ಕೊಪ್ಪಳ: ಮಧ್ಯರಾತ್ರಿ ತುಂಗಭದ್ರಾ ನದಿಯ ಗೇಟ್ ನಂ. 19 ರ ಚೈನ್ ಲಿಂಕ್ ಕಟ್ ಆಗಿದ್ದರ ಸುದ್ದಿ ತಿಳಿದ ತಕ್ಷಣದಲ್ಲಿ ಡ್ಯಾಮ್ ಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿದರು.
ಜಲಸಂಪನ್ಮೂಲ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ದೂರವಾಣಿ ಕರೆಯ ಮೂಲಕ ಮಾತನಾಡಿ ಗೇಟ್ ನಂ. 19 ರಿಂದಲೇ ಸರಿಸುಮಾರು 35000 ಕ್ಯೂಸೆಕ್ಸ್ ಗಿಂತಲೂ ಹೆಚ್ಚು ನೀರು ಹರಿಯುತ್ತಿದ್ದೂ ನೀರಿನ ವ್ಯರ್ಥ ಪೋಲು ತಡೆಗಟ್ಟಲು ವಿಶೇಷವಾದ ತಂಡ ಕರೆಯಿಸುವಂತೆ ಹೇಳಿದ್ದೇನೆ.
ಬಹಳ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದೂ ನದಿಯ ಅಕ್ಕ-ಪಕ್ಕ ಇರುವ ಗ್ರಾಮಗಳ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಶ್ರೀ ರಾಜಶೇಖರ್ ಹಿಟ್ನಾಳ್ ಮನವಿ ಮಾಡಿರುತ್ತಾರೆ.