ವಿಜಯನಗರ:ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ಎಂ.ಪಿ.ಪ್ರಕಾಶ್ ನಗರಕ್ಕೆ ಹೋಗುವ ರಸ್ತೆಗೆ ಸಾಹಸಸಿಂಹ ಡಾ.ವಿಷ್ಣುವರ್ಧನ ರಸ್ತೆ ಎಂದು ನಾಮಕರಣ ಉದ್ಘಾಟಿಸಿದ ನಗರಸಭೆ ಸದಸ್ಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ತಾರಳ್ಳಿ ಜಂಬುನಾಥ ರವರು ವಿಷ್ಣವರ್ಧನ್ ರವರ ಅಭಿಮಾನಿಗಳಲ್ಲಿ ಸಂತಸ ಇಮ್ಮಡಿ ಗೊಳಿಸಿದರು.
ಹೊಸಪೇಟೆ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ದಿನಪತ್ರಿಕೆ ವಿತರಕರು ಡಾ.ವಿಷ್ಣುವರ್ಧನ ಸೇನಾ ಸಮಿತಿ ಪದಾಧಿಕಾರಿಗಳು, ಅಭಿಮಾನಿಗಳು ಬುಧವಾರ ಸಾಹಸ ಸಿಂಹ ಡಾ.ವಿಷ್ಣುವರ್ಧನ ಅವರ 74ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ, ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಸಂಭ್ರಮಿಸಿದರು.
ಡಾ.ವಿಷ್ಣುವರ್ಧನ ಅವರ ಅಪಾರ ಅಭಿಮಾನಿಗಳ ಬಹುದಿನದ ಕನಸು ಇಂದು ನನಸಾಗಿದೆ. ರಸ್ತೆಯುದ್ದಕ್ಕೂ ಇರುವ ಅಂಗಡಿ ಮುಂಗಟ್ಟುಗಳ ಮಾಲೀಕರು ತಮ್ಮ ಮಳಿಗೆಯ ನಾಮಫಲಕಗಳಲ್ಲಿ ಡಾ.ವಿಷ್ಣವರ್ದನ್
ರಸ್ತೆ ಎಂದು ನಮೂದಿಸಿಕೊಂಡು ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ತಾರನಹಳ್ಳಿ ಮಂಜುನಾಥ್ ರವರು ಸಲಹೆ ನೀಡಿದರು.

ಡಾಕ್ಟರ್ ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ಬಿ.ಪಂಪಾಪತಿ ಮಾತನಾಡಿ, ಜಿಲ್ಲೆಯ
ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ನಗರಸಭೆಯಲ್ಲಿ ನಗರದ ಆನಂತಶಯನಗುಡಿಯಿಂದ ಎಂ.ಪಿ.ಪ್ರಕಾಶನಗರದ ಮೂಲಕ ಬಳ್ಳಾರಿ ರಸ್ತೆ ಸೇರುವವರೆಗಿನ ಮುಖ್ಯರಸ್ತೆಗೆ ಡಾ.ವಿಷ್ಣುವರ್ಧನ ರಸ್ತೆ ನಾಮಕರಣಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಡಾ.ವಿಷ್ಣುವರ್ಧನ ಹುಟ್ಟುಹಬ್ಬದಂದೆ ರಸ್ತೆ ಎಂದು ನಾಮಫಲಕ ನೆಟ್ಟು ಉದ್ಘಾಟನೆ ಮಾಡಿರುವುದು ಅಭಿಮಾನಿಗಳಲ್ಲಿ ಹರ್ಷ ತಂದಿದೆ. ಕನ್ನಡದ ಹಿರಿಯ ಹಾಗೂ ಶಿಸ್ತಿನ ಸಿಪಾಯಿ ಹೆಸರನ್ನು ನಗರದ ರಸ್ತೆ ವೃತ್ತಕ್ಕೆ ಇಡಲು ಅವಕಾಶ ಕಲ್ಪಿಸಿದ ನಗರಸಭೆ ಸದಸ್ಯರಿಗೆ ಹಾಗೂ ಜಿಲ್ಲಾಡಳಿತಕ್ಕೆ ಅಭಿಮಾನಿಗಳು ಕೃತಜ್ಞರಾಗಿದ್ದೇವೆ ಎಂದರು.
ರಸ್ತೆ ಹಾಗೂ ವೃತ್ತವೊಂದಕ್ಕೆ ಕನ್ನಡದ ಮೇರುನಟ ಡಾ.ವಿಷ್ಣುವರ್ಧನ ಅವರ ಹೆಸರು ನಾಮಕರಣ ಮಾಡಬೇಕೆಂದು ಅನೇಕ ವರ್ಷಗಳಿಂದ ನಗರಸಭೆಗೆ ಮನವಿ ಸಲ್ಲಿಸುತ್ತಾ ಬಂದಿದ್ದೆವು. ಕಳೆದ ನಗರಸಭೆ ಸದಸ್ಯೆ ಕಮಲಮ್ಮ, ವಿಶ್ರಾಂತ ಪ್ರಾಧ್ಯಾಪಕ ಡಾ.ಚಂದ್ರಶೇಖರ ಶಾಸ್ತಿ. ಶಾರದ ಬುಕ್‌ಸ್ಟಾಲ್ ಮಾಲೀಕರಾದ ಕೆ.ಹನುಮಂತಪ್ಪ, ಬಿ.ಚಂದ್ರಶೇಖರ್, ಶ್ರೀಕಾಂತ, ವೀರೇಶ ಇತರರು ಇದ್ದರು. ಡಾಕ್ಟರ್ ವಿಷ್ಣುವರ್ಧನ್ ಸೇನೆಯ ರಾಜ್ಯಾಧ್ಯಕ್ಷರಾದ ಸರವಣ.ಪಿ.ರವರು ನ್ಯಾಯವಾದಿ ರಮೇಶ್ ಗೌಡರವರು ಜಿಲ್ಲಾಡಳಿತಕ್ಕೆ,ಸಂಸ್ಥೆಯ ಅಧಿಕಾರಿವರ್ಗಕ್ಕೆ ಮತ್ತು ಎಲ್ಲಾ ಜನಪ್ರತಿನಿಧಿಗಳಿಗೆ ಈ ಮೂಲಕ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here