಲ್ಲ ಇದು ನಮ್ಮ ಸಮಾಜದ ದುರಂತ
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ದೇವೆಗೌಡ ಶ್ರೀ ಜೆ ಎಚ್ ಪಟೇಲ್ ಎಸ್ ಎಮ್ ಕೃಷ್ಣ ಶ್ರೀ ಧರ್ಮಸಿಂಗ್ ಶ್ರೀ ಎಚ್ ಡಿ ಕುಮಾರಸ್ವಾಮಿ ಶ್ರೀ ಬಿ ಎಸ್ ಯಡಿಯೂರಪ್ಪ ಶ್ರೀ ಡಿ ವಿ ಸದಾನಂದಗೌಡ ಶ್ರೀ ಜಗದೀಶ್ ಶೆಟ್ಟರ್ ಶ್ರೀ ಸಿದ್ದರಾಮಯ್ಯ (ತಮಗೆ) ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಸೇರಿದಂತೆ ಮೇಲಿನ ಎಲ್ಲಾ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಆದರೂ ಯಾರು ನಮ್ಮ ಸಮಾಜದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ
ಬೆಳಗಾವಿ : ಚಳಿಗಾಲದ ಅಧಿವೇಶನದಲ್ಲಿ 2 -3 ಬಾರಿ ಬಾರಿ ದೊಡ್ಡ ಸಂಖ್ಯೆಯಲ್ಲಿ ಆದಿ ಸಮಾಜದ ಜನ ಸೇರಿ ಪ್ರತಿಭಟಿಸಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಸಮಾಜದ ಸ್ಥಿತಿ ಗತಿ ಕುರಿತು ಮನವರಿಕೆ ಮಾಡಿದಾಗ ಸರ್ಕಾರ 2 ಸಿ ಹಾಗೂ 2 ಡಿ ಪ್ರವರ್ಗ ಮಾಡಿ ಸಮಾಜವನ್ನು 3 ಬಿ ಯಿಂದ 2 ಸಿ ಸೇರ್ಪಡೆಗೆ ಸೂಚಿಸಿತು ಆದರೂ ಯಾವ ಯಾವುದೇ ಕ್ರಮ ಕೈಗೊಂಡಿಲ್ಲ
ತಾವುಗಳು ಕರ್ನಾಟಕ ಸರ್ಕಾರದ ಗೇಜೇಟನಲ್ಲಿ ಸೇರ್ಪಡೆ ಗೊಳಿಸಿ ಪ್ರವರ್ಗ 2 ಎ ‌ಮೀಸಲಾತಿಯನ್ನು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಲು ಸರ್ಕಾರ ಆದಿ ಬಣಜಿಗ ಸಮಾಜಕ್ಕೆ ಸೂಕ್ತ ನ್ಯಾಯ ಒದಗಿಸಬೇಕೆಂದು ಗವನಳ್ಳಿ ಯವರು ಸರ್ಕಾರಕ್ಕೆ ಒತ್ತಾಯ ಪಡಿಸಿದ್ದಾರೆ ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದರೆ ಸಮಾಜವು ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು

LEAVE A REPLY

Please enter your comment!
Please enter your name here