ವಿಜಯಪುರ:ನಡೆದಾಡುವ ದೇವರೆಂದು ಹೆಸರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ರೂವಾರಿಗಳು, ಪರಮ ಪೂಜ್ಯ ಶ್ರೀ ಸಿದ್ದೇಶ್ವರ್ ಸ್ವಾಮೀಜಿಗಳು, ಪ್ರಕ್ರತಿ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಅತಿ ಸರಳವಾಗಿ ನಮಗೆ ಬೋಧಿಸಿದ್ದಾರೆ. ಅವರ ಗೌರವಾರ್ಥವಾಗಿ, ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1495 ಎಕರೆ ಅರಣ್ಯ ಪ್ರದೇಶವನ್ನು ‘ಶ್ರೀ ಸಿದ್ದೇಶ್ವರ ಶ್ರೀ ಜೈವೈವಿಧ್ಯ ಪಾರಂಪರಿಕ ತಾಣ’ವೆಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಜನವರಿ 2, 2025ರಂದು ಪರಮಪೂಜ್ಯ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ 2ನೇ ಪುಣ್ಯಸ್ಮರಣೆಯಂದು ನಾಡಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ತಾಣದ ನಾಮಫಲಕವನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದಾರೆ ಎಂದು ಅರಣ್ಯಸಚಿವ ಶ್ರೀ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅವರು