ರಾಯಚೂರು: ಕರ್ನಾಟಕ ಚಾಲಕರ ಒಕ್ಕೂಟ (ರಿ) ರಾಯಚೂರು ದಿನಾಂಕ 5.9.2024 ರಂದು ಬೆಳಿಗ್ಗೆ 8.30 ಗಂಟೆಗೆ ಮಾನವಿ ತಾಲೂಕಿನ ಕುರ್ಡಿ ಹೋಬಳಿಯ ವ್ಯಾಪ್ತಿಯಲ್ಲಿ ನಡೆದ ಲೋಯಲಾ ಶಾಲೆಯ ಮಕ್ಕಳ ಬಸ್ಸಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನೊಂದಿಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಮೃತಪಟ್ಟಿದ್ದು ಅನೇಕ ಮಕ್ಕಳು ಶಾಶ್ವತ ಅಂಗವಿಕಲತೆಯನ್ನು ಹೊಂದಿದ ಮಕ್ಕಳಿಗೆ ಸರ್ಕಾರದಿಂದ ರೂ.5.00 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದ್ದು ಆದರೆ ಕನಿಷ್ಟ ರೂ.20.00ಲಕ್ಷ ಪರಿಹಾರ ಘೋಷಣೆ ಮಾಡಬೇಕು ಮತ್ತು ಶಾಲಾ ಆಡಳಿತ ಮಂಡಳಿಯಿಂದ ಕನಿಷ್ಟ ಪ್ರತಿಯೊಬ್ಬ ಮಕ್ಕಳಿಗೆ ರೂ.10.00ಲಕ್ಷ ಪರಿಹಾರ ನೀಡಬೇಕು ಮತ್ತು ಶಾಶ್ವತ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಸರ್ಕಾರದಿಂದ ರೂ.5.00 ಲಕ್ಷ ಪರಿಹಾರ ನೀಡಿ ಶಾಲಾ ಆಡಳಿತ ಮಂಡಳಿಯಿಂದ ರೂ.5.00 ಲಕ್ಷ ಪರಿಹಾರ ನೀಡುವಂತೆ ತಾವುಗಳು ನಿರ್ದೇಶನ ಮಾಡಬೇಕೆಂದು ರಾಯಚೂರಿನ ಕರ್ನಾಟಕ ಚಾಲಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಂದುವರೆದು ಶಾಲಾ ವಾಹನವನ್ನು ನಡೆಸಲು ಕನಿಷ್ಟ 5ರಿಂದ 10ವರ್ಷ ಅನುಭವ ಹೊಂದಿದ ವಾಹನ ಚಾಲಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂದು ತಾವುಗಳು ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಪಾಲಿಸಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇರುವುದರಿಂದ ವಾಹನಗಳ ಅಪಘಾತ ಹೆಚ್ಚಾಗಿರುವುದರಿಂದ ಅವುಗಳನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ ದುರಸ್ತಿಗೊಳಿಸಲು ಕ್ರಮ ಜರುಗಿಸಲು ಕೋರಿದ್ದಾರೆ..
ಕರ್ನಾಟಕ ಸಾರಿಗೆ ಬಸ್ಸುಗಳಿಗೆ ವೇಗದ ಮಿತಿಯನ್ನು ನಿಗದಿಪಡಿಸಬೇಕೆಂದು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲು ವಿನಂತಿಸಿದ್ದಾರೆ.ಈ ಸಂದರ್ಭದಲ್ಲಿ
ರಘು ಈಟೇಕರ್,ಜಾಕೀರ್ ಹುಸೇನ್ ,ಲಕ್ಷ್ಮೀ ನಾರಾಯಣ ಶೆಟ್ಟಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಜಿಲ್ಲಾ ಉಪಾಧ್ಯಕ್ಷರು,ತಾಲೂಕ ಅಧ್ಯಕ್ಷರು,ಸಾರಧಿಗಳ,ತಾಲ್ಲೂಕ ಪ್ರಧಾನ ಕಾರ್ಯದರ್ಶಿ,ಶಾಂತಕುಮಾರ ವೈ.ಪೂಜಾರಿ ನಗರ ಉಪಾಧ್ಯಕ್ಷರು,ಅರಿಬಾಜಿ ರಾವ್ ಗೌರವಾಧ್ಯಕ್ಷರು ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here