• ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ನಿರ್ಮಾಣ ಕುಸಿದು ಇದುವರೆಗೆ ಆರು ಅಮಾಯಕ ವಲಸೆ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಹಲವು ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನೂ ಹಲವು ಜೀವಗಳು ಕಟ್ಟಡ ಅವಶೇಷಗಳಡಿಯಲ್ಲಿ ಸಿಲುಕಿದ್ದು ಕಾರ್ಯಚರಣೆ ಈಗಲೂ ಮುಂದುವರೆದಿದೆ. ಆದರೆ ಈ ಬಡ‌ ಕಾರ್ಮಿರನ್ನು ನಮ್ಮ ರಾಜ್ಯದ ಭ್ರಷ್ಟ ರಾಜಕೀಯ ಹಾಗೂ ಅಧಿಕಾರ ಶಾಹಿ ಅಕ್ಷರಶಃ ಕೊಲೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಫೆಡರೇಶನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಫೆಡರೇಶನ್ ಹಾಗೂ ಸಿಐಟಿಯು ಹಾಗೂ ಮಹಿಳಾ ಸಂಘಟನೆಗಳ ಜಂಟಿ ರಾಜ್ಯ ಮಟ್ಟದ ನಿಯೋಗ ಘಟನಾ ಸ್ಥಳಕ್ಕೆ ಇಡೀ ದಿನ ಬೇಟಿ ಮಾಡಿ ಸ್ಥಳದಲ್ಲಿ ಇದ್ದ ಹಿರಿಯ ಬಿಬಿಎಂಪಿ, ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಅಧಿಕಾರಗಳ ಜತೆ ಭೇಟಿ ಮಾಡಿ ಚರ್ಚಿಸಿತು. ಅಲ್ಲದೆ ಘಟನೆಯಿಂದ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ‌ ನಡುವೆ ಹೋರಾಡುತ್ತಾ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರುವ ಕಾರ್ಮಿಕರನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಭೇಟಿ ಮಾಡಿ ಅವರ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಿತು.

ಅಲ್ಲಿ ನಿರ್ಮಾಣವಾಗುತ್ತಿರುವುದು ಅನಧಿಕೃತ ನಿರ್ಮಾಣವಾಗಿದೆ ಕೇವಲ ಮೂರು‌ ಮಹಡಿಗಳ‌ ಸಾಮಾರ್ಥ್ಯ ಹೊಂದಿರುವ ತಳಹದಿಯ ಮೇಲೆ ಆರು ಮಹಡಿಗಳನ್ನು ನಿರ್ಮಿಸಿರುವುದು ಹಾಗೂ ಅದಕ್ಕೆ ಬೇಕಾದ ಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳನ್ನು ಬಳಸದೇ ನಿರ್ಮಾಣ ಮಾಡುತ್ತಿದ್ದುದ್ದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಮತ್ತೊಂದು ಕಡೆ ಈ ಕುಸಿತ ಕಂಡ ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳೂ ಮೂರುಬಾರಿ ನೋಟೀಸ್ ನೀಡಿದ್ದರೂ ಅದಕ್ಕೆ ಅವರು ಕ್ಯಾರೆ ಅನ್ನದೆ ಕಳಪೆ ನಿರ್ಮಾಣವನ್ನು ಮುಂದುವರೆಸಿದ್ದು ಈ ಘಟನೆಗೆ ಪ್ರಮುಖ ಕಾರಣವಾಗಿದೆ.

