ಮೂಡಲಗಿ:ಸೆ,26-ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೂಪಕದೊಂದಿಗೆ ಮೆರವಣಿಗೆ ಹಾಗೂ ಸಿಹಿ ಹಂಚಿ ಸಂಭ್ರಮಸಿದರು. ಮುಸ್ಲಿಂ ಸಮುದಾಯಕ್ಕೆ ಈ ದಿನವು ಅತ್ಯಂತ ಮಹತ್ವದಿನ.ಪ್ರವಾದಿ ಮುಹಮ್ಮದ್ ಇಸ್ಲಾಮಿಕ್ ಕ್ಯಾಲೆಂಡರ್ ಮೂರನೆಯ ತಿಂಗಳ 12 ನೆಯ ತಾರೀಖರಂದು ಜನಸಿದರು.ಇಸ್ಲಾಂ ಧರ್ಮದ ನಂಬಿಕೆ ಪ್ರಕಾರ,ಪ್ರವಾದಿ ಕ್ರಿ ಶಕ,517 ರಲ್ಲಿ ಜನಸಿದರು. ಅದೆ ದಿನ ಮುಸಲ್ಮಾನ ಬಾಂಧವರು “ಈದ್-ಎ-ಮಿಲಾದ್” ಹಬ್ಬವನ್ನು ಅವರ ಜನ್ಮ ದಿನ ಅಂತ ಆಚರಿಸುತ್ತಾರೆ.
ಈದ್-ಎ-ಮಿಲಾದ್ ಹಬ್ಬದ ಪ್ರಯುಕ್ತ ಜಾಮೀಯಾ ಮಸೀದಿಯಲ್ಲಿ ಕಾರ್ಯಕ್ರಮ ನಡೆಯಿತು, ಮೌಲಾನ ಕೇಸರ ರಝಾ,ಹಫೀಜ ನಿಜಾಮುದ್ದೀನ ಸಿದ್ದೀಕಿ,ಮೌಲಾನ ಫಯಾಜ್,ಹಫೀಜ್ ಇರ್ಫಾನ್ ಅವರು ಪೈಗಂಬರರವರ ಬಗ್ಗೆ ಮಾತನಾಡಿದರು.
ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ್ ಪಟೇಲ,ಮಲೀಕ ಕಳ್ಳಿಮನಿ,ಅಜೀಜ ಡಾಂಗೆ,ಅನ್ವರ ನದಾಫ್,ಸಲೀಂ ಇನಾಮದಾರ,ಅಮೀನಸಾಬ ಥರಥರಿ,ದಾದು ಮುಗಟಖಾನ,ಹುಸೇನ ಥರಥರಿ, ಇಮಾಮಮಹುಸೇನ ಮುಲ್ಲಾ,ಮೆಹಬೂಬ್ ಲಾಡಖಾನ,ಶಬ್ಬೀರ ಡಾಂಗೆ,ದಸ್ತಗೀರ ನದಾಫ್,ಸಾಹೇಬ ಪೀರಜಾದೆ,ರಾಜು ಅತ್ತಾರ,ಅಲ್ತಾಪ್ ಲಾಡಖಾನ,ಮಲೀಕ ಅತ್ತಾರ,ಪುರಸಭೆ ಸದಸ್ಯರಾದ ಆದಮ್ ತಾಂಬೋಳಿ,ಅಬ್ದುಲ್ ಗಫಾರ್ ಡಾಂಗೆ ಇನ್ನು ಅನೇಕ ಮುಸ್ಲಿಮ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here