ವಿಜಯಪುರ:ಕರ್ನಾಟಕ ಕಾಂಗ್ರೆಸ್ ಪಕ್ಷವು ವಿಧಾಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಗಣತಿ ವರದಿ ಜಾರಿಗೆ ತರುವುದಾಗಿ ತನ್ನ ಪ್ರನಾಳಿಕೆಯಲ್ಲಿ ಹೇಳಿಕೊಂಡು ಚುನಾವಣೆ ಪ್ರಚಾರಕ್ಕೆ ಇಳಿದದ್ದು ಎಲ್ಲರಿಗೂ ಗೊತ್ತಿರುವ ವಿಚಾರ.ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ ಪಕ್ಷವೆಂದು ಜನರು ಜಾತಿಗಣತಿಯು ಜಾರಿಯಾದರೆ ಎಲ್ಲಾ ಜಾತಿವರ್ಗದ ಆರ್ಥಿಕ, ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುತ್ತದೆಂದು ಎಲ್ಲ ವರ್ಗದ ಶ್ರಮಿಕ,ಹಿಂದುಳಿದ,ಅಲ್ಪಸಂಖ್ಯಾತರು ಅಷ್ಟೇ ಅಲ್ಲಾ ಇತರೆ ಮೇಲ್ವರ್ಗದ ಆರ್ಥಿಕ, ಶೈಕ್ಷಣಿಕ ಹಿಂದುಳಿದವರೂಕೂಡ ಈ ಭರವಸೆಗಾಗಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮತನೀಡಿ ನಿಶ್ಚಲಬಹುಮತ ಗಳಿಸಿಕೊಟ್ಟಿದ್ದಾರೆ.ಇದರಿಂದ ರಾಜ್ಯದಲ್ಲಿ ಸುರಕ್ಷ ಸರ್ಕಾರ ಅಧಿಕಾರದಲ್ಲಿದೆ ಆದುದರಿಂದ ಚುನಾವಣೆಸಂದರ್ಭದಲ್ಲಿ ಹೇಳಿದಂತೆ ಈಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಜಾರಿಮಾಡಬೇಕಾಗಿರುವುದು ಆಡಳಿತಪಕ್ಷದ ಜವಾಬ್ದಾರಿಯಾಗಿದೆ.ಆದರೆ ಕೆಲವೇ ಕೆಲವು ಪಟ್ಟಭದ್ರ ಹಿತಾಶಕ್ತಿಗಳ ಸ್ವಹಿತಾಶಕ್ತಿಯ ಕೆಲವರು ಅಡ್ಡಿಪಡಿಸುವ ಭಯವನ್ನಿಟ್ಟುಕೊಂಡು ವರದಿ ಜಾರಿಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನೀಯ.
ಯಾವುದೇ ಬಲಿಷ್ಟ,ಕುತಂತ್ರ,ಜನಹಿತಬಯಸದ ದುಷ್ಟಶಕ್ತಿಗೆ ಮನಿಯದೆ 136,ಸದಸ್ಯಬಲದ ನಿಶ್ಚಲಬಹುಮತದ ಸರ್ಕಾರ ಕೂಡಲೇ ವರದಿ ಜಾರಿ ಮಾಡಬೇಕೆಂದು ರಾಜ್ಯದಾದ್ಯಂತ ಜನರ ಹಕ್ಕೊತ್ತಾಯ ವಾಗಿದೆ ಅದರ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಜನಸಮುದಾಯ ಸಭೆಸೇರಿ ಒಮ್ಮತದಿಂದ ಜಿಲ್ಲಾಧಿಕಾರಿಬಳಿ ತೆರಳಿ ಮನವಿ ಅರ್ಪಿಸುವುದರ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.
ಜಾತಿ ಗಣತಿ ವರದಿಯನ್ನು ಯಾರ ಒತ್ತಡಕ್ಕೂ ಒಳಗಾಗದೇ ಮುಂಬರುವ ಸಚಿವ ಸಂಪುಟ ಸಭೆಯಲ್ಲಿಯೇ ಮಂಡಿಸಿ ಬಹಿರಂಗಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ವಿಜಯಪುರ ಜಿಲ್ಲಾ ಅಹಿಂದ ವರ್ಗಗಳ ಒಕ್ಕೂಟದ ವತಿಯಿಂದ ಹಕ್ಕೊತ್ತಾಯ ಪತ್ರ ನೀಡಲಾಯಿತು. ಈ ನಿಯೋಗದಲ್ಲಿ ಸೋಮನಾಥ ಕಳ್ಳಿಮನಿ, ಎಸ್ಎಮ್ ಪಾಟೀಲ್ ಗನಿಯಾರ್, ದಾದಾಪೀರ್ ಬಡ್ಕಲ,ಮಲ್ಲು ಬಿದರಿ,ಕಾಮೇಶ ಉಕ್ಕಲಿ,ಸಂಜು ಕಂಬೋಗಿ ,ಅಕ್ರಮ್ ಮಾಶಾಳಕರ್, ಬೀರಪ್ಪ ಜುಮನಾಳ,ಸಚಿತಾ ವಗ್ಗರ್, ನಿರ್ಮಲ ಹೊಸಮನಿ, ಮಲ್ಲು ಕಾಮನಕೇರಿ , ಭೀಮಣ್ಣ ಹಳೆಮನೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Home ಸಾರ್ವಜನಿಕ ಧ್ವನಿ ಆರ್ಥಿಕ,ಸಾಮಾಜಿಕ,ಶೈಕ್ಷಣಿಕ ವರದಿ ಜಾರಿಗಾಗಿ ಹಕ್ಕೊತ್ತಾಯ ಪತ್ರ ಡಿ.ಸಿ.ಮುಖಾಂತರ ಸರ್ಕಾರಕ್ಕೆ ಸಲ್ಲಿಕೆ