ಇದಲ್ಲದೆ ಬಿಬಿಎಂಪಿಯಲ್ಲಿ ಮತ್ತು ಬೆಂಗಳೂರಿನ ಹೊರ ಪ್ರದೇಶಗಳಲ್ಲಿ ಅನಧಿಕೃತ ಸಾವಿರಾರು ಕಟ್ಟಡ ನಿರ್ಮಾಣಗಳು ನಡೆಯುತ್ತಿವೆ‌ ಇಂತಹ ಅನಧಿಕೃತ ಬಡಾವಣೆಗಳ ವಾರಸುದಾರರು ರಾಜ್ಯವನ್ನು ಆಳುತ್ತಿರುವ ಆಳಿರುವ ಕಾಂಗ್ರೆಸ್ -ಬಿಜೆಪಿ ಹಾಗು ಜೆಡಿಎಸ್ ಪಕ್ಷಕ್ಕೆ ಸೇರಿದ ಭ್ರಷ್ಟ ರಿಯಲ್ ಎಸ್ಟೇಟ್ ಮಾಪಿಯಾ ಮತ್ತು ರಾಜಕೀಯ ವ್ಯಕ್ತಿಗಳು ಹಾಗೂ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿರುವ ಅಧಿಕಾರಶಾಹಿಗಳು ಬೆಂಬಲವೂ ಇದೆ ಇಂತಹ ಭ್ರಷ್ಟ ರಾಜಕೀಯ ಹಾಗೂ ಅಧಿಕಾರ ಶಾಹಿ ವ್ಯವಸ್ಥೆಗೆ ಈಗ ಆರು ಜನ ಅಮಾಯಕ ಜೀವಗಳು ಬಲಿಯಾಗಿವೆ ಮತ್ತಷ್ಟು ಜೀವಗಳು ಸಾವು ಬದುಕಿನ ನಡುವೆ ಹೋರಾಡುತ್ತಿವೆ ಇದಕ್ಕೆ ಕಡಿವಾಣ ಹಾಕುವ ರಾಜಕೀಯ ಇಚ್ಚಾಶಕ್ತಿಯನ್ನು ಹಾಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಪ್ರದರ್ಶಿಸದಿರುವುದು ಅತ್ಯಂತ ಬೇಸರ ಸಂಗತಿಯಾಗಿದೆ.

ಈ ನಿರ್ಮಾಣ ಕುಸಿತದಲ್ಲಿ ಸಾವನಪ್ಪಿರುವ ಅಮಾಯಕ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ನೀಡಬೇಕು ತೀವ್ರವಾಗಿ ಗಾಯಗೊಂಡವರಿಗೆ ಕನಿಷ್ಟ10 ಲಕ್ಷ ಹಾಗೂ ಅವರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸರ್ಕಾರ ಮುಂದಾಗಬೇಕು ಮತ್ತು ಈ ಸಾವುಗಳಿಗೆ ಕಾರಣವಾದ ಮಾಲೀಕ,ಗುತ್ತಿಗೆ ದಾರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವುದು ಅಗತ್ಯವಿದೆ.

ಇಂತಹ ಘಟನೆಗಳು ಸಂಭವಿಸಿದಾಗ ಕೇವಲ ಕೆಲವು ಅಧಿಕಾರಿಗಳನ್ನು ಬಲಿಪಶು ಮಾಡಿ ಉಳಿದಂತೆ ಈ ಭ್ರಷ್ಟ ವ್ಯವಸ್ಥೆಯನ್ನು ಹಾಗೆ ಸಂರಕ್ಷಿಸುವ ಕೆಲಸ ಸಾಗುತ್ತಿದೆ ಇದು ವಾಸ್ತವ. ಆದರೆ ಈ ಅನಧಿಕೃತ ನಿರ್ಮಾಣಗಳನ್ನು ಸಂಪೂರ್ಣ ‌ನಿಯಂತ್ರಣಕ್ಕೆ ತರಬೇಕು ಮತ್ತು ಅಂತಹ ಸ್ಥಳಗಳಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲದೆ ಅಮಾನವೀಯವಾಗಿ ಹಾಗೂ ಗುಲಾಮರಂತೆ ಜೀವನ‌ಸಾಗಿಸುತ್ತಿರುವ ಶ್ರಮಜೀವಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸುರಕ್ಷತೆ ಒದಗಿಸುವುದು ಮಾಲೀಕರು ಹಾಗೂ ಸಂಬಂದಿಸಿದ ಇಲಾಖೆಗಳನ್ನು ಬಾಧ್ಯಸ್ಥರನ್ನಾಗಿಸಬೇಕು ಹಾಗೂ ವಲಸೆ ಕಾರ್ಮಿಕರು ಸೇರಿ ನೈಜ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸದಸ್ಯತ್ವ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ,ಸಿಐಟಿಯು ಆಗ್ರಹಪಡಿಸಿದೆ.

ಘಟನಾ ಸ್ಥಳಕ್ಕೆ ,ಆಸ್ಪತ್ರೆಗೆ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಗೋಪಾಲಗೌಡ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಕಟ್ಟಡ ಕಾರ್ಮಕ ಸಂಘಟನೆ ಬೆಂಗಳೂರು ಉತ್ತರ ಜಿಲ್ಲಾ ಮುಖಂಡರಾದ ಹರೀಶಕುಮಾರ್, ನಂಜೇಗೌಡ,ರಮೇಶ್,ಹನುಮಂತರಾವ್ ಹವಾಲ್ದಾರ್, ಬಿ.ವಿ.ವಿನಾಯಕ,ಮುರುಗನ್,ರಾಮಚಂದ್ರ, ಮಂಗಳ,ವೆಂಕಟೇಶ, ಈಶ್ವರ ಸೇರಿದಂತೆ ಇತರೆ ನಿರ್ಮಾಣ. ವಲಯದ ಕಾರ್ಮಿಕ ಮುಖಂಡರು ಬೇಟಿ ನೀಡಿದ್ದರು.

  • ? ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ನಿರ್ಮಾಣ ಕುಸಿದು ಇದುವರೆಗೆ ಆರು ಅಮಾಯಕ ವಲಸೆ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಹಲವು ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇನ್ನೂ ಹಲವು ಜೀವಗಳು ಕಟ್ಟಡ ಅವಶೇಷಗಳಡಿಯಲ್ಲಿ ಸಿಲುಕಿದ್ದು ಕಾರ್ಯಚರಣೆ ಈಗಲೂ ಮುಂದುವರೆದಿದೆ. ಆದರೆ ಈ ಬಡ‌ ಕಾರ್ಮಿರನ್ನು ನಮ್ಮ ರಾಜ್ಯದ ಭ್ರಷ್ಟ ರಾಜಕೀಯ ಹಾಗೂ ಅಧಿಕಾರ ಶಾಹಿ ಅಕ್ಷರಶಃ ಕೊಲೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಫೆಡರೇಶನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇಂದು ಫೆಡರೇಶನ್ ಹಾಗೂ ಸಿಐಟಿಯು ಹಾಗೂ ಮಹಿಳಾ ಸಂಘಟನೆಗಳ ಜಂಟಿ ರಾಜ್ಯ ಮಟ್ಟದ ನಿಯೋಗ ಘಟನಾ ಸ್ಥಳಕ್ಕೆ ಇಡೀ ದಿನ ಬೇಟಿ ಮಾಡಿ ಸ್ಥಳದಲ್ಲಿ ಇದ್ದ ಹಿರಿಯ ಬಿಬಿಎಂಪಿ, ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಅಧಿಕಾರಗಳ ಜತೆ ಭೇಟಿ ಮಾಡಿ ಚರ್ಚಿಸಿತು. ಅಲ್ಲದೆ ಘಟನೆಯಿಂದ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ‌ ನಡುವೆ ಹೋರಾಡುತ್ತಾ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರುವ ಕಾರ್ಮಿಕರನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಭೇಟಿ ಮಾಡಿ ಅವರ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಿತು.

