ವಿಜಯಪುರ:ಬಸವನ ಬಾಗೇವಾಡಿ ತಾಲೂಕು ಗ್ರಾಮ ಪಂಚಾಯತ್ ದಲ್ಲಿ ಹಲವಾರು ಕೆಲಸ ಕಾಮಗಾರಿಗಳು ಜಾರಿಗೆ ಬರುತ್ತಿಲ್ಲ, ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಹೊಲಸು ಗಬ್ಬೆದ್ದು ನಾರುತಿದ್ದಾವೆ, ಸ್ವಚ್ಛತೆಗೆ ತೆಗೆದುಕೊಂಡು ಬಂದ ಕಸ ವಿಲೇವಾರಿ ಗಾಡಿ ನಿಂತಲ್ಲೇ ಕೆಟ್ಟಿದೆ, ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಬುಡದಲ್ಲಿ ತಲೆ ಎತ್ತರಕ್ಕೆ ಕಾಂಗ್ರೆಸ್ ಕಸ ಹುಲ್ಲು ಬೆಳೆದು ನಿಂತಿದೆ, ಹಾಗೆ ಚರಂಡಿ ನೀರು ಒಡೆದ ಪೈಪಿನ ಮೂಲಕ ಶುದ್ಧ ನೀರಿನಲ್ಲಿ ಹೋದರೂ ಹೋಗಬಹುದು, ಅಭಿವೃದ್ಧಿ ಕೆಲಸ ಸಂಪೂರ್ಣ ಸ್ಥಗಿತವಾಗಿದ್ದವೇ, ಒಂದು ಗ್ರಾಮ ಸಭೆ ಕರೆದು ಯಾವುದೇ ಕ್ರಿಯಾಯೋಜನೆ ಮಾಡುತ್ತಿಲ್ಲ, ಅಕ್ಟೋಬರ್ 02 ರಂದು ವಿಶೇಷ ಗ್ರಾಮ ಸಭೆಯಲ್ಲಿ pdo ಇಲ್ಲದ ಕಾರಣ ಯಾವುದೇ ಕ್ರಿಯಾಯೋಜನೆ ಆಗಿಲ್ಲ, pdo ಜಿ ಜಿ ಜೋಶಿ ಅವರು ಸುಮಾರು 8 ತಿಂಗಳು ಹಿಂದೆ ನಮ್ಮ ಪಂಚಾಯತ್ ಗೆ ಬಂದಿದ್ದು ಮನಸೋ ಇಚ್ಛೆ ಕೆಲಸ ಮಾಡುವರು, ಕೆಲಸ ಮಾಡ್ರಿ ಅಂದರೆ ನಾನು ಸುಮ್ನೆ ಇಲ್ಲಿಗೆ ಬಂದಿದ್ದೇನೆ, ಚುನಾವಣೆ ಮುಗಿದ ಬಳಿಕ ನಾನು ಹೋಗುವೆನು ಎಂದು ಹೇಳುತ್ತಿದ್ದರು, ಚುನಾವಣೆ ಮುಗಿದ ಬಳಿಕ ಸಾಮಾನ್ಯ ಸಭೆಯಲ್ಲಿ ಠರಾವು ಬರೆದು ಕೆಲಸ ಮಾಡುವೆ ಎಂದು ಹೇಳಿದ್ದರು ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಎಲ್ಲಾ ಕಾರ್ಯಗಳಿಗೆ ಅನುಮೋದನೆ ನೀಡಿದ್ದರು ಕೆಲಸ ಕಾರ್ಯ ಮಾಡಲಿಲ್ಲ, ಒಂದು ತಿಂಗಳು ಹಿಂದೆ ಏಕಾ ಏಕಿ ಒಂದು ತಿಂಗಳು ರಜೆ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು,
ಇದರಿಂದ ಜನಪ್ರತಿನಿದಿನಗಳ ಮಾತು ಕೇಳುವರು ಯಾರುವಿಲ್ಲ, karyangavu ಶಾಸಕಾಂಗಕ್ಕೆ ಜವಾಬ್ದಾರಿ ಆಗಬೇಕು ಆದ್ರೆ, ಈ ಕುರಿತು ಜಿಲ್ಲಾ ಪಂಚಾಯತ ಸಿಇಓ, ತಾಲೂಕು ಪಂಚಾಯತ್ AEO ಅವರಿಗೆ ಮಾಹಿತಿ ನಮ್ಮ ಅಧ್ಯಕ್ಷರು ಲಿಖಿತ ಮನವಿ ಮಾಡಿದ್ದರೂ ಅಧಿಕಾರಿಗಳು ಏನೂ ಕ್ರಮ ತೆಗೆದುಕೊಂಡರು ಏನೂ ಗೊತ್ತಾಗುತ್ತಿಲ್ಲ, ಅಧಿಕಾರಿಗಳು ಮನಸೋ ಇಚ್ಛೆ ಕೆಲಸ, ಕರ್ತವ್ಯ ನಿರ್ಲಕ್ಷ್ಯ, ಅಸಡ್ಡೆ, ಬ್ಲಾಕ್ ಮೆಲ್ ಮಾಡುವುದು ನಾನು ಹೋಗುತ್ತೇನೆ ಬೇರೆ pdo ರನ್ನು ತೆಗೆದುಕೊಂಡು ಬರ್ರಿ ಅನ್ನುವ pdo ಗ್ರಾಮ ಅಭಿವೃದ್ಧಿ ಹೇಗೆ ಮಾಡುವರು, ಸದಸ್ಯರ ಹಾಗೂ ಉಪಾಧ್ಯಕ್ಷರು ಮತ್ತು ಅಧ್ಯಕ್ಷರ ಮಾತು ಕೇಳುವರು ಯಾರು, ಜನರಿಗೆ ಏನೆಂದು ಉತ್ತರ ಕೊಡುವುದು ಯಕ್ಷ ಪ್ರಶ್ನೆ ಆಗಿದೆ, ಕಾರಣ ಸಂಬಂಧ ಪಟ್ಟ ಸಿಇಓ AEO ಸೂಕ್ತ ಕಾನೂನು ಕ್ರಮ ಜರುಗಿಸಬೇಕು,