ಅಲ್ಲಿ ನಿರ್ಮಾಣವಾಗುತ್ತಿರುವುದು ಅನಧಿಕೃತ ನಿರ್ಮಾಣವಾಗಿದೆ ಕೇವಲ ಮೂರು‌ ಮಹಡಿಗಳ‌ ಸಾಮಾರ್ಥ್ಯ ಹೊಂದಿರುವ ತಳಹದಿಯ ಮೇಲೆ ಆರು ಮಹಡಿಗಳನ್ನು ನಿರ್ಮಿಸಿರುವುದು ಹಾಗೂ ಅದಕ್ಕೆ ಬೇಕಾದ ಗುಣಮಟ್ಟದ ನಿರ್ಮಾಣ ಸಾಮಾಗ್ರಿಗಳನ್ನು ಬಳಸದೇ ನಿರ್ಮಾಣ ಮಾಡುತ್ತಿದ್ದುದ್ದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಮತ್ತೊಂದು ಕಡೆ ಈ ಕುಸಿತ ಕಂಡ ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳೂ ಮೂರುಬಾರಿ ನೋಟೀಸ್ ನೀಡಿದ್ದರೂ ಅದಕ್ಕೆ ಅವರು ಕ್ಯಾರೆ ಅನ್ನದೆ ಕಳಪೆ ನಿರ್ಮಾಣವನ್ನು ಮುಂದುವರೆಸಿದ್ದು ಈ ಘಟನೆಗೆ ಪ್ರಮುಖ ಕಾರಣವಾಗಿದೆ.

ಇದಲ್ಲದೆ ಬಿಬಿಎಂಪಿಯಲ್ಲಿ ಮತ್ತು ಬೆಂಗಳೂರಿನ ಹೊರ ಪ್ರದೇಶಗಳಲ್ಲಿ ಅನಧಿಕೃತ ಸಾವಿರಾರು ಕಟ್ಟಡ ನಿರ್ಮಾಣಗಳು ನಡೆಯುತ್ತಿವೆ‌ ಇಂತಹ ಅನಧಿಕೃತ ಬಡಾವಣೆಗಳ ವಾರಸುದಾರರು ರಾಜ್ಯವನ್ನು ಆಳುತ್ತಿರುವ ಆಳಿರುವ ಕಾಂಗ್ರೆಸ್ -ಬಿಜೆಪಿ ಹಾಗು ಜೆಡಿಎಸ್ ಪಕ್ಷಕ್ಕೆ ಸೇರಿದ ಭ್ರಷ್ಟ ರಿಯಲ್ ಎಸ್ಟೇಟ್ ಮಾಪಿಯಾ ಮತ್ತು ರಾಜಕೀಯ ವ್ಯಕ್ತಿಗಳು ಹಾಗೂ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿರುವ ಅಧಿಕಾರಶಾಹಿಗಳು ಬೆಂಬಲವೂ ಇದೆ ಇಂತಹ ಭ್ರಷ್ಟ ರಾಜಕೀಯ ಹಾಗೂ ಅಧಿಕಾರ ಶಾಹಿ ವ್ಯವಸ್ಥೆಗೆ ಈಗ ಆರು ಜನ ಅಮಾಯಕ ಜೀವಗಳು ಬಲಿಯಾಗಿವೆ ಮತ್ತಷ್ಟು ಜೀವಗಳು ಸಾವು ಬದುಕಿನ ನಡುವೆ ಹೋರಾಡುತ್ತಿವೆ ಇದಕ್ಕೆ ಕಡಿವಾಣ ಹಾಕುವ ರಾಜಕೀಯ ಇಚ್ಚಾಶಕ್ತಿಯನ್ನು ಹಾಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಪ್ರದರ್ಶಿಸದಿರುವುದು ಅತ್ಯಂತ ಬೇಸರ ಸಂಗತಿಯಾಗಿದೆ.

ಈ ನಿರ್ಮಾಣ ಕುಸಿತದಲ್ಲಿ ಸಾವನಪ್ಪಿರುವ ಅಮಾಯಕ ಕುಟುಂಬಗಳಿಗೆ ಕನಿಷ್ಟ 25 ಲಕ್ಷ ಪರಿಹಾರ ನೀಡಬೇಕು ತೀವ್ರವಾಗಿ ಗಾಯಗೊಂಡವರಿಗೆ ಕನಿಷ್ಟ10 ಲಕ್ಷ ಹಾಗೂ ಅವರ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸರ್ಕಾರ ಮುಂದಾಗಬೇಕು ಮತ್ತು ಈ ಸಾವುಗಳಿಗೆ ಕಾರಣವಾದ ಮಾಲೀಕ,ಗುತ್ತಿಗೆ ದಾರರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವುದು ಅಗತ್ಯವಿದೆ.

ಇಂತಹ ಘಟನೆಗಳು ಸಂಭವಿಸಿದಾಗ ಕೇವಲ ಕೆಲವು ಅಧಿಕಾರಿಗಳನ್ನು ಬಲಿಪಶು ಮಾಡಿ ಉಳಿದಂತೆ ಈ ಭ್ರಷ್ಟ ವ್ಯವಸ್ಥೆಯನ್ನು ಹಾಗೆ ಸಂರಕ್ಷಿಸುವ ಕೆಲಸ ಸಾಗುತ್ತಿದೆ ಇದು ವಾಸ್ತವ. ಆದರೆ ಈ ಅನಧಿಕೃತ ನಿರ್ಮಾಣಗಳನ್ನು ಸಂಪೂರ್ಣ ‌ನಿಯಂತ್ರಣಕ್ಕೆ ತರಬೇಕು ಮತ್ತು ಅಂತಹ ಸ್ಥಳಗಳಲ್ಲಿ ಯಾವುದೇ ಮೂಲ ಸೌಲಭ್ಯಗಳು ಇಲ್ಲದೆ ಅಮಾನವೀಯವಾಗಿ ಹಾಗೂ ಗುಲಾಮರಂತೆ ಜೀವನ‌ಸಾಗಿಸುತ್ತಿರುವ ಶ್ರಮಜೀವಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸುರಕ್ಷತೆ ಒದಗಿಸುವುದು ಮಾಲೀಕರು ಹಾಗೂ ಸಂಬಂದಿಸಿದ ಇಲಾಖೆಗಳನ್ನು ಬಾಧ್ಯಸ್ಥರನ್ನಾಗಿಸಬೇಕು ಹಾಗೂ ವಲಸೆ ಕಾರ್ಮಿಕರು ಸೇರಿ ನೈಜ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ಸದಸ್ಯತ್ವ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಖಾತ್ರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ,ಸಿಐಟಿಯು ಆಗ್ರಹಪಡಿಸಿದೆ.

ಘಟನಾ ಸ್ಥಳಕ್ಕೆ ,ಆಸ್ಪತ್ರೆಗೆ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್.ಎನ್ ಗೋಪಾಲಗೌಡ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಕಟ್ಟಡ ಕಾರ್ಮಕ ಸಂಘಟನೆ ಬೆಂಗಳೂರು ಉತ್ತರ ಜಿಲ್ಲಾ ಮುಖಂಡರಾದ ಹರೀಶಕುಮಾರ್, ನಂಜೇಗೌಡ,ರಮೇಶ್,ಹನುಮಂತರಾವ್ ಹವಾಲ್ದಾರ್, ಬಿ.ವಿ.ವಿನಾಯಕ,ಮುರುಗನ್,ರಾಮಚಂದ್ರ, ಮಂಗಳ,ವೆಂಕಟೇಶ, ಈಶ್ವರ ಸೇರಿದಂತೆ ಇತರೆ ನಿರ್ಮಾಣ. ವಲಯದ ಕಾರ್ಮಿಕ ಮುಖಂಡರು ಬೇಟಿ ನೀಡಿದ್ದರು.

LEAVE A REPLY

Please enter your comment!
Please enter your name here